

ಮೈಸೂರು: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳುತ್ತಿರುವ ಮೈಸೂರು ಜಿಲ್ಲಾಡಳಿತ, ಕರೊನಾ ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದವರನ್ನ ಹೇಗೆ ಮನವೊಲಿಸಿದೆ ಗೊತ್ತಾ?
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ಕೆಲವೆಡೆ ವ್ಯಾಕ್ಸಿನ್ ಪಡೆದುಕೊಳ್ಳುತ್ತಿಲ್ಲ. ಕೆಲವರಿಗೆ ಹಲವು ಅನುಮಾನ ಇತ್ತು. ಅವುಗಳನ್ನು ಬಗೆಹರಿಸಿದ್ದೇವೆ. ಮುಸ್ಲಿಮರಿಗೆ ಅವರ ಧರ್ಮಗುರುಗಳ ಕೈಯಲ್ಲಿ ಹೇಳಿಸಿದ್ದೇವೆ. ಕುಡುಕರಿಗೆ ಕುಡುಕರಿಂದಲೇ ಹೇಳಿಸಿದ್ದೇವೆ. ಅನುಮಾನ ಇರೋದು ಸಹಜ. ಆದ್ರೆ ಅದನ್ನು ಬಗೆಹರಿಸಿ ವಾಕ್ಸಿನ್ ಕೊಡುತ್ತಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿರಿ ದೇವರ ಪೂಜೆ ಮಾಡಿದ್ರೆ ಕರೊನಾ ನಿಯಂತ್ರಣಕ್ಕೆ ಬರುತ್ತಾ? ಕಥೆ ಹೇಳಿದ ರೋಹಿಣಿ ಸಿಂಧೂರಿ
ಬೆಂಗಳೂರಿನಿಂದ ಬರುವ ಜನರಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರಬೇಕು ಎಂದು ಸಲಹೆ ಕೊಟ್ಟಿದ್ದೆವು. ಇದನ್ನ ಆದೇಶ ಎಂದುಕೊಂಡರು. ನಾನು ಸರ್ಕಾರಕ್ಕೆ ಸಲಹೆ ಕೊಡಬಹುದು ಅಷ್ಟೆ. ಕಡ್ಡಾಯವಾಗಿ ಜಾರಿಗೆ ತನ್ನಿ ಎಂದು ಹೇಳಲು ಸಾಧ್ಯವೇ? ಚೆನ್ನಾಗಿ ಊಟ ಮಾಡಿ ಅಂತ ಸಲಹೆ ಕೊಡಬಹುದು. ಆದರೆ ಗನ್ ಹಿಡ್ಕೊಂಡು ಊಟ ಮಾಡಲೇಬೇಕು ಅಂತ ಒತ್ತಾಯ ಮಾಡೋಕೆ ಆಗುತ್ತಾ? ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಶ್ನಿಸಿದರು.