More

    ದೇವರ ಪೂಜೆ ಮಾಡಿದ್ರೆ ಕರೊನಾ ನಿಯಂತ್ರಣಕ್ಕೆ ಬರುತ್ತಾ? ಕಥೆ ಹೇಳಿದ ರೋಹಿಣಿ ಸಿಂಧೂರಿ

    ಮೈಸೂರು: ಬೆಂಗಳೂರಿನಿಂದ ಬರುವ ಜನರಿಗೆ ಕೋವಿಡ್ ಟೆಸ್ಟ್‌ ಮಾಡಿಸಿಕೊಂಡು ಬಂದರೆ ಒಳ್ಳೆಯದು ಅಂತ ಸಲಹೆ ಕೊಟ್ಟೆವು. ಆದರೆ ಅವರು ಅದನ್ನು ಆದೇಶ ಎಂದುಕೊಂಡರು. ನಾನು ಸರ್ಕಾರಕ್ಕೆ ಸಲಹೆ ಕೊಡಬಹುದು ಅಷ್ಟೆ. ಕಡ್ಡಾಯವಾಗಿ ಜಾರಿಗೆ ತನ್ನಿ ಎಂದು ಹೇಳಲು ಸಾಧ್ಯವೇ? ಚೆನ್ನಾಗಿ ಊಟ‌ ಮಾಡಿ ಅಂತ ಸಲಹೆ ಕೊಡಬಹುದು. ಆದರೆ ಗನ್‌ ಹಿಡ್ಕೊಂಡು ಊಟ ಮಾಡಲೇಬೇಕು ಅಂತ ಒತ್ತಾಯ ಮಾಡೋಕೆ ಆಗುತ್ತಾ? ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಶ್ನಿಸಿದರು.

    ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ರೋಹಿಣಿ ಸಿಂಧೂರಿ, ಮೈಸೂರು ಜಿಲ್ಲಾಡಳಿತದ ಸಲಹಾ ಸೂಚನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅದೇ ಕಾರಣಕ್ಕೆ ನಮ್ಮ ಪ್ರತ್ಯೇಕ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ. ಪ್ರತಿ ಜಿಲ್ಲೆಗಳಲ್ಲೂ ಈ ರೀತಿ ಆದೇಶ ಹೊರಡಿಸಿದರೆ ರಾಜ್ಯದ ಸ್ಥಿತಿ ಹೇಗೆ ನಿಭಾಯಿಸೋದು ಅಂತ ಅನ್ನಿಸಿರಬಹುದು. ಅದೇ ಕಾರಣಕ್ಕೆ ನನ್ನ ಆದೇಶವನ್ನು ವಾಪಸ್ ಪಡೆದಿರಬಹುದು ಎಂದರು. ಅಷ್ಟೇ ಅಲ್ಲ ಕರೊನಾ ನಿಯಂತ್ರಣ ಕುರಿತು ಕಥೆಯಂತೆ ಉದಾಹರಣೆಯನ್ನೂ ಕೊಟ್ಟರು. ಇದನ್ನೂ ಓದಿರಿ ಕೋಡಿಹಳ್ಳಿ ಚಂದ್ರಶೇಖರ್​ಗೆ ಗಡಿಪಾರು!

    ‘ಪ್ರವಾಹದಲ್ಲಿ‌ ಸಿಲುಕಿದವನನ್ನು ರಕ್ಷಿಸಲು ಹೋದಾಗ ದೇವರು ಕಾಪಾಡುತ್ತಾನೆ ಅಂತ ವ್ಯಕ್ತಿ ಹೇಳ್ತಾನೆ. ದೋಣಿಯಲ್ಲಿ ಹೋಗಿ ಕರೆದರೂ ಆತ ಬರಲ್ಲ. ಹೆಲಿಕ್ಯಾಪ್ಟರ್‌ನಲ್ಲಿ‌ ಹೋಗಿ ಕರೆದರೂ ಆತ ಬರಲಿಲ್ಲ. ಕೊನೆಗೆ ಆ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿಯೇ ಬಿಟ್ಟ’ ಎಂದ ರೋಹಿಣಿ ಸಿಂಧೂರಿ, ನಮ್ಮ‌ ಜನರಿಗೆ ಈ ಮನಸ್ಥಿತಿ ಹೋಗಬೇಕಿದೆ ಎಂದರು. ಇದನ್ನೂ ಓದಿರಿ ನಾಳೆ ನಡೆಯಬೇಕಿದ್ದ ಕೆ-ಸೆಟ್ ಎಕ್ಸಾಂ ಮುಂದೂಡಿಕೆ

    ದೇವರ ಪೂಜೆ ಮಾಡಿದ್ರೆ ಕರೊನಾ ನಿಯಂತ್ರಣಕ್ಕೆ ಬರುತ್ತೆ ಅನ್ನುವ ಮನಸ್ಥಿತಿ ಇದೆ. ನಂಜನಗೂಡು ಜಾತ್ರೆ ಮಾಡಿದ್ರೆ ಶಿವನೇ ಕರೊನಾ ಕಂಟ್ರೋಲ್ ಮಾಡ್ತಾನೆ ಅಂತಾರೆ. ಆದ್ರೆ ಆ ಪರಿಸ್ಥಿತಿ ಇಲ್ಲ. ಜನರು ಕರೊನಾ ಬಗೆಗಿನ ಭಯ ಹಾಗೂ ಪರಿಣಾಮವನ್ನು ಮರೆತಿದ್ದಾರೆ. ಈ ಬಗ್ಗೆ‌ ಜನರು ಎಚ್ಚೆತ್ತುಕೊಳ್ಳಬೇಕು. ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಿಸಲು ದೇವರೇ ದೋಣಿ ರೂಪದಲ್ಲಿ ಬಂದಿರಬಹುದು ಎಂದು ಆತ ಬಂದಿದ್ದರೆ ಬದುಕುತ್ತಿದ್ದ ಅಲ್ಲವೇ? ಹಾಗೆ ಕರೊನಾ ವಿಷಯದಲ್ಲೂ ಜನ ಜಾಗ್ರತೆ ವಹಿಸಬೇಕು ಎಂದರು.

    ರಮೇಶ್ ಜಾರಕಿಹೊಳಿ ಅಪಾರ್ಟ್​ಮೆಂಟ್​ನಲ್ಲಿದೆ ಸೀಕ್ರೆಟ್​ ಡೋರ್​! ಸ್ಫೋಟಕ ರಹಸ್ಯ ಬಯಲು

    ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

    ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ ಎಂದ ಮಗ ಶವವಾಗಿ ಪತ್ತೆ!

    ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

    ಕೋಡಿಹಳ್ಳಿ ಚಂದ್ರಶೇಖರ್​ಗೆ ಗಡಿಪಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts