

ಚಿಕ್ಕಬಳ್ಳಾಪುರ: ಆಗ ತಾನೇ ಹುಟ್ಟಿದ ಹಸುಗೂಸನ್ನು ಆಸ್ಪತ್ರೆ ಶೌಚಗೃಹದ ಕಿಟಕಿಗೆ ನೇತು ಹಾಕಿ ಕೊಂದಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಹೆತ್ತಮ್ಮನೇ ಈ ಕೃತ್ಯವೆಸಗಿದ್ದಾಳೆ ಎಂದು ಶಂಕಿಸಲಾಗಿದೆ.
ಚಿಂತಾಮಣಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳಿಗೆ ಹೆರಿಗೆ ಆಗಿತ್ತು. ಹೆಣ್ಣು ಮಗು ಜನಿಸಿತೆಂದು ಜಿಗುಪ್ಸೆಗೊಂಡ ಹೆತ್ತಮ್ಮ, ನವಜಾತ ಶಿಶುವನ್ನು ಆಸ್ಪತ್ರೆಯ ಶೌಚಗೃಹದ ಕಿಟಕಿಗೆ ನೇತು ಹಾಕಿ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡ ಮಗುವನ್ನು ಉಳಿಸಲು ವೈದ್ಯರು ಹರಸಾಹಸ ಮಾಡಿದರೂ ಬದುಕಲಿಲ್ಲ.
ಹೆಣ್ಣು ಎಂಬ ಕಾರಣಕ್ಕೆ ತಾಯಿಯೇ ಮಗುವನ್ನ ಕೊಂದಿದ್ದಾಳೆ ಎನ್ನಲಾಗಿದೆ. ಆಸ್ಪತ್ರೆಯ ಸಿಸಿ ಟಿವಿ ದೃಶ್ಯಾವಳಿಯನ್ನ ಪೊಲೀಸರು ಪರಿಶೀಲನೆ ನಡೆಸಿದ್ದು, ಕೊಲೆಗಾರರ ಪತ್ತೆಗೆ ಬಲೆಬೀಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.