Snake Bites : ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹಾವು ಕಡಿತದಿಂದ ಮೃತಪಟ್ಟಿರುವ ದುರಂತ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಮೃತಳನ್ನು ಬರ್ಲಿಪೇಟದ ದ್ವಾರಪುಡಿ ಮೌನಿಕಾ (16) ಎಂದು ಗುರುತಿಸಲಾಗಿದೆ. ಮಂಗಳವಾರ (ಮಾರ್ಚ್ 18) ಸಂಜೆ ತನ್ನ ಮನೆಯ ಹೊರಗಿನ ವರಾಂಡಾದಲ್ಲಿ ಕುರ್ಚಿಯ ಮೇಲೆ ಕುಳಿತು ತನ್ನ ಮೊಬೈಲ್ ಫೋನ್ ನೋಡುತ್ತಿದ್ದಾಗ ಕುರ್ಚಿಯ ಕೆಳಗೆ ನಾಗರಹಾವು ಇರುವುದನ್ನು ಆಕೆ ಗಮನಿಸಲಿಲ್ಲ.
ಈ ಮಧ್ಯೆ, ಮೌನಿಕಾ ಅವರ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿರುವುದು ಗೊತ್ತಾದ ತಕ್ಷಣ ಅವರ ಕುಟುಂಬ ಸದಸ್ಯರಿಗೆ ಮೌನಿಕಾ ಮಾಹಿತಿ ನೀಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೌನಿಕಾ ಮೃತಪಟ್ಟಿದ್ದಾಳೆ.
ಮೌನಿಕಾ ನೆಲ್ಲಿಮರ್ಲಾದ ಸಿಕೆಎಂಜಿಜೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದರು. ಇದೀಗ ಮಗಳ ಅಕಾಲಿಕ ಮರಣದಿಂದ ಪೋಷಕರು ಕಣ್ಣೀರಿನ ಕಡಲಲ್ಲಿ ಮುಳುಗಿದ್ದಾರೆ. ದೂರಿನ ಆಧಾರದ ಮೇಲೆ, ಗುರ್ಲಾ ಎಸ್‌ಐ ನಾರಾಯಣ ರಾವ್ ಬುಧವಾರ (ಮಾರ್ಚ್ 19) ಪ್ರಕರಣ ದಾಖಲಿಸಿದ್ದಾರೆ.
ಅಂದಹಾಗೆ ವಿಶ್ವದಲ್ಲಿ ಹಾವು ಕಡಿತದಿಂದ ಸಾಯುವವರ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ವರ್ಷ 30 ರಿಂದ 40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಿದ್ದು, ದೇಶದಲ್ಲಿ ಹಾವು ಕಡಿತದಿಂದ ಪ್ರತಿ ವರ್ಷ 50 ಸಾವಿರ ಜನರು ಮೃತಪಡುತ್ತಿದ್ದಾರೆ. ಎಲ್ಲ ರಾಜ್ಯಗಳಲ್ಲೂ ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕಿದೆ. ಗ್ರಾಮಾಂತರ ಪ್ರದೇಶದಲ್ಲೂ ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕಿದೆ. (ಏಜೆನ್ಸೀಸ್)

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಸ್ನಾನ ಹೇಗೆ ಮಾಡ್ತಾರೆ? ಇಲ್ಲಿದೆ ನಿಮಗೆ ಗೊತ್ತಿರದ ಅಚ್ಚರಿಯ ಸಂಗತಿ! Astronauts