ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಸ್ನಾನ ಹೇಗೆ ಮಾಡ್ತಾರೆ? ಇಲ್ಲಿದೆ ನಿಮಗೆ ಗೊತ್ತಿರದ ಅಚ್ಚರಿಯ ಸಂಗತಿ! Astronauts

Astronauts

Astronauts : ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಒಂಬತ್ತು ತಿಂಗಳ ಪ್ರಯತ್ನದ ನಂತರ, ಬುಧವಾರ (ಮಾರ್ಚ್​ 19) ಬೆಳಗಿನ ಜಾವ 3.27ಕ್ಕೆ ಫ್ಲೋರಿಡಾದ ಸಮುದ್ರದ ನೀರಿನಲ್ಲಿ ಸುರಕ್ಷಿತವಾಗಿ ಇಳಿದರು. ಸದ್ಯ ಇಬ್ಬರನ್ನು ಹೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ, ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳುವವರೆಗೆ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.

ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕ ಜನರಿಗೆ ನಾನಾ ಕುತೂಹಲಗಳು ಹುಟ್ಟಿಕೊಂಡಿವೆ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಮ್ಮ ದೈನಂದಿನ ಕೆಲಸಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ನಮ್ಮ ದೈನಂದಿನ ಜೀವನದಲ್ಲಿ ಸ್ನಾನ ಮಾಡುವುದು ಮತ್ತು ಪ್ರಕೃತಿಯ ಕರೆಗಳಿಗೆ ಸ್ಪಂದಿಸುವುದು ಮುಂತಾದ ಕೆಲಸಗಳನ್ನು ಮಾಡುವುದು ನಮಗೆ ಸುಲಭ. ಆದರೆ, ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಇದು ಸಾಮಾನ್ಯ ವಿಷಯವಲ್ಲ ಎಂಬುದು ನಿಮಗೆ ತಿಳಿದಿದೆಯೇ? ಆ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ಸ್ನಾನ ಹೇಗೆ ಮಾಡುತ್ತಾರೆ?

ಬಟ್ಟೆ ಹಾಕಿಕೊಳ್ಳಲು ಸ್ನಾನಗೃಹ ಬಳಸುವುದು ಮತ್ತು ಕೂದಲನ್ನು ಸ್ವಚ್ಛಗೊಳಿಸಲು ಸ್ನಾನ ಮಾಡುವುದು ಮುಂತಾದ ಮೂಲಭೂತ ವಿಷಯಗಳು ಸಹ ಬಾಹ್ಯಾಕಾಶದಲ್ಲಿ ಅತ್ಯಂತ ಕಷ್ಟಕರವಾಗಿರುತ್ತದೆ. ಕಾರಣವೇನೆಂದರೆ, ಬಾಹ್ಯಾಕಾಶದಲ್ಲಿ ಶೂನ್ಯ ಅಥವಾ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸುವುದು ನಮ್ಮ ಕಲ್ಪನೆಗೂ ಮೀರಿದ್ದು. ಸುನೀತಾ ವಿಲಿಯಮ್ಸ್ ಸೇರಿದಂತೆ ಕೆಲವು ಗಗನಯಾತ್ರಿಗಳು ತಮ್ಮ ತಲೆಗೆ ಹೇಗೆ ಸ್ನಾನ ಮಾಡುತ್ತಿದ್ದರು ಎಂಬುದನ್ನು ತಿಳಿದರೆ ನೀವು ಆಶ್ಚರ್ಯ ಪಡುವುದು ಖಚಿತ.

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವುದರಿಂದ ನೀರು ಅನಿಯಂತ್ರಿತವಾಗಿ ತೇಲುತ್ತದೆ. ಹೀಗಾಗಿ ಗಗನಯಾತ್ರಿಗಳು ಅಲ್ಲಿ ಸ್ನಾನವನ್ನು ಮಾಡುವುದಿಲ್ಲ. ಅದರ ಬದಲಾಗಿ ತಮ್ಮ ತಲೆಯನ್ನು ತೊಳೆಯುವಾಗ ನೋ-ರಿನ್ಸ್ ಶಾಂಪೂ ಬಳಸುತ್ತಾರೆ. ಇದರರ್ಥ ಈ ಶಾಂಪೂವನ್ನು ತಲೆಗೆ ಹಚ್ಚಿ ಸ್ವಚ್ಛಗೊಳಿಸಲು ನೀರಿನ ಅಗತ್ಯವಿಲ್ಲ. ತಲೆಯೂ ಸಹ ಸ್ವಚ್ಛವಾಗುತ್ತದೆ.

ಗಗನಯಾತ್ರಿಗಳು ಸಣ್ಣ ನಳಿಕೆ ಇರುವ ನೀರಿನ ಪೌಚ್​ ತೆಗೆದುಕೊಂಡು ತಮ್ಮ ತೆಲೆಗೆ ನೀರನ್ನು ಸಿಂಪಡಿಸುತ್ತಾರೆ. ಬಳಿಕ ನೋ-ರಿನ್ಸ್​ ಶಾಂಪೂವನ್ನು ಶಾಂಪೂವನ್ನು ತಮ್ಮ ಕೈಗಳಿಂದ ತಲೆಗೆ ಹಚ್ಚಿಕೊಂಡು ನಂತರ ಟವೆಲ್‌ನಿಂದ ಒರೆಸುತ್ತಾರೆ. ಬಳಿಕ ಬಾಚಣಿಕೆಯಿಂದ ಕೂದಲನ್ನು ಬಾಚಿಕೊಳ್ಳುತ್ತಾರೆ. ಅಚ್ಚರಿಯ ಸಂಗತಿ ಏನೆಂದರೆ, ಈ ಶಾಂಪೂವಿನಿಂದ ನೊರೆಯು ಸಹ ಬರುವುದಿಲ್ಲ.

ಇದನ್ನೂ ಓದಿ: ಶತ್ರುವಿನ ಕಣ್ಮುಂದೆಯೇ ಮಾಯಾವಾಗುವ ಮ್ಯಾಜಿಕಲ್​ ಪವರ್​ ಹೊಂದಿರೋ ವಿಶ್ವದ ಏಕೈಕ ಜೀವಿ ಇದು! Magical Creature

ಇನ್ನು ಗಗನಯಾತ್ರಿಗಳು ಬಾಹ್ಯಾಕಾಶದಿಂದ ಪೋಸ್ಟ್ ಮಾಡುವ ವಿಡಿಯೋಗಳು ಮತ್ತು ಫೋಟೋಗಳಲ್ಲಿ ಯಾವಾಗಲೂ ಅವರು ಕೂದಲು ಮೇಲಕ್ಕೆ ನಿಂತಿರುವುದನ್ನು ನೀವು ಗಮನಿಸಿರುತ್ತೀರಿ. ಈ ರೀತಿ ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕಾರಣವೆಂದರೆ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವುದರಿಂದ ಅವರ ಕೂದಲು ಅವರ ಮುಖವನ್ನು ಮುಚ್ಚುವುದಿಲ್ಲ. ಹೀಗಾಗಿ ಅವರು ಪೋನಿಟೇಲ್ ಅಥವಾ ಜಡೆಗಳನ್ನು ಮಾಡಿಕೊಳ್ಳುವ ಅಗತ್ಯವಿಲ್ಲ.

ಇನ್ನು ಬಾಹ್ಯಾಕಾಶ ಪ್ರಯಾಣಿಕರು ತಮ್ಮ ದೇಹವನ್ನು ಸ್ಪಂಜು ಮತ್ತು ಸೋಪಿನಿಂದ ಸ್ವಚ್ಛಗೊಳಿಸುತ್ತಾರೆ. ಅವರು ಹೆಚ್ಚಾಗಿ ನೀರಿನಿಂದ ಸ್ನಾನ ಮಾಡುವುದಿಲ್ಲ. ನೀವು ಹಾಗೆ ನೀರನ್ನು ಬಳಸಿದರೂ, ಅದರಲ್ಲಿ ಒಂದನ್ನೂ ಚೆಲ್ಲದೆ ಬಳಸಬೇಕು. ಕಾರಣವೆಂದರೆ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಅವರು ಬಳಸುವ ನೀರು ಸುತ್ತಲೂ ಪರಿಚಲನೆಯಾಗುತ್ತಲೇ ಇರುತ್ತದೆ. ಅದು ಒಣಗುವುದಿಲ್ಲ. ಆದ್ದರಿಂದ, ಅವರು ಹೆಚ್ಚಾಗಿ ಟವೆಲ್ ಅಥವಾ ಕರವಸ್ತ್ರದಿಂದ ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುತ್ತಾರೆ.

ಅಂದಹಾಗೆ, ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್​ ವಿಲ್ಮೋರ್ 2024, ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಕ್ಕೆ ತಲುಪಿದರು. ತಮ್ಮ ಕೆಲಸ ಮುಗಿಸಿ 8 ದಿನದಲ್ಲೇ ಭೂಮಿಗೆ ಹಿಂತಿರುಗಬೇಕಿತ್ತು ಆದರೆ, ಅನಿರೀಕ್ಷಿತವಾಗಿ ಅಲ್ಲಿಯೇ ಸಿಲುಕಿದ ಅವರಿಬ್ಬರು 9 ತಿಂಗಳಿಗಿಂತ ಹೆಚ್ಚು ಕಾಲ ಅಲ್ಲಿಯೇ ಇರಬೇಕಾಯಿತು. ಸುದೀರ್ಘ ಕಾಯುವಿಕೆಯ ನಂತರ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭಾರತೀಯ ಕಾಲಮಾನ ಬುಧವಾರ (ಮಾರ್ಚ್​ 19) ಬೆಳಗಿನ ಜಾವ 3.27ಕ್ಕೆ ಅಮೆರಿಕದ ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದ್ದಾರೆ. ಈ ಜೋಡಿ 286 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದೆ. (ಏಜೆನ್ಸೀಸ್​)

ಶತ್ರುವಿನ ಕಣ್ಮುಂದೆಯೇ ಮಾಯಾವಾಗುವ ಮ್ಯಾಜಿಕಲ್​ ಪವರ್​ ಹೊಂದಿರೋ ವಿಶ್ವದ ಏಕೈಕ ಜೀವಿ ಇದು! Magical Creature

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ಮಲಗುತ್ತಾರೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ! Sunita Williams

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…