blank

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ಮಲಗುತ್ತಾರೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ! Sunita Williams

Sunita Williams

Sunita Williams : ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಒಂಬತ್ತು ತಿಂಗಳ ಪ್ರಯತ್ನದ ನಂತರ, ಬುಧವಾರ (ಮಾರ್ಚ್​ 19) ಬೆಳಗಿನ ಜಾವ 3.27ಕ್ಕೆ ಫ್ಲೋರಿಡಾದ ಸಮುದ್ರದ ನೀರಿನಲ್ಲಿ ಸುರಕ್ಷಿತವಾಗಿ ಇಳಿದರು. ಸದ್ಯ ಇಬ್ಬರನ್ನು ಹೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ, ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳುವವರೆಗೆ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.

ಬಾಹ್ಯಾಕಾಶ ಅಂದರೆ ಸುಮ್ಮನೇ ಅಲ್ಲ. ಅದೊಂದು ಮಾಯಾಜಾಲ. ಅಲ್ಲಿರಬೇಕೆಂದರೆ, ಕಠಿಣ ತರಬೇತಿ ಬೇಕು. ಯಾವುದೇ ಸವಾಲುಗಳನ್ನು ಎದುರಿಸಿ ನಿಲ್ಲುವ ಮನೋಧೈರ್ಯ ಬೇಕು. ನಮ್ಮ ಭೂಮಿ ಮತ್ತು ಬಾಹ್ಯಾಕಾಶದ ವಾತಾವರಣದಲ್ಲಿ ಅಜಗಜಾಂತರ ವ್ಯತ್ಯಾಸವಿರುತ್ತದೆ. ಭೂಮಿಯಲ್ಲಿ ಗುರುತ್ವಾಕರ್ಷಣೆ ಇದ್ದರೆ, ಬಾಹ್ಯಾಕಾಶದಲ್ಲಿ ಒತ್ತಡವಿಲ್ಲದ ಅಂದರೆ, ಭಾರವಿಲ್ಲದ ಸ್ಥಿತಿ ಇರುತ್ತದೆ. ಅಲ್ಲಿ ಯಾವುದೇ ವಸ್ತು ತೇಲುತ್ತದೆ. ಅಲ್ಲದೆ, ಆಮ್ಲಜನಕ ಇರುವುದೇ ಇಲ್ಲ. ಹೀಗಾಗಿ ಬಾಹ್ಯಾಕಾಶದಲ್ಲಿ ಇರುವುದೆಂದರೆ ಅದೊಂದು ಸವಾಲೇ ಸರಿ. ಸಾವು ಕೂಡ ಸಮೀಪದಲ್ಲೇ ಇರುತ್ತದೆ. ಆದರೆ, ಅದನೆಲ್ಲ ಜಯಿಸಿ, ಬರೋಬ್ಬರಿ 9 ತಿಂಗಳು ಅಲ್ಲಿದ್ದು ಬಂದಿದ್ದಾರೆ ಅಂದ್ರೆ ಅದು ಸಾಮಾನ್ಯದ ಸಂಗತಿಯಲ್ಲ. ಹೀಗಾಗಿ ಸುನಿತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ಗೆ ಒಂದು ಸಲಾಂ ಹೊಡೆಯಲೇಬೇಕು.

ಇನ್ನು ಬಾಹ್ಯಾಕಾಶದಲ್ಲಿ ವಾಸಿಸಲೆಂದೇ ನಾಸಾ ಸಂಸ್ಥೆ ತನ್ನದೇಯಾದ ಬಾಹ್ಯಾಕಾಶ ನಿಲ್ದಾಣವನ್ನು ಮಾಡಿಕೊಂಡಿದೆ. ಗಗನಯಾತ್ರಿಗಳನ್ನು ಅಲ್ಲಿಗೆ ಕಳುಹಿಸಿ, ಸಂಶೋಧನೆಗಳನ್ನು ನಡೆಸುತ್ತಿರುತ್ತದೆ. ಆದರೆ, ಬಾಹ್ಯಾಕಾಶದಲ್ಲಿ ಭೂಮಿಯಲ್ಲಿ ಇದ್ದಂತೆ ಸಹಜವಾಗಿ ಇರಲು ಸಾಧ್ಯವಿಲ್ಲ. ಊಟ, ನೀರಿನಿಂದ ಹಿಡಿದು ಮಲಗುವವರೆಗೂ ಎಲ್ಲವೂ ಭಿನ್ನವಾಗಿರುತ್ತದೆ. ಬಾಹ್ಯಾಕಾಶದಲ್ಲಿ ತೇಲುತ್ತಾರೆಂಬುದು ಗೊತ್ತಿದೆ. ಹೀಗಾಗಿ ಮಲಗುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಗಗನಯಾತ್ರಿಗಳು ನಿದ್ರೆ ಇಲ್ಲದೇ ಕಳೆಯುತ್ತಾರಾ ಅನ್ನೋ ಪ್ರಶ್ನೆಯೂ ಇದೆ. ಅದಕ್ಕೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಈ ಒಂದು ಕಾರಣಕ್ಕೆ IPLನಲ್ಲಿ ಈ ಬಾರಿ ರನ್​ ಮಳೆಯಾಗಲಿದೆ! 300 ಗಡಿ ದಾಟೋದು ಖಚಿತವೆಂದ ಎಬಿಡಿ | AB de Villiers

ಬಾಹ್ಯಾಕಾಶದಲ್ಲಿ ನಿದ್ರೆ ಹೇಗೆ?

ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವ ಗಗನಯಾತ್ರಿಗಳು ಮಲಗುವ ಚೀಲಗಳನ್ನು ಬಳಸಿಕೊಂಡು ಸಣ್ಣ ಸ್ಲೀಪಿಂಗ್​ ಸೆಕ್ಷನ್​ಗಳಲ್ಲಿ ಮಲಗುತ್ತಾರೆ. ಮಲಗುವಾಗ ತಮ್ಮ ದೇಹಕ್ಕೆ ಸಡಿಲವಾಗಿ ಪಟ್ಟಿಯನ್ನು ಕಟ್ಟಿಕೊಳ್ಳುತ್ತಾರೆ. ಇದರಿಂದ ಅವರ ದೇಹವು ತೇಲುವುದಿಲ್ಲ. ಶೂನ್ಯ ಗುರುತ್ವಾಕರ್ಷಣೆಯ ಜಗತ್ತಿನಲ್ಲಿ, ಯಾವುದೇ ಏರಿಳಿತಗಳು ಇರುವುದಿಲ್ಲ. ಗಗನಯಾತ್ರಿಗಳು ಯಾವುದೇ ದಿಕ್ಕಿಗೆ ಎದುರಾಗಿ ಎಲ್ಲಿ ಬೇಕಾದರೂ ಮಲಗಬಹುದು. ಆದರೆ, ನಿದ್ದೆ ಮಾಡುವಾಗ ಎಲ್ಲೋ ತೇಲುತ್ತಾ ಇರುವುದು ಒಳ್ಳೆಯದಲ್ಲ. ಆದ್ದರಿಂದ ಗಗನಯಾತ್ರಿಗಳು ಸಣ್ಣ ಸ್ಲೀಪಿಂಗ್​ ಸೆಕ್ಷನ್​ಗಳಲ್ಲಿ ಮಲಗುವ ಚೀಲಗಳನ್ನು ಬಳಸುತ್ತಾರೆ. ಬಾಹ್ಯಾಕಾಶ ನೌಕೆಯಲ್ಲಿ ಮಲಗುವಾಗ ಅವರ ದೇಹವು ತೇಲದಂತೆ ಅವರು ತಮ್ಮ ದೇಹವನ್ನು ಸಡಿಲವಾಗಿ ಕಟ್ಟಿಕೊಳ್ಳುತ್ತಾರೆ.

ಹವಾನಿಯಂತ್ರಣ ಮತ್ತು ಇತರ ಯಂತ್ರಗಳ ಶಬ್ದದಿಂದಾಗಿ ನಿದ್ರಿಸಲು ಸಾಧ್ಯವಾಗದ ಗಗನಯಾತ್ರಿಗಳಿಗೆ ಕಣ್ಣಿನ ಮುಖವಾಡಗಳು ಮತ್ತು ಇಯರ್‌ಪ್ಲಗ್‌ಗಳು ಸಹ ಲಭ್ಯವಿರುತ್ತದೆ. ಬಾಹ್ಯಾಕಾಶ ನೌಕೆಯಲ್ಲಿರುವಾಗ ಗಗನಯಾತ್ರಿಗಳ ನಿದ್ರೆಗಾಗಿ ಎಂಟು ಗಂಟೆಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಅವರು ಸುಮಾರು 6 ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಾರೆ. ಏಕೆಂದರೆ ಅಲ್ಲಿ ಅವರು ದೀರ್ಘಕಾಲ ಕೆಲಸ ಮಾಡುತ್ತಾರೆ. ಈ ಸಂದರ್ಭದಲ್ಲಿ ನೌಕೆಯ ಕಿಟಕಿಯಿಂದ ಹೊರಗಿನ ನೋಟವನ್ನು ಆನಂದಿಸುತ್ತಾ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಾರೆ.

ಘಟನೆಯ ಟೈಮ್‌ಲೈನ್

* 2024 ಜೂನ್ 5: ಸುನೀತಾ ಮತ್ತು ವಿಲ್ಮೋರ್ ಅವರೊಂದಿಗೆ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಐಎಸ್​ಎಸ್​ಗೆ ಹೊರಟಿತು
* ಜೂನ್ 6: ಸ್ಟಾರ್‌ಲೈನರ್ ಐಎಸ್​ಎಸ್​ನೊಂದಿಗೆ ಯಶಸ್ವಿಯಾಗಿ ಡಾಕ್ ಮಾಡಿತು. ಆದರೆ ಈ ಪ್ರಕ್ರಿಯೆಯಲ್ಲಿ, ಸ್ಟಾರ್‌ಲೈನರ್‌ನ ಥ್ರಸ್ಟರ್‌ಗಳು ಕಾರ್ಯನಿರ್ವಹಿಸದಿರುವುದು ಮತ್ತು ಪ್ರೊಪಲ್ಷನ್ ಸಿಸ್ಟಮ್‌ನಲ್ಲಿ ಹೀಲಿಯಂ ಸೋರಿಕೆಯಂತಹ ತಾಂತ್ರಿಕ ಸಮಸ್ಯೆಗಳು ಮುನ್ನೆಲೆಗೆ ಬಂದವು. ಇದರೊಂದಿಗೆ, ಗಗನಯಾತ್ರಿಗಳ ಸುರಕ್ಷಿತ ವಾಪಸಾತಿಯ ಬಗ್ಗೆ ಕಳವಳ ಉಂಟಾಯಿತು.
* ಜೂನ್ 12: ಸ್ಟಾರ್‌ಲೈನರ್ ಪ್ರಯಾಣಕ್ಕೆ ಸಿದ್ಧವಾಗಿಲ್ಲದ ಕಾರಣ ಸುನೀತಾ ಮತ್ತು ವಿಲ್ಮೋರ್ ಅವರ ವಾಪಸಾತಿ ಪ್ರವಾಸವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ನಾಸಾ ಘೋಷಿಸಿತು.
* ಜುಲೈ–ಆಗಸ್ಟ್: ವಾಪಸಾತಿಯ ಬಗ್ಗೆ ಅನಿಶ್ಚಿತತೆ ಮತ್ತಷ್ಟು ಹೆಚ್ಚಾಯಿತು. ಇದರೊಂದಿಗೆ, ಸುನೀತಾ ಮತ್ತು ವಿಲ್ಮೋರ್ ಐಎಸ್​ಎಸ್​ ಸಿಬ್ಬಂದಿಯನ್ನು ಸೇರಿಕೊಂಡರು ಮತ್ತು ಅದರ ನಿರ್ವಹಣಾ ಜವಾಬ್ದಾರಿಗಳು, ಸಂಶೋಧನೆ ಇತ್ಯಾದಿಗಳನ್ನು ಸಂಪೂರ್ಣವಾಗಿ ವಹಿಸಿಕೊಂಡರು. ಈ ಪ್ರಕ್ರಿಯೆಯಲ್ಲಿ, ಸುನೀತಾ ಅವರ ಆರೋಗ್ಯ ಸ್ವಲ್ಪ ಹದಗೆಟ್ಟಿತು. ಮೂಳೆ ಸಾಂದ್ರತೆ ಕಡಿಮೆಯಾಗುವಂತಹ ಹಲವಾರು ಸಮಸ್ಯೆಗಳು ಉದ್ಭವಿಸಿದವು.
* ಸೆಪ್ಟೆಂಬರ್: ಸುನೀತಾ ಐಎಸ್​ಎಸ್​ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರು.
* ನವೆಂಬರ್: ಸುನೀತಾ ಐಎಸ್​ಎಸ್​ನಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ದೀಪಾವಳಿ ಮತ್ತು ಥ್ಯಾಂಕ್ಸ್ಗಿವಿಂಗ್ ಆಚರಿಸುತ್ತಾರೆ.
* ಡಿಸೆಂಬರ್: ಸುನೀತಾ ವಿದ್ಯಾರ್ಥಿಗಳೊಂದಿಗೆ ಚಾಟ್ ಮಾಡುತ್ತಾರೆ ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಬಾಹ್ಯಾಕಾಶದಲ್ಲಿನ ಜೀವನವು ತುಂಬಾ ತಮಾಷೆಯಾಗಿದೆ ಎಂದು ಹೇಳುತ್ತಾರೆ.
* 2025, ಜನವರಿ 30: ಸುನೀತಾ ತಮ್ಮ ಮೊದಲ ಬಾಹ್ಯಾಕಾಶ ನಡಿಗೆಯನ್ನು ಕೈಗೊಂಡರು. ಅದರ ಭಾಗವಾಗಿ, ಅವರು ಐಎಸ್​ಎಸ್​ನ ಹೊರಗೆ ಪ್ರಮುಖ ದುರಸ್ತಿ ಕಾರ್ಯಗಳಲ್ಲಿ ಭಾಗವಹಿಸಿದರು.
* ಫೆಬ್ರವರಿ: ಸುನೀತಾ ಮತ್ತು ವಿಲ್ಮೋರ್ ಅವರು ಹಿಂದಿರುಗುವ ಪ್ರಯಾಣದ ಬಗ್ಗೆ ಅನಿಶ್ಚಿತತೆ ಹೆಚ್ಚುತ್ತಿರುವಾಗ ಅವರು ಚೆನ್ನಾಗಿದ್ದೇವೆ ಎಂದು ಸಂದೇಶಗಳನ್ನು ಕಳುಹಿಸಿದರು.
* ಮಾರ್ಚ್ 12: ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ ಅವರನ್ನು ಮರಳಿ ತರಲಾಗುತ್ತಿದೆ ಎಂದು ನಾಸಾ ಘೋಷಿಸಿತು.
* ಮಾರ್ಚ್ 16: ಕ್ರೂ ಡ್ರ್ಯಾಗನ್ -10 ಬಾಹ್ಯಾಕಾಶ ನೌಕೆ ISS ನೊಂದಿಗೆ ಯಶಸ್ವಿಯಾಗಿ ಡಾಕ್ ಆಯಿತು.
* ಮಾರ್ಚ್ 17: ಸುನೀತಾ, ವಿಲ್ಮೋರ್ ಮತ್ತು ಇತರ ಇಬ್ಬರು ಗಗನಯಾತ್ರಿಗಳನ್ನು ಹೊಂದಿರುವ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮಾರ್ಚ್ 18 ರಂದು ಭೂಮಿಗೆ ಮರಳಲಿದೆ ಎಂದು ನಾಸಾ ಘೋಷಿಸಿದೆ.
* ಮಾರ್ಚ್​​ 18, ಮಧ್ಯಾಹ್ನ 2.17: ಕ್ರೂ ಡ್ರ್ಯಾಗನ್​ ಬಾಹ್ಯಾಕಾಶ ನೌಕೆಯನ್ನು ಭೂಮಿಗೆ ಹಿಂದಿರುಗಿಸುವ ಪ್ರಕ್ರಿಯೆ ಪ್ರಾರಂಭವಾಯಿತು.
* ಮಾರ್ಚ್​ 18, ಮಧ್ಯಾಹ್ನ 2.18: ಸೋರಿಕೆಗಳನ್ನು ಪರಿಶೀಲಿಸಲಾಯಿತು.
* ಮಾರ್ಚ್​ 18, ಮಧ್ಯಾಹ್ನ 2.35: ಕಕ್ಷೆಯಿಂದ ಬೇರ್ಪಡುವ ಪ್ರಕ್ರಿಯೆ ಪ್ರಾರಂಭವಾಯಿತು.
* ಮಾರ್ಚ್​ 19, ಬೆಳಗ್ಗೆ 2.51: ಭೂಕಕ್ಷೆಯನ್ನು ಪ್ರವೇಶಿಸಿತು.
* ಮಾರ್ಚ್​ 19, ಬೆಳಗ್ಗೆ 3.10: ಡ್ರ್ಯಾಗನ್ ಫ್ರೀಡಂ ಮಾಡ್ಯೂಲ್ ಭೂಮಿಯ ವಾತಾವರಣವನ್ನು ಪ್ರವೇಶಿಸಿತು. ಹೆಚ್ಚಿನ ವೇಗದಿಂದಾಗಿ ಸ್ಪೇಸ್‌ಎಕ್ಸ್ ಕೇಂದ್ರದೊಂದಿಗೆ ಸಿಗ್ನಲ್ ಕಡಿತಗೊಂಡಿತು.
* ಮಾರ್ಚ್​ 19, ಬೆಳಗ್ಗೆ 3.21: ಸಿಗ್ನಲ್ ಅನ್ನು ಮರುಸಂಪರ್ಕಿಸಲಾಯಿತು.
* ಮಾರ್ಚ್​ 19, ಬೆಳಗ್ಗೆ 3.26: ನೆಲದಿಂದ 5 ಕಿ.ಮೀ ಎತ್ತರದಲ್ಲಿದ್ದಾಗ ಪ್ಯಾರಾಚೂಟ್‌ಗಳು ತೆರೆದವು.
* ಮಾರ್ಚ್​ 19, ಬೆಳಗ್ಗೆ 3.28: ಡ್ರ್ಯಾಗನ್ ಮಾಡ್ಯೂಲ್ ಸುರಕ್ಷಿತವಾಗಿ ಸಾಗರದಲ್ಲಿ ಇಳಿಯಿತು.
* ಮಾರ್ಚ್​ 19, ಬೆಳಗ್ಗೆ 3.55: ಮಾಡ್ಯೂಲ್ ಅನ್ನು ಹಡಗಿಗೆ ತುಂಬಿಸಲಾಯಿತು. * ಮಾರ್ಚ್​ 19, ಬೆಳಗ್ಗೆ 4.23: ಸುನೀತಾ ಅವರನ್ನು ಮಾಡ್ಯೂಲ್‌ನಿಂದ ಹೊರಗೆ ತರಲಾಯಿತು ಮತ್ತು ಗಗನಯಾತ್ರಿಗಳನ್ನು ಹೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಬಾಹ್ಯಾಕಾಶದಲ್ಲಿ ನಾನ್​ವೆಜ್​ ಹೇಗೆ ತಿಂತಿದ್ರು? ಮೂತ್ರವೂ ವೇಸ್ಟ್ ಆಗ್ತಿರ್ಲಿಲ್ಲ! ಹೀಗಿತ್ತು ಸುನೀತಾರ​ ಆಹಾರ ಕ್ರಮ…Sunita Williams

ಕೂರಲು, ಮಲಗಲು, ನಡೆಯಲಾಗದು… ಸ್ವಿಮ್ಮಿಂಗ್​ಪೂಲ್​ನಲ್ಲೇ ಹೆಚ್ಚು ಹೊತ್ತು ಇರಬೇಕು! ಸುನೀತಾ ಮುಂದಿದೆ ಈ ಸವಾಲುಗಳು… Sunita Williams

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…