

ಚಿತ್ರದುರ್ಗ: ಕಾಂಗ್ರೆಸ್ಸಿಗರ ಮಾತು ಕೇಳಿದರೆ ಜನರ ಜೀವ ಹೋಗುತ್ತೆ, ಬಿಜೆಪಿ ಮಾತು ಕೇಳಿದರೆ ಜನರ ಜೀವ ಉಳಿಯುತ್ತೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಕೋವಿಡ್‌ನಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜನರ ಜೀವನದೊಂದಿಗೆ ರಾಜಕಾರಣ ನಡೆಸುತ್ತಿದೆ. ಇದು ಆ ಪಕ್ಷಕ್ಕೆ ಶೋಭೆ ತಾರದು. ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ಸಿಗರು ಸಿಎಂ, ಪಿಎಂ ಸಹಿತ ಸರ್ಕಾರಗಳ ವಿರುದ್ಧ ಅಪ್ರಚಾರ ನಡೆಸುತ್ತಿದ್ದಾರೆ. ಇದು ಸರಿಯಲ್ಲ, ಜನರ ಜೀವ ಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಸಲಹೆ ಕೊಟ್ಟರೆ ಸರ್ಕಾರ ಸ್ವೀಕರಿಸುತ್ತದೆ. ದಲಿತ ಮಹಿಳೆಗೆ ಲಸಿಕೆ ಹಾಕಿಲ್ಲ ಎಂಬ ಬೆಂಗಳೂರಿನಲ್ಲಿ ಬಂದ ದೂರಿನ ಕುರಿತಂತೆ ಡಿಸಿಎಂ ಅಶ್ವಥನಾರಾಯಣ ಈಗಾಗಲೇ ವರದಿ ತರಿಸಿಕೊಂಡು ಅಗತ್ಯ ಕ್ರಮ ಜರುಗಿಸಿದ್ದಾರೆ. ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರು. ಇದನ್ನೂ ಓದಿರಿ ಮೈಸೂರಿನಲ್ಲಿ ಇಂಜಿನಿಯರ್ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಗ್ಗೆ ನನಗೆ ವಿಶೇಷ ಗೌರವವಿದೆ. ಆದರೆ ಅವರು ತಮ್ಮ ಬುದ್ಧಿವಂತಿಕೆಯನ್ನು ಈ ಸಂದರ್ಭದಲ್ಲಿ ತೋರಿಸುವುದು ಬೇಡ. ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲವೆಂದು ಹೈಕಮಾಂಡ್ ಸ್ಪಷ್ಟಪಡಿಸಿದೆ. ಇಂಥ ಸಂದರ್ಭದಲ್ಲಿ ಗೊಂದಲ ಉಂಟಾಗಬಾರದು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲ್ಲ ಎಂದು ಶ್ರೀರಾಮುಲು ಹೇಳಿದರು.