ಬೆಂಗಳೂರಲ್ಲಿ ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಇನ್ನೂ ಕೆಲ ಆರೋಪಿಗಳು ಕೇರಳದಲ್ಲಿ ಅಡಗಿರುವ ಶಂಕೆ

gang rape case
Published on

ಬೆಂಗಳೂರು: ಬೆಂಗಳೂರಿನ ಎನ್​ಆರ್​ಐ ಕಾಲನಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಇನ್ನೂ ಕೆಲವು ಆರೋಪಿಗಳು ಕೇರಳದಲ್ಲಿ ಅಡಗಿರುವ ಶಂಕೆಯಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಹೇಳಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಗೃಹ ಸಚಿವರು, ರಾಮಮೂರ್ತಿ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ವತಃ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಇಬ್ಬರು ಮಹಿಳೆಯರು ಸೇರಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದರು. ಇದನ್ನೂ ಓದಿರಿ ನೀನು ಪವರ್‌ಫುಲ್​ ಸಂಸದ, ತಾಕತ್ತಿದ್ರೆ ರೋಹಿಣಿ ಸಿಂಧೂರಿಯನ್ನ ವರ್ಗಾವಣೆ ಮಾಡಿಸು…

ಅತ್ಯಾಚಾರದ ವಿಡಿಯೋ ವೈರಲ್ ಆಗಿರುವ ಬಗ್ಗೆ ಕೇಂದ್ರ ಸಚಿವ‌ ಕಿರಣ್ ರಿಜುಜು ಮೊದಲಿಗೆ ಟ್ವೀಟ್ ಮಾಡಿ, ದೇಶದ ಯಾವ ಭಾಗದಲ್ಲಿ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲು ತಿಳಿಸಿದ್ದರು. ಈಶಾನ್ಯ ಭಾರತ ಮೂಲದವರು ಭಾಗಿಯಾಗಿರುವ ಶಂಕೆಯಿತ್ತು. ಅಸ್ಸಾಂ ಪೊಲೀಸರು ತನಿಖೆ ನಡೆಸುತ್ತಿದ್ದರೆ, ಇತ್ತ ಬೆಂಗಳೂರು ಪೊಲೀಸರು ವಿಡಿಯೋ ವೈರಲ್ ಆದ ಜಾಡು ಹಿಡಿದು ಶೋಧ ಕಾರ್ಯ ನಡೆಸಿದ್ದರು. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ, ದುಷ್ಕರ್ಮಿಗಳು ಬಾಂಗ್ಲಾ ಮೂಲದವರು ಎಂಬ ಮಾಹಿತಿ ಸಿಗುತ್ತಿದ್ದಂತೆಯೇ 2-3 ತಾಸಿನಲ್ಲಿ 6 ಜನ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಬೊಮ್ಮಾಯಿ‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net