ಚಿನ್ನದ ಮೇಲೆ ಸಾಲ ಪಡೆಯುತ್ತಿದ್ದೀರಾ? ಹಾಗಿದ್ರೆ, ಆರ್​ಬಿಐನ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಿರಲಿ | Gold Loan

blank

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏಕೆ ಇನ್ನ? ಎಂಬ ಮಾತು ನಿಜಕ್ಕೂ ಸತ್ಯ. ಕೇವಲ ಮದುವೆ ಸಮಾರಂಭಗಳು ಅಥವಾ ಇತರೆ ಕಾರ್ಯಕ್ರಮಗಳಿಗೆ ಮಾತ್ರ ಬಳಕೆಯಾಗದ ಚಿನ್ನ, ನಮ್ಮ ಕಷ್ಟಕಾಲದಲ್ಲಿಯೂ ಕೈಹಿಡಿಯುತ್ತದೆ. ಚಿನ್ನವನ್ನು ಅಡವಿಟ್ಟು ನಮ್ಮ ಆರ್ಥಿಕ ಮುಗ್ಗಟ್ಟುಗಳನ್ನು ಪರಿಹರಿಸಿಕೊಳ್ಳಬಹುದು. ಈ ಉಪಾಯವನ್ನು ಅನುಸರಿಸುವ ಹಲವರು, ಚಿನ್ನದ ಮೇಲೆ ಸಾಲ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಾರೆ. ಆದರೆ, ಗೋಲ್ಡ್ ಸಾಲ ಪಡೆಯುವ ನಿಮಗೆ ಭಾರತೀಯ ರಿಸರ್ವ್​ ಬ್ಯಾಂಕ್​ನ ಈ ಹೊಸ ನಿಯಮಗಳ ಬಗ್ಗೆ ಅರಿವಿರಲಿ.

blank

ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನ ಕಿಟಕಿ ಏರಿ ಬಸ್ ಡ್ರೈವರ್​​ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಚಾಲಕ: ಕಾರಣ ಹೀಗಿದೆ | Shocking Incident

ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಆರ್​ಬಿಐ ದೇಶದಲ್ಲಿ ಚಿನ್ನದ ಸಾಲ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಹೊಸ ನಿಯಮಗಳು ಬ್ಯಾಂಕುಗಳು ಮತ್ತು ಎನ್​ಬಿಎಫ್​​ಸಿ( NBFC, ಬ್ಯಾಂಕೇತರ ಹಣಕಾಸು ಕಂಪನಿಗಳು) ನೀಡುವ ಚಿನ್ನ ಮತ್ತು ಬೆಳ್ಳಿ ಸಾಲಗಳಿಗೆ ಅನ್ವಯಿಸುತ್ತವೆ. ಇದಕ್ಕೆ ಸಂಬಂಧಿಸಿದಂತೆ ಕರಡು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಸದ್ಯಕ್ಕೆ ಇದು ಇನ್ನೂ ಚಾಲ್ತಿಗೆ ಬಂದಿಲ್ಲ ಎಂಬುದು ಗಮನಿಸಬೇಕಾದ ವಿಷಯ.

1. LTV ಶೇ.75ರಷ್ಟು ಮಿತಿ

ಚಿನ್ನದ ಸಾಲಗಳಿಗೆ ಸಾಲ-ಮೌಲ್ಯ ಅನುಪಾತ (LTV) ಈಗ ಶೇ.75ರಷ್ಟು ಮಿತಿಗೊಳಿಸಲಾಗಿದೆ. ಕೋವಿಡ್ ಸಮಯದಲ್ಲಿ ಇದನ್ನು ಶೇ.80ರಷ್ಟು ಹೆಚ್ಚಿಸಲಾಗಿತ್ತು. ಆದರೆ, ಈಗ ಅದನ್ನು 75ಕ್ಕೆ ಇಳಿಸಲಾಗಿದೆ. ಬುಲೆಟ್ ಮರುಪಾವತಿ ಸಾಲಗಳಿಗೆ, ಸಾಲ ಮೌಲ್ಯವನ್ನು ಅಸಲು ಮತ್ತು ಬಡ್ಡಿಯನ್ನು ಸೇರಿಸುವ ಮೂಲಕ ಲೆಕ್ಕ ಹಾಕಲಾಗುತ್ತದೆ.

2. ಚಿನ್ನದ ಮಾಲೀಕತ್ವದ ಪುರಾವೆ

ಚಿನ್ನದ ರಶೀದಿ ಇಲ್ಲದಿದ್ದರೆ, ಸಾಲಗಾರನು ಸಹಿ ಮಾಡಿದ ಪರಿಶೀಲನಾ ದಾಖಲೆಯನ್ನು ಸಲ್ಲಿಸಬೇಕು. ಅದರ ಬಗ್ಗೆ ಯಾವುದೇ ಅನುಮಾನ ಇದ್ದರೆ, ಸಾಲವನ್ನು ನೀಡಲು ಮುಂದಾಗಬಾರದು.

ಇದನ್ನೂ ಓದಿ:  ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ವಧುವಿಗೆ ಬಂತು ಫೋನ್​ ಕಾಲ್: ಮದುವೆ ರದ್ದು, ಹಾಸನದಲ್ಲಿ ಘಟನೆ! Marriage

3. ಚಿನ್ನದ ಪ್ರಮಾಣಪತ್ರ

ಸಾಲಗಾರರಿಗೆ ಚಿನ್ನದ ತೂಕ, ಶುದ್ಧತೆ, ವಿನಾಯಿತಿಗಳು ಮತ್ತು ಫೋಟೋಗಳ ಪೂರ್ಣ ಪ್ರಮಾಣಪತ್ರವನ್ನು ಒದಗಿಸಬೇಕು. ಇದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.

4. ಯಾವ ಚಿನ್ನ ಸೂಕ್ತ?

22 ಕ್ಯಾರೆಟ್‌ಗಿಂತ ಕಡಿಮೆ ಶುದ್ಧತೆ ಹೊಂದಿರುವ ಚಿನ್ನಕ್ಕೆ ಸಾಲ ನೀಡಲಾಗುವುದಿಲ್ಲ. ಆದಾಗ್ಯೂ, ಬ್ಯಾಂಕುಗಳು ಮಾರಾಟ ಮಾಡುವ ಇಂಡಿಯಾ ಗೋಲ್ಡ್ ನಾಣ್ಯಗಳನ್ನು ಸ್ವೀಕರಿಸಲಾಗುತ್ತದೆ.

5. ಬೆಳ್ಳಿ ಸಾಲಗಳಿಗೆ ಹಸಿರು ನಿಶಾನೆ

ಮೊದಲ ಬಾರಿಗೆ, ಬೆಳ್ಳಿ ಸಾಲಗಳನ್ನು ಅನುಮೋದಿಸಲಾಗಿದೆ. ಆದಾಗ್ಯೂ, ಈ ಅವಕಾಶವು 925 ಶುದ್ಧತೆ ಹೊಂದಿರುವ ವಿಶೇಷ ಬೆಳ್ಳಿ ನಾಣ್ಯಗಳಿಗೆ ಮಾತ್ರ ಲಭ್ಯ ಎಂಬುದು ಗಮನಾರ್ಹ.

ಇದನ್ನೂ ಓದಿ: ಕೋಟಾದಲ್ಲೇ ಏಕಿಷ್ಟು ಸಾವು? ರಾಜಸ್ಥಾನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಪ್ರಶ್ನೆ​! | Student Suicides

6. ತೂಕದ ನಿರ್ಬಂಧ

ಒಂದೇ ಸಾಲದಲ್ಲಿ ಗರಿಷ್ಠ 1 ಕೆಜಿ ಚಿನ್ನಾಭರಣ ಮತ್ತು 50 ಗ್ರಾಂ ಚಿನ್ನದ ನಾಣ್ಯಗಳನ್ನು ತೆಗೆದುಕೊಳ್ಳಬಹುದು.

7. ಚಿನ್ನದ ಮೌಲ್ಯ

ಚಿನ್ನದ ಮೌಲ್ಯವನ್ನು 22 ಕ್ಯಾರೆಟ್‌ಗಳ ಬೆಲೆಯನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಅದು ಕಡಿಮೆ ಕ್ಯಾರೆಟ್ ಚಿನ್ನದಾಗಿದ್ದರೂ ಸಹ, 22 ಕ್ಯಾರೆಟ್ ದರವನ್ನು ಮಾನದಂಡವಾಗಿ ತೆಗೆದುಕೊಳ್ಳಲಾಗುತ್ತದೆ. ಇದು ದರಗಳ ಸ್ಥಿರತೆಗೆ ಸಹಾಯ ಮಾಡುತ್ತದೆ.

8. ನಿಖರ ಸಾಲ ಒಪ್ಪಂದ

ಸಾಲ ಒಪ್ಪಂದದ ದಾಖಲೆಗಳು ಎಲ್ಲಾ ಶುಲ್ಕಗಳು, ಚಿನ್ನದ ವಿವರಗಳು, ಹರಾಜು ಪ್ರಕ್ರಿಯೆ ಮತ್ತು ಪಾವತಿ ಗಡುವನ್ನು ಸ್ಪಷ್ಟವಾಗಿ ನಮೂದಿಸಬೇಕು.

9. ಚಿನ್ನವನ್ನು ತ್ವರಿತವಾಗಿ ಹಿಂತಿರುಗಿಸಿ

ಸಾಲವನ್ನು ಪೂರ್ಣಗೊಳಿಸಿದ ಬಳಿಕ, ಚಿನ್ನವನ್ನು 7 ಕೆಲಸದ ದಿನಗಳಲ್ಲಿ ಹಿಂತಿರುಗಿಸಬೇಕು. ವಿಳಂಬವಾದಲ್ಲಿ ದಿನಕ್ಕೆ 5,000 ರೂ. ಭಾರೀ ದಂಡ ವಿಧಿಸಲಾಗುವುದು.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯನಿಂದ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ, ವಂಚನೆ | Hyderabad

ನಿಮ್ಮ ಗಮನಕ್ಕೆ:

ಈ ಬದಲಾವಣೆಗಳು ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ನೀಡುವ ಚಿನ್ನದ ಸಾಲಗಳ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಈ ಕರಡು ಮಾರ್ಗಸೂಚಿಗಳ ಕುರಿತು ಪ್ರಸ್ತುತ ಸಾರ್ವಜನಿಕ ಸಮಾಲೋಚನೆ ನಡೆಯುತ್ತಿದೆ. ಎಲ್ಲರ ಪ್ರತಿಕ್ರಿಯೆಯನ್ನು ಪಡೆದ ಬಳಿಕವೇ ಅಂತಿಮ ನಿಯಮಗಳನ್ನು ಹೊರಡಿಸಲಾಗುತ್ತದೆ ಎಂದು ವರದಿಗಳು ಸೂಚಿಸಿವೆ,(ಏಜೆನ್ಸೀಸ್).

ಮುಂದಿನ 5 ತಿಂಗಳು ಬೆಂಗಳೂರು-ಸುಬ್ರಹ್ಮಣ್ಯ-ಮಂಗಳೂರು ಮಾರ್ಗ ಸಾಗುವ ಹಲವು ರೈಲುಗಳ ಸಂಚಾರ ರದ್ದು!

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank