Hyderabad: ಮಹಬೂಬಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯನೊಬ್ಬ 34 ವರ್ಷದ ಮಹಿಳಾ ವೈದ್ಯೆಯೊಬ್ಬರಿಗೆ ವಿವಾಹದ ಸುಳ್ಳು ಭರವಸೆ ನೀಡಿ ಅತ್ಯಾಚಾರ ಮತ್ತು ವಂಚನೆ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

34 ವರ್ಷದ ಮಹಿಳಾ ವೈದ್ಯೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯನೊಬ್ಬ ವಿವಾಹದ ಸುಳ್ಳು ಭರವಸೆ ನೀಡಿ ಅತ್ಯಾಚಾರ ಮತ್ತು ವಂಚನೆ ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಅವರು ಈಗಾಗಲೇ ಮದುವೆಯಾಗಿದ್ದಾರೆ ಎಂಬ ಅಂಶವನ್ನು ಮರೆಮಾಚಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೋಟಾದಲ್ಲೇ ಏಕಿಷ್ಟು ಸಾವು? ರಾಜಸ್ಥಾನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ! | Student Suicides
ವೈದ್ಯೆ ಪೊಲೀಸರಿಗೆ ದೂರು ನೀಡಿದ್ದು, ಇತ್ತೀಚೆಗೆ ಬಂಜಾರ ಹಿಲ್ಸ್‌ನ ಸ್ಟಾರ್ ಹೋಟೆಲ್‌ನಲ್ಲಿ ಶಂಕಿತನಿಂದ ಶೋಷಣೆಗೆ ಒಳಗಾಗಿದ್ದೇನೆ, ಸುಮಾರು ಒಂದು ವರ್ಷದ ಹಿಂದೆ ಹೈದರಾಬಾದ್‌ನಲ್ಲಿ ನಡೆದ ವೈದ್ಯಕೀಯ ವಿಚಾರ ಸಂಕಿರಣದಲ್ಲಿ ಭೇಟಿಯಾದೆವು ನಂತರ ಸ್ನೇಹಿತರಾದೆವು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.
ಆರೋಪಿ ವೈದ್ಯ ತಾನು ಅವಿವಾಹಿತ ಎಂದು ಸುಳ್ಳು ಹೇಳಿ, ಮದುವೆಯಾಗುವುದಾಗಿ ಭರವಸೆ ನೀಡಿ ಹೋಟೆಲ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ನಂತರ, ಅವನು ಈಗಾಗಲೇ ಮದುವೆಯಾಗಿದ್ದಾನೆಂದು ಆಕೆಗೆ ತಿಳಿದುಬಂದಿದೆ.
ವೈದ್ಯೆಯ ದೂರಿನ ಆಧಾರದ ಮೇಲೆ, ಬಂಜಾರಾ ಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೈದ್ಯರನ್ನು ಬಂಧಿಸಲು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)