ಚಲಿಸುತ್ತಿದ್ದ ಬಸ್ಸಿನ ಕಿಟಕಿ ಏರಿ ಬಸ್ ಡ್ರೈವರ್​​ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಚಾಲಕ: ಕಾರಣ ಹೀಗಿದೆ | Shocking Incident

Shocking Incident
Published on

Shocking Incident: ಆರ್ ಟಿಸಿ ಬಸ್ ಚಾಲಕನ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ ಘಟನೆ ಹೈದರಾಬಾದ್​​​ನ ಮಿಯಾಪುದಲ್ಲಿ ನಡೆದಿದೆ.

ಕೆಲವೊಮ್ಮೆ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಕೆಲವು ಜನರು ಇಡೀ ರಸ್ತೆಯೇ ತಮ್ಮ ಸ್ವತ್ತು ಎಂಬಂತೆ ವರ್ತಿಸುತ್ತಾರೆ. ಇನ್ನು ಕೆಲವರು ತಮ್ಮ ವಾಹನಗಳನ್ನು ತಮಗೆ ಇಷ್ಟ ಬಂದಂತೆ ಓಡಿಸುತ್ತಾರೆ ಮತ್ತು ಇತರ ವಾಹನಗಳನ್ನು ಮುಂದಕ್ಕೆ ಚಲಿಸಲು ಬಿಡುವುದಿಲ್ಲ. ಕೆಲವೊಮ್ಮೆ, ರಸ್ತೆಯಲ್ಲಿ ಚಾಲಕರ ನಡುವೆ ಜಗಳ ನಡೆಯುತ್ತದೆ.

ಹೈದರಾಬಾದ್​​ನ ಮಿಯಾಪುರದಲ್ಲಿ ಆರ್ ಟಿಸಿ ಬಸ್ ಚಾಲಕನ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡು ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರ್‌ಟಿಸಿ ಬಸ್ ಕಾಚೆಗುಡದಿಂದ ಪತೆಂಚೇರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ @greatandhranews ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಆಟೋ ಚಾಲಕನು ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದನ್ನು ನೋಡಬಹುದು. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡಿದ್ದಾನೆ. ಚಲಿಸುತ್ತಿದ್ದ ಬಸ್ಸಿನ ಕಿಟಕಿ ಹತ್ತಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದೇ ವೇಳೆ ಬಸ್ ಚಾಲಕನು ಪ್ರಯಾಣಿಕರ ಬಳಿ ವಿಡಿಯೋ ಮಾಡಿ ಎಂದಿದ್ದಾನೆ. ಇತ್ತ ಆಟೋ ಚಾಲಕನು ಗಾಡಿಯನ್ನು ಸೈಡ್ ಗೆ ಹಾಕಿ ಎನ್ನುತ್ತಾ, ಬಸ್ಸಿನೊಳಗೆ ನುಗ್ಗಿ ಚಾಲಕನ ಮೊಬೈಲ್ ಕಿತ್ತುಕೊಳ್ಳುವುದನ್ನು ಕಾಣಬಹುದು. ಆ ಬಳಿಕ ಆಟೋ ಚಾಲಕ ಹಾಗೂ ಬಸ್ ಚಾಲಕನ ನಡುವೆ ವಾಗ್ವಾದ ನಡೆದಿದೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net