More

    ರಸಗುಲ್ಲ ತಂದ ಆಪತ್ತು; ಸಿಹಿ ಸೇವಿಸಿ 70 ಮಂದಿ ಆಸ್ಪತ್ರೆಗೆ ದಾಖಲು

    ಉತ್ತರಪ್ರದೇಶ: ಮದುವೆ ಮನೆ, ದೇವಸ್ಥಾನ ಹಾಗೂ ಹಬ್ಬದ ಮನೆಯ ಊಟ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಒಂದು ತುತ್ತು ಊಟ ಹೆಚ್ಚಾಗಿಯೇ ಸೇರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಹೀಗೆ ಮದುವೆ ಮನೆಯ ಊಟನ್ನು ಆಸೆಯಿಂದ ಸವಿದು ಬರೋಬ್ಬರಿ 70 ಮಂದಿ ಆಸ್ಪತ್ರೆ ದಾಖಲಾಗಿದ್ದಾರೆ.

    ಉತ್ತರಪ್ರದೇಶದ ಕನೌಜ್​​ನ ಹಳ್ಳಿಯೊಂದರಲ್ಲಿ ಮದುವೆಯ ಔತಣಕೂಟವೊಂದರಲ್ಲಿ ಆಹಾರ ಸೇವಿಸಿದ ನಂತರ ಮಕ್ಕಳು ಸೇರಿದಂತೆ ಸುಮಾರು 70 ಜನರು ಅಶ್ವಸ್ಥರಾಗಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಬಜರಂಗದಳ ಬ್ಯಾನ್ ಮಾಡ್ತಾರಾ? ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತಾರಾ? ಪರಂ ಹೇಳೋದೇನು?

    ಮದುವೆ ಮನೆಯ ಆಹಾರವನ್ನು ಸೇವಿಸಿದ ಸುಮಾರು 200 ಜನರಲ್ಲಿ, ಸುಮಾರು 70 ಜನರು ರಸಗುಲ್ಲಾ ತಿಂದ ನಂತರ ವಾಂತಿ ಮತ್ತು ಭೇದಿಯಿಂದ ಬಳಲಿದ್ದಾರೆ. ಔತಣಕ್ಕೆ ಬಂದಿದ್ದ ಬಹುತೇಕ ಎಲ್ಲರೂ ರಸಗುಲ್ಲಾ ತಿಂದಿದ್ದು, ಹಲವರು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮದ ನಿವಾಸಿ ಮುನ್ನಾ ಹೇಳಿದ್ದಾರೆ.

    ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶಕ್ತಿ ಬಸು ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ ರೋಗಿಗಳ ಸ್ಥಿತಿ ಸ್ಥಿರವಾಗಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

    ಸಿಎಂ ಸಿದ್ದರಾಮಯ್ಯರಿಗೆ ಬಿಜೆಪಿಯಿಂದ ಜೀವ ಬೆದರಿಕೆ ಇದೆ; ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts