More

    46 ಕೂಡುಕಟ್ಟು ತಂಡಗಳಿಂದ ಹೋಳಿ : ಕುಡುಬಿ ಸಮುದಾಯದವರ ಹಬ್ಬದಲ್ಲಿ ಸಂಪ್ರದಾಯಕ್ಕೆ ಮಹತ್ವ

    ವಿಜಯವಾಣಿ ಸುದ್ದಿಜಾಲ, ಆರ್ಡಿ
    ಕುಡುಬಿ ಸಮುದಾಯದವರ ಹೋಳಿ ಕೂಡುಕಟ್ಟುಗಳಲ್ಲಿ ಸಾಂಪ್ರದಾಯಿಕ ರಂಗು-ರಂಗಿನ ಹೋಳಿ ಹಬ್ಬದ ಆಚರಣೆ ಗುರುವಾರದಿಂದ ಆರಂಭಗೊಂಡಿದ್ದು ಮಾ.25ರತನಕ ನಡೆಯಲಿದೆ.

    ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡುಬಿ ಸಮುದಾಯದವರು ಕೊಕ್ಕರ್ಣೆ, ಒಳಬೈಲು, ಮುದ್ದೂರು, ಮಂದಾರ್ತಿ, ಶಿರೂರು ಮೂರುಕೈ, ಯಡ್ತಾಡಿ, ನಂಚಾರು, ಗೋಳಿಯಂಗಡಿ, ಹೆಂಗವಳ್ಳಿ, ಹಾಲಾಡಿ, ಬೆಳ್ವೆ, ಸೆಟ್ಟೋಳಿ, ಶೇಡಿಮನೆ, ಹೆಬ್ರಿ, ಬೇಳಂಜೆ, ಆರ್ಡಿ, ಅಲ್ಬಾಡಿ, ಕಲ್ಮರ್ಗಿ ಸೇರಿದಂತೆ ಸುತ್ತ ಮುತ್ತಲಿನ ಪರಿಸರದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ.

    ಉಡುಪಿ ಜಿಲ್ಲೆಯಲ್ಲಿ ಒಟ್ಟು 46 ಕುಡುಬಿ ಹೋಳಿ ಕೂಡುಕಟ್ಟುಗಳಿವೆ. ಈ ಬಾರಿ 44 ಹೋಳಿ ಕೂಡುಕಟ್ಟು ತಂಡದವರು ಹೋಳಿ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎರಡು ಹೋಳಿ ಕೂಡುಕಟ್ಟುಗಳ ತಂಡದವರು ಕಾರಣಾಂತರದಿಂದ ಪಾಲ್ಗೊಂಡಿಲ್ಲ.

    46 ಕೂಡುಕಟ್ಟು ತಂಡಗಳಿಂದ ಹೋಳಿ : ಕುಡುಬಿ ಸಮುದಾಯದವರ ಹಬ್ಬದಲ್ಲಿ ಸಂಪ್ರದಾಯಕ್ಕೆ ಮಹತ್ವ

    ಭಕ್ತಿ ಪ್ರಧಾನ ಕಲೆ

    ಆಧುನಿಕತೆಯ ಪ್ರಭಾವದಿಂದ ಆಚರಣೆ, ಸಂಪ್ರದಾಯಗಳಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಧಾರ್ಮಿಕ ಆಚರಣೆಗಳು, ಜನಪದ ಹಾಡುಗಳು, ಕಲೆಗಳು, ಧಾರ್ಮಿಕ ಆಚರಣೆಯ ಮೂಲ ಸಂಸ್ಕೃತಿ ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕುಡುಬಿ ಜನಾಂಗದವರ ಜೀವನ ಶೈಲಿಯೊಂದಿಗೆ ಕುಡುಬಿ ಜನರ ಹಬ್ಬ, ಆಚರಣೆಗಳು, ಸಂಪ್ರದಾಯ ವಿಶೇಷವಾಗಿದೆ. ಇವರು ಅಚರಿಸುವ ಹೋಳಿ ಕುಣಿತ ಒಂದು ವಿಶಿಷ್ಟ ಪ್ರಕಾರದ ಜನಪದ ಕಲೆ. ಭಕ್ತಿ ಪ್ರಧಾನವಾಗಿ ಆಚರಿಸಲ್ಪಡುವ ಹೋಳಿ ಹಬ್ಬ ಕುತೂಹಲಕಾರಿ ಹಾಗೂ ಜನಾಕರ್ಷಣೀಯವಾಗಿದೆ.

    46 ಕೂಡುಕಟ್ಟು ತಂಡಗಳಿಂದ ಹೋಳಿ : ಕುಡುಬಿ ಸಮುದಾಯದವರ ಹಬ್ಬದಲ್ಲಿ ಸಂಪ್ರದಾಯಕ್ಕೆ ಮಹತ್ವ

    ಬುಡಕಟ್ಟು ಸಂಸ್ಕೃತಿಯ ಹಳೇ ನೆನಪುಗಳು

    ಬುಡಕಟ್ಟು ಸಂಸ್ಕೃತಿಯ ಹಲವಾರು ಸಾಂಪ್ರದಾಯಿಕ ಆಚರಣೆಗಳನ್ನು ಆಚರಿಸುವ ಕುಡುಬಿ ಸಮುದಾಯದವರು ವರ್ಷಕ್ಕೊಮ್ಮೆ 5 ದಿನಗಳ ಕಾಲ ಆಚರಿಸುವ ಈ ಹಬ್ಬದ ಪೂರ್ವ ತಯಾರಿ, ವಿಧಿ-ವಿಧಾನಗಳು ಹಾಗೂ ಹಬ್ಬದ ಮುಕ್ತಾಯ ಬಹು ಸೋಜಿಗ. ಧಾರ್ಮಿಕ ಹಿನ್ನೆಲೆಯಲ್ಲಿ ನಡೆಸುವ ಈ ಆಚರಣೆಗೆ ಭಕ್ತಿ ಲೇಪನದ ಕಾರಣದಿಂದಲೂ ಏನೋ ತಲೆ ತಲಾಂತರದಿಂದಲೂ ಆಚರಿಸಿಕೊಂಡು ಬರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts