ನಂದಳಿಕೆ ನಾಲ್ಕು ಸ್ಥಾನ ಆಲಡೆಯಲ್ಲಿ ಸಿರಿ ಜಾತ್ರೆ, ಆಯನೋತ್ಸವ: ಸ್ವರ್ಣ ಪಾದುಕೆ, ಚೆನ್ನೆಮಣೆಗಳ ಮೆರವಣಿಗೆ

nandalike
ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವರು.
Published on

ಕಾರ್ಕಳ: ಇತಿಹಾಸ ಪ್ರಸಿದ್ಧ ನಾಲ್ಕು ಸ್ಥಾನ, ಸಿರಿಕ್ಷೇತ್ರಗಳ ತವರೂರು ಎಂದೇ ಪ್ರಸಿದ್ಧಿ ಪಡೆದ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ನಂದಳಿಕೆ ಅಯನೋತ್ಸವ ಸಿರಿ ಜಾತ್ರೆ ಮಹೋತ್ಸವ ಮಾ.25ರ ಸೋಮವಾರ ಜರುಗಲಿದೆ.

ಮಾ.21ರಂದು ಬೆಳಗ್ಗೆ 10ರಿಂದ ಕೆದಿಂಜೆ ಮೂಲಸ್ಥಾನ ಮುಜಲೊಟ್ಟು ಶ್ರೀ ಅಬ್ಬಗ-ದಾರಗ ಸಾನ್ನಿಧ್ಯದಲ್ಲಿ ಶ್ರೀ ಕುಮಾರ, ಅಬ್ಬಗ -ದಾರಗ ದರ್ಶನ, ಮಾ.22ರಂದು ರಾತ್ರಿ 10 ಗಂಟೆಗೆ ಧ್ವಜಾರೋಹಣ, ಮಹಾರಂಗಪೂಜೆ, ಉತ್ಸವ ಬಲಿ ಜರುಗಲಿದೆ. ಮಾ.23ರಂದು ಬೆಳಗ್ಗೆ 8.30ಕ್ಕೆ ಆರೋಗಣ ಬಲಿ, ಮಧ್ಯಾಹ್ನ 1ಗಂಟೆಯಿಂದ ಶ್ರೀದೇವರ ಸನ್ನಿಧಿಯಿಂದ ಹಸಿರುವಾಣಿ ಮೆರವಣಿಗೆ, ರಾತ್ರಿ 9ಕ್ಕೆ ಒರಿ ಬಲಿ ಉತ್ಸವ, ಮಾ.24ರಂದು ಭಾನುವಾರ ಬೆಳಗ್ಗೆ 9ಕ್ಕೆ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಸೇವೆ, ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 9.30ಕ್ಕೆ ಅಂಬೊಡಿ ಜಾತ್ರೆ, ಅಂಬೊಡಿ ಉತ್ಸವ ಬಲಿ ನಡೆಯಲಿದೆ.

ಮಾ.25ರಂದು ನಂದಳಿಕೆ ಆಯನೋತ್ಸವ ಸಿರಿಜಾತ್ರಾ ಮಹೋತ್ಸವ ಜರುಗಲಿದ್ದು, ಬೆಳಗ್ಗೆ 8ರಿಂದ ಶ್ರೀಗಂಧದ ರಜತ ಪಲ್ಲಕ್ಕಿಯಲ್ಲಿ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಅಬ್ಬಗ-ದಾರಗರ ಚೆನ್ನೆಮಣೆಗಳ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಶ್ರೀ ಆಲಡೆಯಲ್ಲಿ ಅಣ್ಣಪ್ಪ ದರ್ಶನ, ಹಸಿಮಡಲು ಚಪ್ಪರ ಕಟ್ಟೆಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಮಾ.30ರಂದು ಬೆಳಗ್ಗೆ 7ಕ್ಕೆ ಕವಾಟೋದ್ಘಾಟನೆ, ಬೆಳಗ್ಗೆ 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಮಧ್ಯಾಹ್ನ 3.30ಕ್ಕೆ ಪಡುಸವಾರಿ, ಅವಭೃತ, ಧ್ವಜಾವರೋಹಣ. ಮಾ.31ರಂದು ಮಹಾಸಂಪ್ರೋಕ್ಷಣೆ, ಮಂಗಳ ಮಂತ್ರಾಕ್ಷತೆ, ಎಪ್ರಿಲ್ 13ರಂದು ಸಾಮೂಹಿಕ ಶ್ರೀ ಶನಿಪೂಜಾ ಮಹೋತ್ಸವ ಜರುಗಲಿದೆ ಎಂದು ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾವಡಿ ಅರಮನೆಯಿಂದ ಹೆಗ್ಗಡೆ ಆಗಮನ

ಮಾ.25ರಂದು ಮಧ್ಯಾಹ್ನ 1ರಿಂದ ರಾತ್ರಿ 8ರವರೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ನಂದಳಿಕೆ ಚಾವಡಿ ಅರಮನೆಯಿಂದ ಹೆಗ್ಡೆ ಅವರ ಆಗಮನ, ರಾತ್ರಿ 10.30ರಿಂದ ಆಯನೋತ್ಸವ ಬಲಿ, ವೈಭವೋಪೇತ ಕೆರೆದೀಪೋತ್ಸವ, ಶ್ರೀ ಕೆರೆದೀಪ ಕಟ್ಟೆಪೂಜಾ ಮಹೋತ್ಸವ, ರಾತ್ರಿ 11ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ-ಕುಮಾರ, ಅಬ್ಬಗ-ದಾರಗ ದರ್ಶನಾವೇಶಾಪೂರ್ವಕ ಸಿರಿ ಜಾತ್ರೆ, ಮುಂಜಾನೆ 4ರಿಂದ ಬ್ರಹ್ಮಮಂಡಲ ಸೇವೆ, ಬೆಳಗಿನ ಬಲಿ, ಭೂತ ಬಲಿ ಜರುಗಲಿದೆ.

ಮನ್ಮಹಾರಥೋತ್ಸವ, ಭೂತರಾಜರಿಗೆ ದಂಡೆ ಬಲಿ

ಮಾ.26ರಂದು ಊರ ಆಯನೋತ್ಸವ, ಮಧ್ಯಾಹ್ನ 11ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲಿದೆ. ಮಾ.27ರಂದು ರಾತ್ರಿ 8ಕ್ಕೆ ಬಾಕಿಮಾರು ದೀಪೋತ್ಸವ, ಮಾ.28ರಂದು ಬೆಳಗ್ಗೆ 9ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ, ಮಧ್ಯಾಹ್ನ 11ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಮೂಡುಸವಾರಿ ಉತ್ಸವ, ಮಾ.29ರಂದು ಶ್ರೀಮನ್ಮಹಾರಥೋತ್ಸವ ಬೆಳಗ್ಗೆ 7ರಿಂದ ಶ್ರೀ ದೇವರಿಗೆ ಶತರುದ್ರಾಭಿಷೇಕ, ಬೆಳಗ್ಗೆ 11.45ಕ್ಕೆ ರಥಾರೋಹಣ, ಮಧ್ಯಾಹ್ನ 1ರಿಂದ ಮಹಾಅನ್ನಸಂತರ್ಪಣೆ, ಸಂಜೆ 6ರಿಂದ ಭೂತರಾಜರಿಗೆ ದಂಡೆ ಬಲಿ ಸೇವೆ, ರಾತ್ರಿ 8ಕ್ಕೆ ಮಹಾರಥೋತ್ಸವ ಶ್ರೀ ದೇವರ ಬಲಿ ಉತ್ಸವ ಕವಾಟಬಂಧನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net