More

    ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಳ ರಥಾರೋಹಣ

    ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
    ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಸೋಮವಾರ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿ ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ ಬೆಳಗ್ಗೆ ನವಕ ಕಲಶಾಭಿಷೇಕ, ಮಹಾಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿಗಳ ಬಳಿಕ ರಥಾರೋಹಣ ನಡೆಯಿತು. ಉತ್ಸವ ಅಂಗವಾಗಿ ದೇವರು ಹಾಗೂ ದೇವಳವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

    ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಧ್ವರಾಯ ಭಟ್, ಅರ್ಚಕರಾದ ವಿದ್ವಾನ್ ಎನ್.ಜನಾರ್ದನ ಭಟ್, ಎನ್.ವೆಂಕಟೇಶ ಪುರಾಣಿಕ್, ಪವಿತ್ರಪಾಣಿ ಜನಾರ್ದನ ಜೆನ್ನಿ, ಅನಂತಪದ್ಮನಾಭ ಜೆನ್ನಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎನ್. ಜನಾರ್ದನ ಭಟ್, ವಸಂತ ಶೆಟ್ಟಿ, ವಿಮಲ ಬಿ.ಶೆಟ್ಟಿ, ಲಕ್ಷ್ಮಣ ಶೆಟ್ಟಿವಾಲ್ ಅಡ್ವೆ ಅರಂತಡೆ, ಸುಂದರ, ಬಾಲಕೃಷ್ಣ ಸಾಲ್ಯಾನ್, ಪ್ರೇಮ ರವಿ ದೇವಾಡಿಗ, ಅಡ್ವೆ, ನಂದಿಕೂರು, ಉಳ್ಳೂರು, ಕೊಳಚೂರು ಗ್ರಾಮಸ್ಥರು, ಸಿಬ್ಬಂದಿ ಪಾಲ್ಗೊಂಡಿದ್ದರು

    ಗಮನ ಸೆಳೆದ ಪುಷ್ಪಾಲಂಕಾರ

    ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಳ ರಥಾರೋಹಣ

    ಪ್ರತೀ ವರ್ಷ ಒಂದಿಲ್ಲೊಂದು ಸಂಸ್ಕೃತಿ ಬಿಂಬಿಸುವ ಪುಷ್ಪಾಲಂಕಾರ ಮಾಡುತ್ತಿರುವ ನಂದ್ಯೂರಮ್ಮನ ಭಕ್ತ ಜನರ ತಂಡ ಈ ಬಾರಿ ಹಣ್ಣು ಹಂಪಲು, ತರಕಾರಿ ಹಾಗೂ ವಿಶೇಷ ಹೂವು ಬಳಸಿ ರಚಿಸಿದ್ದ ಅಲಂಕಾರ ಗಮನ ಸೆಳೆಯಿತು. ಹಳದಿ, ಆರೆಂಜ್ ಗೊಂಡೆ, ಕಾಕಡ, ಕನಕಾಂಬರ, ಅಯ್ಯಪ್ಪ ಹೂವು, ಸೈಪ್ರಸ್ ಹೂವು, ಸೇವಂತಿಗೆ, ಕೆಂಪು ಎಸ್ಟರ್ ಹೂವು, ಹಳದಿ ಹೂವು, ವಿಶೇಷ ಜಾಲರಿ, ಅನಾನಸು, ಕಿತ್ತಳೆ ಹಣ್ಣು, ಜೋಳ ತೆನೆ, ಅಲಸಂಡೆ, ಮಟ್ಟುಗುಳ್ಳ, ಬದನೆ ಸಹಿತ ವಿವಿಧ ತರಕಾರಿಗಳನ್ನು ಬಳಸಿ ರಚಿಸಿದ ದೇವಳ ಪ್ರವೇಶ ದ್ವಾರ, ತೀರ್ಥ ಮಂಟಪ ಮುಂಭಾಗದಲ್ಲಿನ ಅಲಂಕಾರ ಸೇರಿದಂತೆ ಗರ್ಭಗುಡಿ ದ್ವಾರದಲ್ಲಿ ರಚಿಸಿದ ಹೂವಿನ ಆನೆ ಅಲಂಕಾರ ನೋಡುಗರನ್ನು ಆಕರ್ಷಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts