More

    ಹೋಳಿ ಹಬ್ಬದ ಗುಮಟೆ ಅಂದರೆ ಗೊತ್ತೇ?

    ಹೆಬ್ರಿ: ಹೋಳಿ ಕುಣಿತದ ಮುಖ್ಯ ಸಾಧನ ಮಣ್ಣಿನಿಂದ ತಯಾರಿಸುವ ಗುಮಟೆ. ಹೋಳಿ ಹಬ್ಬದ ಸಂದರ್ಭದಲ್ಲಿ ಗುಮಟೆಗೆ ಭಾರಿ ಬೇಡಿಕೆ ಇರುತ್ತದೆ. ಇದನ್ನು ಕೆಲವೇ ಮಂದಿ ಸಾಂಪ್ರದಾಯಿಕವಾಗಿ ತಯಾರಿಸುತ್ತಿದ್ದು, ಬೆಲೆಯೂ ಸಾಕಷ್ಟು ಇದೆ. ಗುಮಟೆ ಬಡಿಯುತ್ತಾ ಮಾಡುವ ಹೋಳಿ ಕುಣಿತ ಬಹಳ ಆಕರ್ಷಣೀಯ. ಮಣ್ಣಿನ ಸಾಧನಕ್ಕೆ ಚರ್ಮ ಅಳವಡಿಸಿ ಗುಮಟೆ ತಯಾರಿಸುತ್ತಾರೆ.

    ಹೋಳಿ ಹಬ್ಬದ ಸಂದರ್ಭದಲ್ಲಿ ಗುಮಟೆ ಬಾರಿಸುತ್ತಾ ಜನಪದ ಹಾಡನ್ನು ಹಾಡುತ್ತಾರೆ. ಗುಮಟೆಗೆ ಗಾತ್ರಕ್ಕೆ ತಕ್ಕಂತೆ ಐನೂರಿಂದ ಸಾವಿರ ರೂ.ವರೆಗೂ ಬೆಲೆಯಿರುತ್ತದೆ.

    ಹೋಳಿ ಹಬ್ಬದ ಸಂದರ್ಭದಲ್ಲಿ ಊರಿನ ಮನೆಮನೆಗಳಲ್ಲಿ ಹರಕೆಯ ಅನ್ನ ಪ್ರಸಾದ ನೀಡುವ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ವೀಳ್ಯದೆಲೆ ಅಕ್ಕಿ ತೆಂಗಿನಕಾಯಿ ಗೌರವ ಧನ ನೀಡುತ್ತಾರೆ. ಪ್ರತಿದಿನ ಸಂಜೆ ಸಮುದಾಯದ ಮನೆಗೆ ತೆರಳಿ ಕಾಲಿನ ಗೆಜ್ಜೆ ಬಿಚ್ಚುವ ಕಾರ್ಯ ಇರುತ್ತದೆ. ಈ ಒಂದು ವಾರದ ವ್ರತದ ಸಂದರ್ಭದಲ್ಲಿ ಚಪ್ಪಲಿಯನ್ನು ಧರಿಸುವಂತಿಲ್ಲ, ಮಾಂಸಹಾರ, ಮದ್ಯ ಸೇವನೆ ಮಾಡಬಾರದು ಎಂಬ ನಿಯಮವಿದೆ.

    ಕಷ್ಟ ಪರಿಹರಿಸಲು ಹರಕೆ

    ಅವಿವಾಹಿತರು, ಮಕ್ಕಳಾಗದೆ ಇರುವವರು ತಮ್ಮ ಕಷ್ಟ ಪರಿಹರಿಸಲು ಹೋಳಿ ತಂಡದ ಮುಖ್ಯಸ್ಥರಿಂದ ಪ್ರಾರ್ಥನೆ ಮಾಡಿಸುತ್ತಾರೆ. ಮಕ್ಕಳಿಗೆ ರೋಗಬಾಧೆ ಇದ್ದರೆ ಹೋಳಿ ವೇಷಧಾರಿಗಳ ಕೈಯ್ಯಲ್ಲಿ ಕೊಟ್ಟು ಕುಣಿಸಿದರೆ ಗುಣವಾಗುತ್ತದೆ ಎಂಬ ನಂಬಿಕೆಯಿದೆ.

    ಕಳೆದ 25 ವರ್ಷಗಳಿಂದ ಹೋಳಿ ಹಬ್ಬದ ನೃತ್ಯದಲ್ಲಿ ತೊಡಗಿ ಕೊಂಡಿದ್ದೇವೆ. ನಮ್ಮ ಸಂಸ್ಕೃತಿ ಆಚರಣೆಯನ್ನು ಉಳಿಸಿಕೊಂಡು ಬರುವ ಕೆಲಸಮಾಡುತಿದ್ದೇವೆ.
    -ಜಗದೀಶ್ ಹುತ್ತುರ್ಕೆ, ಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts