ಸಿನಿಮಾ

ಒಂದೇ ಗ್ರಾಮದ ನಾಲ್ವರು ಮಕ್ಕಳು ಕಣ್ಮರೆ..!

ತುಮಕೂರು: ಈ ಗ್ರಾಮದಲ್ಲಿ ಒಂದೇ ದಿನ ನಾಲ್ವರು ಮಕ್ಕಳು ಕಣ್ಮರೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಮಂಜುಳಾ (13), ಮಧು ಕುಮಾರ್ (13), ಮಹಾಲಕ್ಷ್ಮಿ (15) ಹಾಗೂ ಭಾನು (14) ಎಂಬ ಹೆಸರಿನ ಮಕ್ಕಳು ಕಣ್ಮರೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಚಿಕ್ಕಬಾಣಗೆರೆ ಗ್ರಾಮದ ಮಲ್ಲಿಕಾರ್ಜುನ ಅವರ ಮಕ್ಕಳಾದ ಮಂಜುಳಾ ಹಾಗೂ ಮಧುಕುಮಾರ್, ಹಾಗೂ ಅದೇ ಗ್ರಾಮದ ಕೃಷ್ಣಪ್ಪನ ಮಕ್ಕಳಾದ ಮಹಾಲಕ್ಷ್ಮಿ ಹಾಗೂ ಭಾನು ಶನಿವಾರ ಮಧ್ಯಾಹ್ನ ಮನೆಯಿಂದ ಹೋದವರು ಕಣ್ಮರೆಯಾಗಿದ್ದಾರೆ.

ಸಂಬಂಧಿಕರ ಮನೆ, ಅಲ್ಲಿ ಇಲ್ಲಿ ಎಂದು ಎಲ್ಲಾ ಕಡೆ ಹುಡುಕಿದ ಪೋಷಕರು ಹೈರಾಣಾಗಿದ್ದಾರೆ. ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು ತಮ್ಮ ಮಕ್ಕಳನ್ನ ಹುಡುಕಿಕೊಂಡುವಂತೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟನಾಯಕನಹಳ್ಳಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Latest Posts

ಲೈಫ್‌ಸ್ಟೈಲ್