ಫಿಲಿಪೈನ್ಸ್: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮಗುಚಿಬಿದ್ದ ಪರಿಣಾಮ 23 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಫಿಲಿಪೈನ್ಸ್ನ ಲಗುನಾ ಸರೋವರದಲ್ಲಿ ನಡೆದಿದೆ.
ಉತ್ತರ ಫಿಲಿಪೈನ್ಸ್ನ ಹಲವು ಭಾಗಕ್ಕೆ ದೊಕ್ಸುರಿ ಚೆಂಡಮಾರುತ ಅಪ್ಪಳಿಸಿದ ಕೆಲ ಘಂಟೆಗಳ ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ರಕ್ಷಣಾ ಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಐಫೋನ್ಗಾಗಿ ಹೆತ್ತ ಮಗನನ್ನೇ ಮಾರಾಟ ಮಾಡಿದ ದಂಪತಿ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕರಾವಳಿ ರಕ್ಷಣಾ ಪಡೆಯ ವಕ್ತಾರ ರಿಯಲ್ ಅಡ್ಮಿರಲ್ ಅರ್ಮಾಂಡೊ ಏಕಾಏಕಿ ಬಿರುಗಾಳಿ ಜೋರಾಗಿ ಬೀಸಿದ ಪರಿಣಾಮ ಹೆಚ್ಚಿನ ಜನ ಭಯಭೀತರಾಗಿ ಎಡಭಾಗಕ್ಕೆ ವಾಲಿದ ಕಾರಣ ದೋಣಿ ಮಗುಚಿದೆ.
ಲಗುನಾ ಸರೋವರದಿಂದ 23 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 40ಕ್ಕೂ ಹೆಚ್ಚಿನ ಜನರನ್ನು ರಕ್ಷಿಸಲಾಗಿದೆ. ಕಾಣೆಯಾದವರಿಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಕರಾವಳಿ ರಕ್ಷಣಾ ಪಡೆಯ ವಕ್ತಾರ ರಿಯಲ್ ಅಡ್ಮಿರಲ್ ಅರ್ಮಾಂಡೊ ತಿಳಿಸಿದ್ಧಾರೆ.