VIDEO| ವಿವಾಹಿತನಿಗಾಗಿ ಹೊಡೆದಾಡಿಕೊಂಡ ಮಹಿಳೆಯರು

Fight For Married man
Published on

ಲಾಸ್​ ​ವೇಗಾಸ್: ವಿವಾಹಿತನಿಗಾಗಿ ನಾಲ್ವರು ಮಹಿಳೆಯರು ಸಾರ್ವಜನಿಕರ ಎದುರಲ್ಲೇ ಬಡಿದಾಡಿಕೊಂಡಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಲಾಸ್​ ವೇಗಾಸ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೊಲೀಸರು ನಾಲ್ವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಕ್​ ಹ್ಯಾರಿಸ್​ ಎಂಬ ವ್ಯಕ್ತಿಗಾಗಿ ನಾಲ್ವರು ಮಹಿಳೆಯರ ನಡುವೆ ಹೊಡೆದಾಟವಾಗಿದ್ದು, ಘಟನೆಯೂ ಲಾಸ್​ವೇಗಾಸ್​ನ ವಿನ್ ಹೋಟೆಲ್​​ನಲ್ಲಿ ನಡೆದಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮೈಕ್​ ಹ್ಯಾರಿಸ್​ ಎಂಬ ವ್ಯಕ್ತಿಯೂ ವಿವಾಹಿತನಾಗಿದ್ದು, ಆತ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ. ಈ ವಿಚಾರ ಆತನ ಪತ್ನಿಗೆ ತಿಳಿದು ಆತ ಸಂಬಂಧ ಹೊಂದಿದ್ದ ಮೂವರು ಮಹಿಳೆಯರ ನಂಬರ್​ಗಳನ್ನು ಪತ್ತೆ ಹಚ್ಚಿದ್ದಾಳೆ.

ಬಳಿಕ ಕರೆ ಮಾಡಿ ವಿನ್​ ಹೋಟೆಲ್​ಗೆ ಬರುವಂತೆ ಸೂಚಿಸಿದ್ಧಾಳೆ. ಅದರಂತೆ ಸ್ಥಳಕ್ಕೆ ಬಂದ ಮೂವರು ಮಹಿಳೆಯರ ಮೇಲೆ ಆಕೆ ಏಕಾಏಕಿ ದಾಳಿ ಮಾಡಿದ್ದು, ಮೈಕ್​ ಹ್ಯಾರಿಸ್​ಗೆ ಈಗಾಗಲೇ ಮದುವೆಯಾಗಿದೆ ಎಂದು ವಿಚಾರ ಹೊರಬಂದಿದೆ. ಈ ಸುದ್ದಿಯನ್ನು ತಿಳಿದ ಮೂವರು ಮಹಿಳೆಯರು ಆತನ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.

ಇದನ್ನು ನೋಡಿದ ಮೈಕ್​ ಪತ್ನಿ ಎರಿನ್​ ಹ್ಯಾರಿಸ್​ ಮೂವರು ಮಹಿಳೆಯರ ಜೊತೆ ಹೊಡೆದಾಡಿದ್ದಾರೆ. ಇದನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಚಾರವಾಗಿ ಮೈಕ್​ನನ್ನು ಪೊಲೀಸ್​ ಠಾಣೆಗೆ ಕರೆಸಿಸ ವಿಚಾರಣೆ ನಡೆಸಿದಾಗ ಆತನ ನನಗೂ ಇದಕ್ಕೂ ಯಾವುದೇ ತರಹದ ಸಂಬಂಧವಿಲ್ಲ. ಇದರಿಂದ ತನಗೆ ಏನು ಆಗಬೇಕಾಗಿಲ್ಲ ಎಂದು ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net