More

    VIDEO| 13 ಗಂಟೆಗಳ ಕಾಲ ಕ್ಯಾಬ್​ನಲ್ಲಿ ಜಾಲಿರೈಡ್​; ಹಣ ಕೇಳಿದ್ದಕ್ಕೆ ಮಹಿಳೆ ಕಿರಿಕ್​

    ಗುರುಗ್ರಾಮ: ಸತತ 13 ಗಂಟೆಗಳ ಕಾಲ ಮಹಿಳೆಯೊಬ್ಬರು ಕ್ಯಾಬಿನಲ್ಲಿ ತಿರುಗಾಡಿ ಹಣ ಪಾವತಿಸಲು ನಿರಾಕರಿಸಿ ಚಾಲಕನ ಮೇಲೆ ಲೈಂಗಿಕ ಕಿರುಕುಳದ ದೂರು ನೀಡುವುದಾಗಿ ಬೆದರಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆ ಕ್ಯಾಬ್ ಚಾಲಕ ಹಾಗೂ ಪೊಲೀಸ್​ ಅಧಿಕಾರಿಗಳಿಗೆ ಅವಾಜ್​ ಹಾಕುತ್ತಿರುವುದು ಕಂಡು ಬರುತ್ತದೆ.

    ಈ ಕುರಿತು ಪ್ರತಿಕ್ರಿಯಸಿರುವ ಗುರುಗ್ರಾಮ ಪೊಲೀಸರು ಜ್ಯೋತಿ ಎಂಬ ಮಹಿಳೆಯೂ ದೀಪಕ್​ ಎಂಬುವವರ ಕಾರನ್ನು ಬಾಡಿಗೆಗೆ ಪಡೆದು 13 ಘಂಟೆಗಳ ಕಾಲ ಎಲ್ಲಿಗೆ ಹೋಗಬೇಕು ಎಂದು ಹೇಳದೆ ಸುತ್ತಾಡಿಸಿದ್ದಾರೆ. ಬಳಿಕ ಕ್ಯಾಬ್​ ಚಾಲಕ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ ಕುಪಿತಗೊಂಡ ಮಹಿಳೆ ಆತನ ಮೇಲೆ ಸುಳ್ಳು ಮೊಕದ್ದಮೆಯನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ಧಾರೆ.

    ಇದನ್ನೂ ಓದಿ: ಇನ್ಸ್​​ಟಾಗ್ರಾಂನಲ್ಲಿ ಪರಿಚಯವಾಗಿದ್ದ ಯುವಕನನ್ನು ಭೇಟಿಯಾಗಲು ಬಂದ ಮಹಿಳೆಗೆ ಕಾದಿತ್ತು ಶಾಕ್​

    ಈ ಸಂಬಂಧ ಕ್ಯಾಬ್​ ಚಾಲಕ ದೀಪಕ್​ ಹಾಗೂ ಜ್ಯೋತಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಇಬ್ಬರ ನಡುವೆ ವಾಗ್ವಾದವೇ ನಡೆದು ಹೋಗಿದೆ. ವಿಚಾರ ತಿಳಿದು ಸ್ಥಳಕ್ಕೆ ಹೋದ ಪೊಲೀಸ್​ ಅಧಿಕಾರಿಗಳ ಜೊತೆ ಮಹಿಳೆ ಅಸಭ್ಯವಾಗಿ ವರ್ತಿಸಿದ್ದು, ಬಳಿಕ ಆಕೆ ಸ್ಥಳದಿಂದ ಪರಾರಿಯಾಗಿದ್ದಾಳೆ.

    ಜ್ಯೋತಿ ಎಂಬ ಮಹಿಳೆಯೂ ಇದೇ ಮೊದಲ ಬಾರಿ ಈಗೆ ಮಾಡುತ್ತಿಲ್ಲ. ಪ್ರತಿಬಾರಿಯೂ ಕ್ಯಾಬ್​ಗಳನ್ನು ಬುಕ್​ ಮಾಡಿ ಹಣ ಪಾವತಿ ಮಾಡುವ ಸಮಯಕ್ಕೆ ಚಾಲಕರ ಜೊತೆ ಗಲಾಟೆ ತೆಗೆದು ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವುದಾಗಿ ಬೆದರಿಸಿ ಪರಾರಿಯಾಗುತ್ತಿದ್ದರು. ಈ ಸಂಬಂಧ ಕ್ಯಾಬ್​ ಚಾಲಕದ ದೀಪಕ್​ ದೂರು ದಾಖಲಸಿದ್ದು, ತಲೆಮಾರಿಸಿಕೊಂಡಿರುವ ಮಹಿಳೆಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಗುರುಗ್ರಾಮ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts