ಸ್ನ್ಯಾಪ್​ಚಾಟ್​ನಲ್ಲಿ ಅರಳಿದ ಪ್ರೇಮ;ಪ್ರಿಯಕರನಿಗಾಗಿ ಚೀನಾದಿಂದ ಪಾಕಿಸ್ತಾನಕ್ಕೆ ತೆರಳಿದ ಸುಂದರಾಂಗಿ

Pak China
Published on

ಚೀನಾ: ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಸೀಮಾ ಹೈದರ್​ ಪಬ್​ಜಿ ಮೂಲಕ ಪರಿಚಯವಾದ ತಮ್ಮ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು. ಅದರಂತೆ ಭಾರತ ಮೂಲದ ಅ,ಂಜು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ನಸ್ರುಲ್ಲಾ ಎಂಬ ವ್ಯಕ್ತಿಯನ್ನು ಪಾಕಿಸ್ತಾನಕ್ಕೆ ತೆರಳಿ ಮತಾಂತರಗೊಂಡು ಮದುವೆಯಾಗಿದ್ದರು.

ಇದೀಗ ಪ್ರಕರಣ ಒಂದರಲ್ಲಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರಿಯಕರನನ್ನು ಭೇಟಿಯಾಗಲು ಚೀನಾದಿಂದ ಪಾಕಿಸ್ತಾಕ್ಕೆ ತೆರಳಿರುವುದಾಗಿ ವರದಿಯಾಗಿದೆ. ಮಹಿಳೆಯನ್ನು ಗಾವೊ ಪೆಂಗ್(21)​ ಎಂದು ಗುರುತಿಸಲಾಗಿದ್ದು, ಈಕೆ ತನ್ನ ಪ್ರಿಯಕರ ಜಾವೇದ್​(18)ನನ್ನು ಭೇಟಿಯಾಗಲು ಇಸ್ಲಾಮಾಬಾದ್​ಗೆ ತೆರಳಿದ್ದಾರೆ.

ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿರುವ ಬಜೌರ್​ ಟ್ರೈಬಲ್​ ಜಿಲ್ಲೆಯ ನಿವಾಸಿಯಾದ ಜಾವೇದ್​ ತನ್ನ ಪ್ರಿಯತಮೆಯನ್ನು ಸ್ವಾಗತಿಸಿದ ಬಳಿಕ ಆಕೆಯನ್ನು ತನ್ನ ಚಿಕ್ಕಪ್ಪನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಗಾವೊ ಪೆಂಗ್ ಹಾಗೂ ಜಾವೇದ್​​ ಮೂರು ವರ್ಷಗಳಿಂದ ಹಿಂದೆ ಸ್ನ್ಯಾಪ್​ಚಾಟ್​ನಲ್ಲಿ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Snap Chat Love Story

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಜಿಯಾವುದ್ದೀನ್​ ಜಾವೇದ್​ ಹಾಗೂ ಚೀನಾ ಮೂಲದ ಮಹಿಳೆಗೆ ಮೂರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಕಾಲಕ್ರಮೇಣ ಅದು ಪ್ರೀತಿಗೆ ತಿರುಗಿದೆ. ಮಹಿಳೆಯ ಪ್ರಯಾಣ ದಾಖಲೆಗಳು ಸರಿಯಿದ್ದು, ಮೊಹರಂ ಇರುವ ಕಾರಣ ಆಕೆಗೆ ಭದ್ರತೆ ಒದಗಿಸಿ ಎಲ್ಲೂ ಹೋಗದಂತೆ ನಿರ್ಭಂದಿಸಲಾಗಿದೆ.

ಮಹಿಳೆಯು ಇಸ್ಲಾಂಗೆ ಮತಾಂತರಗೊಂಡ ನಂತರ ಜಾವೇದ್​ ಜೊತೆ ಆಕೆಯ ಮದುವೆಯನ್ನು ಮಾಡಿಸಲಾಗುವುದು ಎಂದು ಪೊಲೀಸ್​ ಅಧಿಕಾರಿ ಜಿಯಾವುದ್ದೀನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net