ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್​ ಆಧಾರ್​ ಕಾರ್ಡ್​ ತಿರುಚಿದ ಆರೋಪ; ಯುವಕ ಅರೆಸ್ಟ್​

Aadhar Cardb Tamper
Published on

ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಅವರ ಆಧಾರ್​ ಕಾರ್ಡ್​ಗಳನ್ನು ತಿರುಚಿದ ಆರೋಪದ ಮೇಲೆ ಗುಜರಾತ್​ ಪೊಲೀಸರು ಬಿಹಾರದ ಮುಜಾಫರ್​ಪುರದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದೆ.

ಮುಜಾಫರ್​ಪುರ ಜಿಲ್ಲೆಯ ಸಾದತ್​ಪುರ ಪ್ರದೇಶದ ನಿವಾಸಿ ಅರ್ಪಣಾ ದುಬೆ ಅಲಿಯಾಸ್​ ಮದನ್​ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಕೇಶ್​ ಕುಮಾರ್​ ಬಂಧಿತ ಆರೋಪಿಯು ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಆರೋಪಿಯು ಆಧಾರ್​ ವೆಬ್​ಸೈಟ್​ನಲ್ಲಿ ಪ್ರಧಾನಿ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಜನುಮದಿನಗಳನ್ನು ಬದಲಾಯಿಸಿ ದುರುಪಯೋಗ ಪಡಿಸಿಕೊಂಡಿದ್ದಾನೆ.

Aadhar Cardb Tamper

ಈ ಕುರಿತು ಮೊದಲಿಗೆ ನಮಗೆ ಗುಜರಾತ್​ ಪೊಲೀಸರು ಮೊದಲಿಗೆ ನಮಗೆ ಪ್ರಧಾನಿ ಮೋದಿ ಸೇರಿದಂತೆ ಪ್ರಭಾವಿ ನಾಯಕರ ಆಧಾರ್​ ಕಾರ್ಡ್​ಗಳನ್ನು ವೆಬ್​ಸೈಟ್​ನಲ್ಲಿ ತಿರುಚಲು ಯತ್ನಿಸಲಾಗುತ್ತಿದೆ ಎಂದು ಕರೆ ಬಂದಿತ್ತು. ಆರೋಪಿಯ ಐಪಿ ಅಡ್ರೆಸ್​ ಬಿಹಾರದ ಮುಜಾಫರ್​ಪುರದಲ್ಲಿ ತೋರಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.

ಆ ನಂತರ ಸ್ಥಳೀಯ ಪೊಲೀಸರ ಸಹಾಯದಿಂದ ಅಧಿಕಾರಿಗಳು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಗುಜರಾತ್​ಗೆ ಕೊಂಡೊಯ್ದಿದ್ದಾರೆ ಎಂದು ಮುಜಾಫರ್​ಪುರ ವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಕೇಶ್​ ಕುಮಾರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net