ಪಾನಮತ್ತನಾಗಿ ವಿದ್ಯಾರ್ಥಿಗಳ ಎದುರಲ್ಲೇ ಮುಖ್ಯೋಪಾಧ್ಯಾಯನ ಅಶ್ಲೀಲ ವರ್ತನೆ; ಕರ್ತವ್ಯದಿಂದ ಅಮಾನತು

Class Room
Published on

ಲಖನೌ: ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನೋರ್ವ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳ ಮುಂಭಾಗ ಬೆತ್ತಲೆಯಾಗಿ ಮಲಗಿರುವ ಘಟನೆ ಉತ್ತರಪ್ರದೇಶದ ಬಹ್ರೈಚ್​ ಜಿಲ್ಲೆಯಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕನ ಕೃತ್ಯದ ವಿಡಿಯೋ ವೈರಲ್​ ಆಗಿದ್ದು, ಪ್ರಕರಣ ಸಂಬಂಧ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತಾದ ಶಿಕ್ಷಕ ದುರ್ಗಾ ಪ್ರಸಾದ್​ ಜೈಸ್ವಾಲ್​ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಅವ್ಯಕ್ತ್​ ರಾಮ್​ ತಿವಾರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಅರಿಯಬೇಕಿದೆ. ಅಮಾನತಾದ ಶಿಕ್ಷಕ ದುರ್ಗಾ ಪ್ರಸಾದ್​ ವಿದ್ಯಾರ್ಥಿಗಳ ಮುಂಭಾಗ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂದು ಸ್ಥಳೀಯರು ಹಾಗೂ ಪೋಷಕರು ದೂರು ನೀಡಿದ್ದರು.

ಶಿಕ್ಷಕನ ವರ್ತನೆಯಿಂದ ಅನೇಕ ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಎಂದು ಹಲವರು ದೂರಿದ್ದರು. ಈ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು. ತನಿಖಾ ವರದಿಯ ಆಧಾರದ ಮೇಲೆ ದುರ್ಗಾ ಪ್ರಸಾದ್​ನನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವ್ಯಕ್ತ್​ ರಾಮ್​ ತಿವಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net