More

  ಬೋಧಕೇತರ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸದಂತೆ ಸೂಚನೆ

  ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (ಬಿಎಲ್‌ಒ) ಹಾಗೂ ಬೋಧಕೇತರ ಕಾರ್ಯಗಳಿಗೆ ನಿಯೋಜಿಸದಂತೆ ಬಿಬಿಎಂಪಿ ವಿಶೇಷ ಆಯುಕ್ತರಿಗೆ (ಚುನಾವಣೆ) ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

  ಶಿಕ್ಷಕರು ಆಯಾ ತರಗತಿಯಲ್ಲಿ ನಿಗದಿ ಮಾಡಿರುವ ಪಠ್ಯವನ್ನು ಪೂರ್ಣಗೊಳಿಸಲು 180 ಮತ್ತು ಒಟ್ಟಾರೆ ಶಾಲಾ ಕೆಲಸದ ದಿನಗಳನ್ನು 244ಕ್ಕೆ ನಿಗದಿ ಮಾಡಿದೆ.

  ಆದರೆ, ಶಾಲಾ ಶಿಕ್ಷಕರನ್ನು ಜನಗಣತಿ, ಚುನಾವಣಾ ಕಾರ್ಯ, ಮಕ್ಕಳ ಗಣತಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಪರಿಣಾಮ, ಶಾಲಾ ಕರ್ತವ್ಯದ ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಂಕನ ಕಾರ್ಯಕ್ಕಾಗಿ/ಪಠ್ಯೇತರ ಚಟುವಟಿಕೆಗಳಿಗೆ 64 ದಿನಗಳನ್ನು ಬಳಕೆಯಾಗುತ್ತಿದೆ.

  ಇದನ್ನೂ ಓದಿ: ಐಫೋನ್​ಗಾಗಿ ಹೆತ್ತ ಮಗನನ್ನೇ ಮಾರಾಟ ಮಾಡಿದ ದಂಪತಿ

  ಉಳಿದ 180 ದಿನಗಳನ್ನು ಬೋಧನಾ ಕಾರ್ಯಕ್ಕೆ ನಿಗದಿ ಮಾಡಲಾಗಿದೆ. ಆದರೆ, ವಾಸ್ತವವಾಗಿ ಅಷ್ಟು ದಿನಗಳು ಬೋಧನಾ ಕಾರ್ಯಕ್ಕೆ ಲಭ್ಯವಾಗುತ್ತಿಲ್ಲ. ಇದರಿಂದ ಬೋಧನಾ ಕಾರ್ಯಗಳು ಕುಂಠಿತವಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

  ವಿದ್ಯಾರ್ಥೀಗಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಾಗಿ ಸ್ಪಂದಿಸಿ ಹಾಗೂ ಉತ್ತಮ ಲಿತಾಂಶ ತರುವ ದೃಷ್ಟಿಯಿಂದ ಸರ್ಕಾರವು ಹಲವು ಆದೇಶಗಳ ಮೂಲಕ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ನಿಯೋಜಿಸುವುದನ್ನು ನಿಷೇಧಿಸಿದೆ.

  ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆಗೆ ನಿಯೋಜಿಸುವಿದರಿಂದ ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳು ಉಲ್ಲಂಘನೆಯಾಗಲಿವೆ. ಆದ್ದರಿಂದ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ನಿಯೋಜಿಸದಂತೆ ಸೂಚಿಸಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts