More

    ಧರೆಗೆ ಉರುಳಿದ 200 ವರ್ಷದ ಹಳೆಯ ಮರ; ಇಬ್ಬರು ಮೃತ್ಯು!

    ಉತ್ತರಾಖಂಡ್: ಹರಿದ್ವಾರದ ಜ್ವಾಲಾಪುರ ಪ್ರದೇಶದಲ್ಲಿ ಮಂಗಳವಾರ 200 ವರ್ಷಗಳಷ್ಟು ಹಳೆಯದಾದ ಅರಳಿಮರವೊಂದು ಜನರ ಮೇಲೆ ಬಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

    ಗಾಳಿ-ಮಳೆ ರಭಸ ಹೆಚ್ಚಿರುವ ಕಾರಣ ಮರ ಮುರಿದುಬಿದ್ದಿದೆ. ಹರಿದ್ವಾರದ ಜ್ವಾಲಾಪುರ ಏರಿಯಾದಲ್ಲಿ ಅನ್ಸಾರಿ ಮಾರ್ಕೆಟ್​ ಬಳಿ ಈ ಘಟನೆ ನಡೆದಿದೆ. ಮೃತರಾದ ಇಬ್ಬರಲ್ಲಿ ಒಬ್ಬರು ಹರ್ಯಾಣದ ಸೋನಿಪತ್​ನಿಂದ ಹರಿದ್ವಾರಕ್ಕೆ ಬಂದಿದ್ದ ಪ್ರವಾಸಿಗರು ಎನ್ನಲಾಗಿದೆ.

    ಇದನ್ನೂ ಓದಿ: ಬೋರಾಯ್ತಾ ಬರೀ ಮಾತು?; ಜತೆಗಿರಬೇಕು ಶರೀರ ಶಾರೀರ

    ಬೃಹದಾಕಾರದ ಅಶ್ವತ್ಥ ಮರ ಬಿದ್ದು ಅವಘಡ ಉಂಟಾಗುತ್ತಿದ್ದಂತೆ ಪೊಲೀಸರು, ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮರ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮರದಡಿಗೆ ಸಿಲುಕಿದ್ದ ಎಲ್ಲರನ್ನೂ ರಕ್ಷಿಸಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

    ಈ ಬಗ್ಗೆ ಹೇಳಿಕೆ ನೀಡಿದ ಹರಿದ್ವಾರ ಎಸ್​ಎಸ್​ಪಿ ಅಜಯ್ ಸಿಂಗ್, “ಮಳೆ ಮತ್ತು ಚಂಡಮಾರುತದಿಂದಾಗಿ ಜ್ವಾಲಾಪುರ ಪ್ರದೇಶದಲ್ಲಿ ಮರವೊಂದು ಬಿದ್ದು, ಹಲವರು ಅದರಡಿಯಲ್ಲಿ ಹೂತು ಹೋಗಿದ್ದಾರೆ. ​ ‘200 ವರ್ಷ ಹಳೇದಾದ ಅಶತ್ಥ ಮರ ಉರುಳಿಬಿತ್ತು. ಅದರಡಿಯಲ್ಲಿ ಸಿಲುಕಿದವರಲ್ಲಿ ನಾಲ್ವರಿಗೆ ಹೆಚ್ಚಿನ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

    ಈಜುಕೊಳದಲ್ಲಿ ಮಿಂದೆದ್ದ ಎಮ್ಮೆಗಳು! ದಂಪತಿಗಾದ ನಷ್ಟದ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts