ತನ್ನಿಂದಲೇ ಮೋಸ ಹೋದ ಯುವತಿಗೆ ಇದೆಂಥಾ ಶಿಕ್ಷೆ ಕೊಟ್ಟ ಪಾಪಿ

Murder
Published on

ಕೊಲ್ಕತ್ತ: ಆಕೆಯಿನ್ನೂ 20 ವರ್ಷದ ಯುವತಿ. ಆತನ ಪ್ರೀತಿಗೆ ಬಿದ್ದಿದ್ದಳು. ಆತನ ಬಣ್ಣ ಬಯಲಾಗಿದ್ದಂತೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ದೂರಾಗಿದ್ದಳು. ಇದರಿಂದ ಕೆರಳಿದ ಪ್ರಿಯಕರ ಸೇಡು ತೀರಿಸಿಕೊಂಡ ಪರಿ ಮಾತ್ರ ಎಂಥವರ ಎದೆಯನ್ನು ನಡುಗಿಸುತ್ತದೆ.

ದಕ್ಷಿಣ ಕೋಲ್ಕತ್ತದ ರೀಜೆಂಟ್​ ಪಾರ್ಕ್​ ನಿವಾಸಿಯಾಗಿದ್ದ ಪ್ರಿಯಾಂಕಾ ಪುರಕಾಯ್ತ್​ ವುಮೆನ್ಸ್​ ಕ್ರಿಶ್ಚಿಯನ್​ ಕಾಲೇಜಿನಲ್ಲಿ ಓದುತ್ತಿದ್ದಳು. ಜಯಂತ್​ ಹಲ್ದಾರ್​ ಎಂಬುವವನ್ನು ಪ್ರೀತಿಸುತ್ತಿದ್ದಳು.

ಕೆಲ ದಿನಗಳ ಬಳಿಕ ಜಯಂತ್​ನಿಗೆ ಈಗಾಗಲೇ ಮದುವೆಯಾಗಿರುವ ವಿಚಾರ ಪ್ರಿಯಾಂಕಾಳಿಗೆ ಗೊತ್ತಾಗಿದೆ. ಹೀಗಾಗಿ ಆತನಿಂದ ದೂರಾಗಿದ್ದಳು. ಇದು ಜಯಂತ್​ ಕೋಪಕ್ಕೆ ಕಾರಣವಾಗಿದೆ.

ಬೆಳಗ್ಗೆ 8 ಗಂಟೆ ವೇಳೆಗೆ ಬೈಕ್​ನಲ್ಲಿ ಆನಂದಪಳ್ಳಿ ಎಂಬಲ್ಲಿದ್ದ ಪ್ರಿಯಾಂಕಾ ಮನೆಗೆ ಬಂದ ಜಯಂತ್​ ಆಕೆಯನ್ನು ತೀರಾ ಹತ್ತಿರದಿಂದ ಗುಂಡಿಟ್ಟು ಕೊಂದು ಪರಾರಿಯಾಗಿದ್ದಾನೆ.

ಪ್ರಿಯಾಂಕಾಳನ್ನು ಕೊಲ್ಲುವ ಉದ್ದೇಶದಿಂದಲೇ ಆರೋಪಿ ಮನೆ ಬಳಿ ಬಂದಿದ್ದ. ಆಕೆ ಮನೆಯಲ್ಲಿರುವುದನ್ನು ತಿಳಿದು ಬೆಳಗ್ಗೆಯೇ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನಿಗಾಗಿ ಶೋಧ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net