ಗರ್ಭಿಣಿಯಾದ ಅಪ್ರಾಪ್ತೆ ಮಗಳನ್ನು ಅತ್ಯಾಚಾರಿಗೆ ಮಾರಿದ ಪಾಲಕರು

Rape
Published on

ಬೆಂಗಳೂರು: ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಆಕೆಯ ಪಾಲಕರೇ 50 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಹೆಚ್ಚಿನ ಹಣದ ಆಸೆಗೆ ಬಿದ್ದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಗುಜರಾತ್​ನ ವಡೋದರ ಜಿಲ್ಲೆಯ ಶಿನೋರ್​ ತಾಲೂಕಿನಲ್ಲಿ ವಾಸವಾಗಿದ್ದ ವಿಕಾಸ್​ ವಾಸವ ಎಂಬುವನ ಜತೆಯಲ್ಲಿದ್ದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದು ತಿಳಿಯುತ್ತಿದ್ದಂತೆ ಆತನ ಬಳಿಗೆ ತೆರಳಿದ ಪಾಲಕರು 50 ಸಾವಿರ ರೂ.ಗಳ ವಹಿವಾಟು ಕುದುರಿಸಿದ್ದಾರೆ. ಹಣ ಪಡೆದು 17 ವರ್ಷದ ಆತನ ವಶಕ್ಕೆ ನೀಡಿದ್ದಾರೆ.

ಈ ವಿಷಯ ಬಾಲಕಿಗೂ ತಿಳಿದಿತ್ತು. ಆದರೆ, ಆತನೊಂದಿಗೆ ಲಿವ್​-ಇನ್​ ಸಂಬಂಧ ಬೆಳೆಸಿದ್ದ ಬಾಲಕಿ, ತಾನು ಸಂತೋಷವಾಗಿದ್ದ ಕಾರಣ ಪಾಲಕರ ದುಡ್ಡಿನ ವಹಿವಾಟು ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಇದಾದ ಬಳಿಕ ಪ್ರಕರಣ ತಿರುವು ಪಡೆದಿದೆ. ಬಾಲಕಿಯ ಸಂಬಂಧಿಯೊಬ್ಬ 50 ಸಾವಿರ ರೂ. ಕಡಿಮೆ ಮೊತ್ತವಾಯ್ತು, ಆಕೆ ಅಪ್ರಾಪ್ತಳಾಗಿರುವುದರಿಂದ 5 ಲಕ್ಷ ರೂ. ಕೇಳಬೇಕಿತ್ತು ಎಂದು ಹೇಳಿದ್ದಾನೆ.

ಇದರಿಂದ ಆಸೆಗೆ ಬಿದ್ದ ಬಾಲಕಿಯ ಅಪ್ಪ ಮತ್ತಷ್ಟು ಹಣ ಕೊಡುವಂತೆ ವಿಕಾಸ್​ನನ್ನು ಪೀಡಿಸಿದ್ದಾನೆ. ಆದರೆ ದಿನಗೂಲಿಯಾಗಿದ್ದ ಆತ ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಾನೆ. ಒತ್ತಡ ಹೆಚ್ಚಿದಾಗ ಬಾಲಕಿಯನ್ನು ಆಕೆಯ ಪಾಲಕರಲ್ಲಿಗೆ ಕಳುಹಿಸಿದ್ದಾನೆ.

ಇದೀಗ ಬಾಲಕಿಯು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಕ್ವಾರಂಟೈನ್​ ಕೇಂದ್ರಕ್ಕೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net