More

    ಒಂದಿಡೀ ದಿನವಾದರೂ ಸುಟ್ಟು ಬೂದಿಯಾಗಲಿಲ್ಲ ಕರೊನಾಪೀಡಿತನ ಶವ…!

    ಗಾಜಿಯಾಬಾದ್​: ಆತ 58 ವರ್ಷದ ಪ್ರತಿಷ್ಠಿತ ಬಿಜಿನೆಸ್​ ಮ್ಯಾನ್​. ಕರೊನಾ ಸೋಂಕಿಗೆ ಒಳಗಾದವನನ್ನು ಉಳಿಸಿಕೊಳ್ಳಲು ಕುಟುಂಬದ ಹರಸಾಹಸ ಪಟ್ಟರು. ಆದರೆ, ಸಾಧ್ಯವಾಗದೆ ಕೋವಿಡ್​ಗೆ ಬಲಿಯಾದ.

    ಸಾವಿನ ನಂತರವೂ ವಿಧಿ ಆ ಕುಟುಂಬವನ್ನು ಕಾಡಿದೆ. ಶವವನ್ನು ಅಂತ್ಯಸಂಸ್ಕಾರಕ್ಕೆಂದು ಚಿತಾಗಾರಕ್ಕೆ ಕೊಂಡೊಯ್ದರೂ 29 ತಾಸುಗಳಾದರೂ ಅದು ಬೆಂದಿಲ್ಲ. ಈ ಭಯಾನಕ ಅನುಭವದಿಂದ ಕುಟುಂಬ ತತ್ತರಿಸಿದೆ.

    ಇದನ್ನೂ ಓದಿ; ಭಾರತ- ಚೀನಾ ಸಂಘರ್ಷದ ವಿಡಿಯೋ; ಗಾಯಾಳು ಯೋಧನ ರಕ್ಷಣೆಗೆ ನಿಂತ ಜತೆಗಾರರು

    ಆಸ್ಪತ್ರೆ ಸಿಬ್ಬಂದಿಯೇ ಶವವನ್ನು ಚಿತಾಗಾರಕ್ಕೆ ಕೊಂಡೊಯ್ದಿದ್ದರು. ಅದನ್ನು ದಹಿಸಲು ವಿದ್ಯುತ್​ ಚಿತಾಗಾರದೊಳಕ್ಕೆ ತಳ್ಳಲಾಗಿತ್ತು. ಕೆಲ ಹೊತ್ತಿನಲ್ಲಿಯೇ ಚಿತಾಗಾರ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದೆ. ಹೀಗಾಗಿ ಅರೆಬೆಂದ ಶವ 29 ತಾಸುಗಳವರೆಗೆ ಅಂದರೆ ಒಂದಿಡೀ ದಿನಕ್ಕೂ ಹೆಚ್ಚುಕಾಲ ಚಿತಾಗಾರದಲ್ಲಿ ಅದೇ ಸ್ಥಿತಿಯಲ್ಲಿಯೇ ಇತ್ತು. ಇದು ಕುಟುಂಬದವರ ಮೇಲೆ ಭಾರಿ ಆಘಾತ ಉಂಟು ಮಾಡಿದೆ.
    ದಹನ ಕಾರ್ಯ ಮುಗಿಯುವವರೆಗೂ ಏನನ್ನೂ ತಿನ್ನಬಾರದೆಂಬ ಕಟ್ಟಳೆಯಿಂದ ಆ ಕುಟುಂಬ ಸದಸ್ಯರು ಒಂದಿಡೀ ದಿನವೂ ಏನನ್ನೂ ಸೇವಿಸದೇ ಕಾಲ ಕಳೆದಿದ್ದಾರೆ.

    ಇಂದಿರಾಪುರಂ ನಿವಾಸಿಯಾದ ವ್ಯಕ್ತಿ ಕರೊನಾದಿಂದ ಮೃತಪಟ್ಟ ಬಳಿಕ ಆಸ್ಪತ್ರೆ ಹಾಗೂ ಸರ್ಕಾರದ ಮಾರ್ಗಸೂಚಿಯನ್ವವೇ ಅಂತ್ಯಸಂಸ್ಕಾರಕ್ಕೆ ತರಲಾಗಿತ್ತು. ಚಿತಾಗಾರಾದಲ್ಲಿ ಉಂಟಾದ ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ಮಂಗಳವಾರ ಬೆಳಗ್ಗೆ ತರಲಾಗಿದ್ದ ಶವದ ದಹನ ಕಾರ್ಯ ಬುಧವಾರ ಮಧ್ಯಾಹ್ನ ವೇಳೆಗೆ ಪೂರ್ಣಗೊಂಡಿದೆ.

    ಇದನ್ನೂ ಓದಿ; ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾಪೀಡಿತರ ಶವಗಳನ್ನು ದಿಕ್ಕೆ ಇಲ್ಲದಂತೆ ಆಸ್ಪತ್ರೆ ಶವಾಗಾರದಲ್ಲಿ ಒಂದರ ಮೇಲೊಂದರಂತೆ ಪೇರಿಸಿಡಲಾಗಿತ್ತು. ಶವ ಸುಡಲು ಉಂಟಾದ ಅವ್ಯವಸ್ಥೆ ಜನರಲ್ಲಿ ಆತಂಕ ಮೂಡಿಸಿತ್ತು.

    ಎಚ್ಚರ…. ಭಾರತದ ವಿರುದ್ಧ ಸೈಬರ್​ ದಾಳಿಗಿಳಿದ ಚೀನಾ…! ಬ್ಯಾಂಕಿಂಗ್​ ವ್ಯವಸ್ಥೆ, ಎಟಿಎಂಗಳೇ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts