More

    ಕೇಳಿದ ಹಾಡು ಪ್ಲೇ ಮಾಡಲಿಲ್ಲ ಎಂದು ಪಬ್ ಬೌನ್ಸರ್‌ಗಳ ಜತೆ ಮಹಿಳೆಯರ ಜಟಾಪಟಿ; ಐವರ ವಿರುದ್ಧ ಎಫ್​ಐಆರ್​​ ದಾಖಲು

    ಘಾಜಿಯಾಬಾದ್: ತಾವು ಕೇಳಿದ ಹಾಡನ್ನು ಹಾಕಲು ಹಿಂದೇಟು ಹಾಕಿದ ಪಬ್​​ ವಿರುದ್ಧ ಗಲಾಟೆ ನಡೆಸಿದ ಮೂವರು ಮಹಿಳೆಯರ ಮೇಲೆ ಪಬ್​​ ಬೌನ್ಸರ್‌ಗಳು ಹಲ್ಲೆ ನಡೆಸಿರುವ ಘಟನೆ ಘಜಿಯಾಬಾದ್​​ನಲ್ಲಿ ವರದಿಯಾಗಿದೆ.

    ಇದನ್ನೂ ಓದಿ: N Ravikumar Hints About BJP-JDS Alliance | ಬಿಜೆಪಿ- ಜೆಡಿಎಸ್​​ ಮೈತ್ರಿ; ಸುಳಿವು ನೀಡಿದ ಎನ್​. ರವಿಕುಮಾರ್​

    ಘಟನೆಯ ವಿವರ: ಪಬ್‌ನ ಡಿಜೆಗೆ ತಮಗೆ ಇಷ್ಟವಾದ ಹಾಡನ್ನು ಹಾಕಲು ಓರ್ವ ಮಹಿಳೆ 1500 ರೂ. ಹಣ ಕೊಟ್ಟಿದ್ದಾರೆ. ಆದ್ರೆ, ಅದಕ್ಕೆ ನಿರಾಕರಿಸಿದ ಡಿಜೆಯೊಂದಿಗೆ ಮಹಿಳೆಯರು ತೀವ್ರ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಜತೆ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಪಬ್​​ ಬೌನ್ಸರ್​​ಗಳು ಮೂವರು ಮಹಿಳೆಯರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಅವರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆಯರ ಬಟ್ಟೆಯನ್ನು ಕಿಡಿಗೇಡಿಗಳು ಹರಿದಿದ್ದಾರೆ. ಸಹಾಯ ಪಡೆಯಲು ತಕ್ಷಣವೇ ಪೊಲೀಸರಿಗೆ ಕರೆ ಮಾಡುವ ವೇಳೆ ಬೌನ್ಸರ್​​ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 (ಹಲ್ಲೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಮಧ್ಯರಾತ್ರಿಯವರೆಗೆ ಅಧಿಕ ಸೌಂಡ್​​ ಬಳಸಿ ಹಾಡುಗಳನ್ನು ಪ್ಲೇ ಮಾಡಿದ ಡಿಜೆ ವಿರುದ್ಧ ಮತ್ತೊಂದು ಎಫ್‌ಐಆರ್ ಹಾಕಿದ್ದಾರೆ. ಮಿಕ್ಸರ್, ಸ್ಪೀಕರ್ ಸೇರಿದಂತೆ ಡಿಜೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).

    ನಟಿ ಕೃತಿ ಶೆಟ್ಟಿಯ ಹೊಸ ಲುಕ್​​ಗೆ ಫಿದಾ ಆದ ಫ್ಯಾನ್ಸ್​; ಇಲ್ಲಿವೆ ನೋಡಿ ಫೋಟೋಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts