More

    ಭಾರತ- ಚೀನಾ ಸಂಘರ್ಷದ ವಿಡಿಯೋ; ಗಾಯಾಳು ಯೋಧನ ರಕ್ಷಣೆಗೆ ನಿಂತ ಜತೆಗಾರರು

    ನವದೆಹಲಿ: ಭಾರತೀಯರ ಯೋಧರ ಮೇಲೆ ಚೀನಾ ಬರ್ಬರತೆಯನ್ನು ಮೆರೆದಿದೆ. ಪೀಪಲ್ಸ್​ ಲಿಬರೇಷನ್​ ಆರ್ಮಿಯ ಪೈಶಾಚಿಕ ಕೃತ್ಯಕ್ಕೆ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.

    ಈವರೆಗೆ ಘಟನೆ ನಡೆದ ಸ್ಥಳದ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಆದರೆ, ಇದೀಗ ಯೋಧರೊಬ್ಬರು ಸೆರೆ ಹಿಡಿದಿದ್ದಾರೆನ್ನಲಾದ ವಿಡಿಯೋವೊಂದು ಭಾರಿ ವೈರಲ್​ ಆಗಿದೆ.

    ದಾಳಿಯಲ್ಲಿ ಯೋಧನೊಬ್ಬ ನೆಲಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲು ಉಳಿದವರು ಗುಂಪಾಗಿದ್ದಾರೆ. ಇನ್ನುಳಿದವರಿ ಗಾಗಿ ಕೂಗುತ್ತಿದ್ದಾರೆ. ಹತ್ತಿರದಲ್ಲಿಯೇ ಮಿಲಿಟರಿ ವಾಹನವೊಂದು ನಿಂತಿದ್ದು, ಅದು ಯಾರಿಗೆ ಸೇರಿದ್ದು ಎನ್ನುವುದು ಖಚಿತವಾಗುತ್ತಿಲ್ಲ.

    ಇದನ್ನೂ ಓದಿ; ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

    ವಿಡಿಯೋದಲ್ಲಿ ಸರೋವರ ಸ್ಪಷ್ಟವಾಗಿ ಕಾಣುತ್ತಿದ್ದು, ಗಾಲ್ವಾನ್​​ ಪ್ರದೇಶದ ಸರೋವರ ಎಂದು ಗೊತ್ತಾಗುತ್ತದೆ. ಇದೇ ಸರೋವರಕ್ಕೆ ಜಿಗಿದರೂ ಚೀನಿಯರು ಬಿಡದೇ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಸರೋವರದ ಅದರ ತೀರದಲ್ಲಿಯೇ ಯೋಧರು ನಿಂತಿದ್ದಾರೆ. ಸಹಾಯಕ್ಕಾಗಿ ಹಾಗೂ ಇನ್ನುಳಿದವರ ಬಗ್ಗೆ ವಿಚಾರಿಸಲು ಕೂಗುತ್ತಿರುವುದು ಎರಡೂವರೆ ನಿಮಿಷಗಳ ಈ ವಿಡಿಯೋದಲ್ಲಿದೆ.
    ಈ ವಿಡಿಯೋ ಮೇ ತಿಂಗಳ ಮಧ್ಯದಲ್ಲಿ ನಡೆದ ಸಂಘರ್ಷದ್ದು ಎಂದು ಹೇಳಲಾಗಿದೆ. ಮೇಲಿನಿಂದ ಕಲ್ಲು ತೂರಾಟ ಶುರುವಾಗುತ್ತಿದ್ದಂತೆ ಪ್ರತಿ ದಾಳಿ ನಡೆಸುತ್ತಿರುವುದು ಇದರಲ್ಲಿದೆ.

    ಇಲ್ಲಿದೆ ವಿಡಿಯೋ ಲಿಂಕ್​……………

    ಲಡಾಖ್​ನ ಗಾಲ್ವಾನ್​ ಪ್ರದೇಶದಲ್ಲಿ ಭಾರತ- ಚೀನಾ ನಡುವಿನ ಸಂಘರ್ಷದ ವಿಡಿಯೋ…!

    ಭಾರತ- ಚೀನಾ ನಡುವೆ ಹಿಂಸಾತ್ಮಕ ಸಂಘರ್ಷ ನಡೆದಿದೆ. ಕಲ್ಲು ತೂರಾಟದಿಂದಾಗಿ ಗಾಯಗೊಂಡ ಯೋಧನೊಬ್ಬನನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಮತ್ತೆ ದಾಳಿ ನಡೆಸಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತದೆ. ಇದು ಮೇ ತಿಂಗಳ ಮಧ್ಯದಲ್ಲಿ ನಡೆದ ಸಂಘರ್ಷದ ವಿಡಿಯೋ ಎನ್ನಲಾಗಿದೆ. ( ಕೃಪೆ ಡೇಲಿ ಮೇಲ್​)

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜೂನ್ 17, 2020

    ಚೀನಾ ಸೈನಿಕರದ್ದು ಪೈಶಾಚಿಕ ಕೃತ್ಯ; ಗಾಯಾಳು ಭಾರತ ಯೋಧರು ತೆರೆದಿಟ್ಟ ಸತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts