ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಅಮ್ಮ-ಮಗಳ ಮೇಲೆ ಆನೆ ದಾಳಿ: ಪುತ್ರಿ ಸಾವು, ತಾಯಿಯ ಸ್ಥಿತಿ ಗಂಭೀರ

DVG Elephant Attck
Published on

ದಾವಣಗೆರೆ: ಬೆಳ್ಳಂಬೆಳಗ್ಗೆ ಆನೆ ದಾಳಿಗೆ ಹುಡುಗಿಯೊಬ್ಬಳು ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯ ಸೋಮಳಾಪುರ ಗ್ರಾಮದಲ್ಲಿ ನಡೆದಿದೆ.

ಕವನ (17) ಮೃತಪಟ್ಟ ದುರ್ದೈವಿ. ಸ್ವಂತ ಜಮೀನಿಗೆ ಅವರೆ ಕಾಯಿ ಬಿಡಿಸಲು ಹೋದಾಗ ಆನೆ ದಾಳಿ ಮಾಡಿದೆ. ತಾಯಿ ಮಂಜುಳಾ ಜೊತೆ ಕವನ ಜಮೀನಿಗೆ ಬಂದಿದ್ದಳು. ಅವರೆಕಾಯಿ ಬಿಡಿಸುವ ವೇಳೆ ಹಿಂದಿನಿಂದ ಆನೆ ಏಕಾಏಕಿ ದಾಳಿ ಮಾಡಿದೆ. ಸೊಂಡಿಲಿನಿಂದ ಇಬ್ಬರನ್ನೂ ಎತ್ತಿ ಬಿಸಾಡಿದೆ.

Elephant Attack DVG

ಘಟನೆಯಲ್ಲಿ ಕವನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಮಂಜುಳಾಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಇಬ್ಬರಿಗೆ ಸಣ್ಣಪುಟ್ಟ ಗಾಯ

ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಾಮುತ್ತ ಆನೆ ಸುತ್ತಾಡುತ್ತಿದೆ. ಬೆಳಗಿನ ಜಾವ 6 ಗಂಟೆ ಸುಮಾರಿಗೆ ಆನೆ ಕಾಣಿಸಿಕೊಂಡಿದೆ. ಆನೆ ದಾಳಿಯಿಂದ ಓರ್ವ ಮಹಿಳೆ ಹಾಗೂ ದಾವುಜ್ ನಾಯ್ಕ್ ಎನ್ನುವರಿಗೆ ಸಣ್ಣಪುಟ್ಟ ಗಾಯಗಾಳಗಿವೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

DVG Elephant 1

ಅನೆ ಕಾಣಿಸಿಕೊಂಡ ಹಿ‌ನ್ನಲೆ ಜನರು ಭಯಭೀತರಾಗಿದ್ದಾರೆ. ಯಾರು ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ‌ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಆನೆಯನ್ನು ಕಾಡಿಗಟ್ಟುವ ಕೆಲಸದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net