Reels Star : ಐಷಾರಾಮಿ ಜೀವನ ನಡೆಸಲು ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಚಿನ್ನಾಭರಣ ಕದಿಯುತ್ತಿದ್ದ ರೀಲ್ಸ್ ಸ್ಟಾರ್ ಒಬ್ಬಳನ್ನು ಬಂಧಿಸಲಾಗಿದೆ. 17 ಪವನ್ ಅಥವಾ 136 ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಕೊಲ್ಲಂ ಚಿತಾರಾದಲ್ಲಿ ಭಜನ್ಮಠ ಮೂಲದ ಮುಬೀನಾ ಎಂಬಾಕೆಯನ್ನು ಬಂಧನ ಮಾಡಲಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಆರೋಪಿ ಮುಬೀನಾ ಅವರ ಅತ್ತಿಗೆ ಮುನೀರಾ ಅವರ ಚಿನ್ನದ ಸರ, ಬಳೆಗಳು, ಕೈ ಸರಗಳು ಹಾಗೂ ಕಿವಿಯೋಲೆಗಳು ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿತ್ತು. ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿರುವ ವಿಷಯ ಮುನೀರಾ ಅವರಿಗೆ ಅಕ್ಟೋಬರ್ 10ರಂದು ಗೊತ್ತಾಗಿದೆ. ಮನೆಯ ಸಿಸಿಟಿವಿ ಪರಿಶೀಲಿಸಿದಾಗ ಸೆ.30ರಂದು ಬೆಳಗ್ಗೆ ಆರೋಪಿ ಮುಬೀನಾ ಮತ್ತೆ ಮುನೀರಾ ಮನೆಗೆ ಬಂದಿರುವುದು ಗೊತ್ತಾಯಿತು. ಮುಬೀನಾ ಬಂದು ಹೋದ ಬಳಿಕ ಮನೆಗೆ ಬೇರೆ ಯಾರೂ ಬಂದಿರಲಿಲ್ಲ. ಇದೇ ಅನುಮಾನದ ಮೇಲೆ ಮುನಿರಾ ಚಿತಾರ ಪೊಲೀಸರಿಗೆ ಕಳ್ಳತನದ ದೂರು ನೀಡಿದ್ದರು.
ಕಳೆದ ಜನವರಿಯಲ್ಲಿ ಮುಬೀನಾಳ ಸ್ನೇಹಿತೆ ಅಮಾನಿ ಕೂಡ ಚಿನ್ನಾಭರಣ ಕಳ್ಳತನದ ಬಗ್ಗೆ ಚಿತಾರಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರಿನಲ್ಲೂ ಮುಬೀನಾಳನ್ನು ಶಂಕಿತ ಆರೋಪಿ ಎಂದು ಉಲ್ಲೇಖಿಸಲಾಗಿತ್ತು. ಅಮಾನಿ ದೂರಿನನ್ವಯ ತನಿಖೆ ನಡೆಯುತ್ತಿರುವಾಗಲೇ ಮುಬೀನಾ ವಿರುದ್ಧ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಹೊಸ ದೂರನ್ನು ಸ್ವೀಕರಿಸಲಾಗಿದೆ. ಇದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಚಿತ್ತಾರ ಪೊಲೀಸರು, ಆರೋಪಿ ಮುಬೀನಾಳನ್ನು ಕೇಂದ್ರೀಕರಿಸಿ ತನಿಖೆ ಆರಂಭಿಸಿದ್ದರು.
ಮುಬೀನಾಳ ಪತಿ ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕನಾಗಿದ್ದು, ಇತ್ತೀಚೆಗಷ್ಟೇ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದರು. ಇತ್ತರ ಮುಬೀನಾ ಐಷಾರಾಮಿ ಜೀವನ ನಡೆಸುತ್ತಿರುವುದು ಪೊಲೀಸರಿಗೆ ಗೊತ್ತಾಯಿತು. ಐಷಾರಾಮಿ ಜೀವನ ನಡೆಸುವಷ್ಟು ಆರ್ಥಿಕ ಸಾಮರ್ಥ್ಯವನ್ನು ಮುಬೀನಾ ಹೊಂದಿರಲಿಲ್ಲ. ಇನ್ಸ್ಟಾಗ್ರಾಂ ಸ್ಟಾರ್ ಆಗಿದ್ದ ಮುಬೀನಾ ಲಕ್ಷಾಂತರ ರೂ. ಮೌಲ್ಯದ ಫೋನ್ ಬಳಸುತ್ತಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಮುಬೀನಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆರಂಭದಲ್ಲಿ ಮುಬೀನಾ ಕಳ್ಳತನವನ್ನು ಒಪ್ಪಿಕೊಳ್ಳಲಿಲ್ಲ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ದೂರಿಗೆ ಸಂಬಂಧಿಸಿದ ಎರಡೂ ಕಳ್ಳತನವನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ತಪ್ಪೊಪ್ಪಿಕೊಂಡರೂ ಶಿಕ್ಷೆಗೆ ಪುರಾವೆ ಬೇಕು! ಗಾಂಜಾ ಕೇಸಲ್ಲಿ ಆರೋಪಿ ಖುಲಾಸೆಗೊಳಿಸಿದ ಹೈಕೋರ್ಟ್
ಐಷಾರಾಮಿ ಜೀವನ ನಡೆಸುವುದಕ್ಕಾಗಿ ಕಳ್ಳತನ ಮಾಡಿದ್ದಾಗಿ ಮುಬೀನಾ ತಪ್ಪೊಪ್ಪಿಕೊಂಡಿದ್ದಾಳೆ. ಮುಬೀನಾ ಅವರ ಮನೆಯಲ್ಲಿ ಕದ್ದ ಚಿನ್ನ ಮತ್ತು ಕೆಲ ಚಿನ್ನಾಭರಣಗಳನ್ನು ಮಾರಾಟ ಮಾಡಿದಾಗ ಪಡೆದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಕೆಯ ಬಂಧನವನ್ನು ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ, ಮುಬೀನಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಮಾಡಲಾಗಿದೆ. (ಏಜೆನ್ಸೀಸ್)
ಅಯ್ಯೋ ಶ್ರುತಿ ಹಾಸನ್ಗೆ ಏನಾಯಿತು? ಸೌತ್ ಬ್ಯೂಟಿಯ ಕಾಲಿಗೆ ಗಾಯವಾಗಿದ್ದೇಕೆ? Shruti Haasan