ಅಮ್ಮನ ವಿರುದ್ಧ ದೂರು ಹೇಳಲು 130 ಕಿ.ಮೀ. ದೂರದ ಅಜ್ಜಿ ಮನೆಗೆ ಸೈಕಲ್​ನಲ್ಲೇ ಹೋದ ಹುಡುಗ!

Boy Cycling
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಮಕ್ಕಳು ಕೆಲವೊಮ್ಮೆ ತಂದೆ-ತಾಯಿಯ ವಿರುದ್ಧ ಅಜ್ಜಿ-ಅಜ್ಜನಿಗೆ ದೂರು ಹೇಳಿ ಬಚಾವಾಗುತ್ತಾರೆ. ಅವಿಭಕ್ತ ಕುಟುಂಬವಾಗಿ ಎಲ್ಲರೂ ಒಂದೇ ಕಡೆ ಇರುವಲ್ಲಿ ಇದು ಸಹಜ. ಆದರೆ ಇಲ್ಲೊಬ್ಬ ಹುಡುಗ ತನ್ನ ಅಮ್ಮನ ವಿರುದ್ಧ ದೂರು ಹೇಳಲು 130 ಕಿ.ಮೀ. ದೂರದಲ್ಲಿರುವ ಅಜ್ಜಿಮನೆಗೆ ಸೈಕಲ್​ನಲ್ಲೇ ಹೋಗಿದ್ದಾನೆ.

ಅಮ್ಮನೊಂದಿಗೆ ಜಗಳವಾಡಿದ ಈ ಹನ್ನೊಂದು ವರ್ಷದ ಹುಡುಗ ಸಿಟ್ಟು ಮಾಡಿಕೊಂಡಿದ್ದು, ಆ ಬಗ್ಗೆ ದೂರು ನೀಡಲು 130 ಕಿ.ಮೀ. ದೂರದಲ್ಲಿರುವ ಅಜ್ಜಿ ಮನೆಗೆ ಸೈಕಲ್​ನಲ್ಲೇ ಹೋಗಿದ್ದಾನೆ. ಇಷ್ಟು ದೂರ ಸಾಗಲು ಈತ ಸುಮಾರು 24 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾನೆ. ಚೀನಾದಲ್ಲಿ ಈ ಪ್ರಕರಣ ನಡೆದಿದ್ದು, ಈ ಬಾಲಕ ಮೀಜಿಯಾಂಗ್​ಗೆ ಸೈಕಲ್​ನಲ್ಲಿ ತೆರಳಿದ್ದ.

ಅಜ್ಜಿ ಮನೆಯ ಮಾರ್ಗದಲ್ಲಿ ಸುಸ್ತಾಗಿ ಒಬ್ಬನೇ ಕುಳಿತಿದ್ದ ಈ ಬಾಲಕನನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ದಣಿದಿದ್ದ ಬಾಲಕನನ್ನು ಕಾರ್ ಮೂಲಕ ಅಲ್ಲಿಂದ ಕರೆದೊಯ್ದ ಪೊಲೀಸರು ಬಳಿಕ ಅಜ್ಜಿ ಹಾಗೂ ಮನೆಯವರನ್ನು ಕರೆಸಿ ಒಪ್ಪಿಸಿದ್ದಾರೆ. ಮಗ ಅಜ್ಜಿ ಮನೆಗೆ ಹೋಗುತ್ತೇನೆ ಎಂದು ಹೆದರಿಸಲು ಹೇಳಿದ್ದ ಎಂದು ಸುಮ್ಮನಾಗಿದ್ದೆ ಎಂಬುದಾಗಿ ಆತನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net