ರಾಣೆಬೆನ್ನೂರ: ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಸೋಮವಾರ ನಾಮಪತ್ರ ಸಲ್ಲಿಕೆಗೆ 5 ಸಾವಿರ ರೂ. ನಾಣ್ಯಗಳನ್ನು ಠೇವಣಿಯಾಗಿ ನೀಡಿದ್ದು, ಚುನಾವಣಾಧಿಕಾರಿಗಳು ನಾಣ್ಯ ಎಣಿಕೆ ಮಾಡುವಲ್ಲಿ ಸುಸ್ತಾದರು.

ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ಮುಂದಿನ 5 ದಿನ ರಾಜ್ಯದ ಎಲ್ಲೆಲ್ಲಿ ಮಳೆಯಾಗಲಿದೆ?
ಹನುಮಂತಪ್ಪ ಕಬ್ಬಾರ ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಬಸ್ ನಿಲ್ದಾಣ ವೃತ್ತ, ಕುರುಬಗೇರಿ ಕ್ರಾಸ್, ಹಳೆ ಪಿ.ಬಿ. ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಇಬ್ರಾಹಿಂ ದೊಡ್ಮನಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ: ಪಾತಕಿ ಅತೀಖ್ ಅಹಮದ್ ಜತೆಗೆ ಸಹೋದರ ಅಶ್ರಫ್ ಅಹಮದ್ ಕೂಡ ಗುಂಡಿಗೆ ಬಲಿ!
1 ರೂ., 2 ರೂ. ಹಾಗೂ 5 ರೂ. ನಾಣ್ಯಗಳನ್ನು ಮೆರವಣಿಗೆ ಮಾಡಿದ ಹನುಮಂತಪ್ಪ ಕಬ್ಬಾರ ಚುನಾವಣಾಧಿಕಾರಿಗಳಿಗೆ ಠೇವಣಿಯಾಗಿ ಸ್ವೀಕರಿಸಲು ನೀಡಿದರು. ಇದನ್ನು ನೋಡಿದ ಅಧಿಕಾರಿಗಳು ಇಷ್ಟೊಂದು ಹಣ ಹೇಗೆ ಎಣಿಸಬೇಕು ಎಂದು ಯೋಚಿಸಿ, ನಾಣ್ಯಗಳನ್ನು ಸ್ವೀಕರಿಸಿ ಸಿಬ್ಬಂದಿಗೆ ಎಣಿಕೆ ಮಾಡಲು ತಿಳಿಸಿದರು. ನಂತರ ಸ್ಥಳೀಯ ಎಸ್‌ಬಿಐ ಬ್ಯಾಂಕ್‌ನವರನ್ನು ಕರೆಸಿ ಚಿಲ್ಲರೆ ಕೊಟ್ಟು ನೋಟು ಪಡೆದುಕೊಂಡು ಅಭ್ಯರ್ಥಿಗೆ ರಸೀದಿ ನೀಡಿದರು.
ಪ್ರಮುಖರಾದ ಆನಂದ ಕಾಳೆ, ಗುರುರಾಜ ಬುಳ್ಳಾಪುರ, ಹನುಮಂತಪ್ಪ ಕಟ್ಟಿಮನಿ, ಕಾಶೀಮ್ ಕಲ್ಲೇಗಾರ ಹಾಗೂ ನೂರಾರು ಜನ ಬೆಂಬಲಿಗರು ಪಾಲ್ಗೊಂಡಿದ್ದರು.
ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!