ಮೋದಿ @10 ಕೋಟಿ ಫಾಲೋವರ್ಸ್​..ಒಬಾಮಾ ನಂತರ ಜಗತ್ತಿನ ಪ್ರಭಾವಿ ನಾಯಕ!

modi
Published on

ನವದೆಹಲಿ: ಪ್ರಧಾನಿ ಮೋದಿ ವಿಶ್ವನಾಯಕ ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಇದಕ್ಕೆ ಇಂಬು ಕೊಡುವಂತೆ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನುಸರಿಸುವವರ ಸಂಖ್ಯೆ ಕೋಟಿಗಳನ್ನು ದಾಟಿ ಹೋಗುತ್ತಿದೆ. ಪ್ರಸ್ತುತ 'X' ನಲ್ಲಿ 10 ಕೋಟಿ ಫಾಲೋವರ್ಸ್ ಇದ್ದಾರೆ. ಇದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (13 ಕೋಟಿ) ನಂತರ ಮೋದಿ ಈ ಮೈಲಿಗಲ್ಲನ್ನು ತಲುಪಿದ ಮತ್ತೊಬ್ಬ ನಾಯಕ ಮತ್ತು ಪ್ರಭಾವಿ ವ್ಯಕ್ತಿಯಾಗಿದ್ದಾರೆ.

ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ಅನೇಕ ಸೆಲೆಬ್ರಿಟಿಗಳು ಮತ್ತು ಕ್ರೀಡಾ ಪಟುಗಳಿಗಿಂತ ಮೋದಿ ಅವರು 'ಎಕ್ಸ್' ನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ.

ಅಲ್ಲದೆ, ಹಿಂಬಾಲಕರ ವಿಷಯದಲ್ಲಿ ಅವರು ತಮ್ಮ ರಾಜಕೀಯ ವಿರೋಧಿಗಳಾದ ರಾಹುಲ್ ಗಾಂಧಿ (2.64 ಕೋಟಿ), ಕೇಜ್ರಿವಾಲ್ (2.75 ಕೋಟಿ), ಅಖಿಲೇಶ್ (1.90 ಕೋಟಿ), ಮಮತಾ ಬ್ಯಾನರ್ಜಿ (74 ಲಕ್ಷ) ಅವರಿಗಿಂತ ಬಹು ಎತ್ತರಕ್ಕೆ ತಲುಪಿದ್ದಾರೆ.

ಅದೇ ರೀತಿ ಪ್ರಸಿದ್ಧ ಕ್ರೀಡಾ ಪಟುಗಳಾದ ವಿರಾಟ್ ಕೊಹ್ಲಿ (6.4 ಕೋಟಿ), ನೇಮರ್ ಜೂನಿಯರ್ (6.3 ಕೋಟಿ), ಲೆಬ್ರಾನ್ ಜೇಮ್ಸ್ (5.2 ಕೋಟಿ) ಮತ್ತು ಟೇಲರ್ ಸ್ವಿಫ್ಟ್ (9.5 ಕೋಟಿ), ಲೇಡಿ ಗಾಗಾ (8.3 ಕೋಟಿ) ಮತ್ತು ಕಿಮ್ ಕಾರ್ಡಶಿಯಾನ್ (7.52 ಕೋಟಿ) ನಂತಹ ಖ್ಯಾತನಾಮರನ್ನು ಮೋದಿಯವರು ಹಿಂದಿಕ್ಕಿದ್ದಾರೆ. 10 ಕೋಟಿ ಗಡಿ ತಲುಪಿದ್ದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net