

ಮುಂಬೈ: ಬಾಲಿವುಡ್ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಜೀನತ್ ಅಮನ್(Zeenat Aman) ಕೂಡ ಒಬ್ಬರು. ಈ ನಟಿ 70ರ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಮಾದಕ ನಟನೆಯಿಂದ ಪ್ರೇಕ್ಷಕರನ್ನು ಹುಚ್ಚರನ್ನಾಗಿ ಮಾಡಿದ್ದರು. ಇಂದಿಗೂ ಜೀನತ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಿರಿಯ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಸದ್ಯ ನಟಿ ಹರೇ ರಾಮ ಹರೇ ಕೃಷ್ಣ ಚಿತ್ರದ 'ದಮ್ ಮಾರೋ ದಮ್' ಹಾಡಿನ ಚಿತ್ರೀಕರಣದ ಸಮಯದಲ್ಲಿ ಆಸಕ್ತಿಕರ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
1971ರ ಸಮಯದಲ್ಲಿ ಹಿಟ್ ಆಗಿದ್ದ ದಮ್ ಮಾರೋ ದಮ್ ಹಾಡಿನಲ್ಲಿ ಜೀನತ್ ಅಮಾನ್ ಹಿಪ್ಪಿಗಳ ನಡುವೆ ಕುಡಿದು ಹೋಗುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ದೇವ್ ಆನಂದ್ ಅವರ ಸಹೋದರಿಯ ಪಾತ್ರವನ್ನು ಜೀನತ್ ನಿರ್ವಹಿಸಿದ್ದಾರೆ. ಸಿನಿಮಾಕ್ಕಾಗಿ ದೇವ್ ಆನಂದ್ ಅವರು ಸಿನಿಮಾಗಾಗಿ ತುಂಬಾ ಶ್ರಮಿಸಿದ್ದಾರೆ. ದೇವ್ ಆನಂದ್ ಅವರು ದೃಶ್ಯಗಳು ನೈಜವಾಗಿ ಕಾಣಬೇಕೆಂದ ಬಯಸಿದ್ದರು. ಇದಕ್ಕಾಗಿ ಚಿಲ್ಲಮ್ ಅನ್ನು ಧೂಮಪಾನ ಮಾಡಲು ನಿರ್ಧರಿಸಿದರು ಎಂದು ತಿಳಿಸಿದರು.
ಕಠ್ಮಂಡುವಿನಲ್ಲಿ ದಮ್ ಮಾರೋ ದಮ್ ಚಿತ್ರೀಕರಣ ನಡೆಸುತ್ತಿದ್ದೇವು. ದೇವ್ ಆನಂದ್ ಈ ಹಾಡಿಗಾಗಿ ಬೀದಿಗಳಿಂದ ಕೆಲವು ಹಿಪ್ಪಿಗಳನ್ನು ಆಯ್ಕೆ ಮಾಡಿ ಕರೆತಂದಿದ್ದರು. ಹಿಪ್ಪಿಗಳು ಬಾಲಿವುಡ್ ಚಿತ್ರದಲ್ಲಿ ಕೆಲಸ ಮಾಡಲು ತುಂಬಾ ಸಂತೋಷವಾಗಿದ್ದರು. ನೇಪಾಳದಲ್ಲಿ ಅವರು ತಮ್ಮ ಚಿಲ್ಲಮ್ಗಳಲ್ಲಿ ಹ್ಯಾಶಿಶ್ ಪ್ಯಾಕ್ಗಳನ್ನು ಹೊಂದಿದ್ದರು ಮಾತ್ರವಲ್ಲದೆ ಅವರಿಗೆ ಉಚಿತ ಆಹಾರವನ್ನು ಸಹ ಪಡೆಯುತ್ತಿದ್ದರು ಎಂದು ತಿಳಿಸಿದರು.
ಸದ್ಯ ಅವರ ಪಾತ್ರದ ಬಗ್ಗೆ ತಿಳಿಸಿದರ ಅವರು, ನನಗೆ ಆಗ ಕೇವಲ 20 ವರ್ಷ ವಯಸ್ಸಾಗಿತ್ತು. ಟೇಕ್ಗಾಗಿ ಹಿಪ್ಪಿಗಳ ಬಳಿ ಇದ್ದ ಚಿಲ್ಲಮ್ನಿಂದ ಲಾಂಗ್ ಪಫ್ಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ಟೇಕ್ ನಂತರ ಪಫ್ ಪಡೆಯುತ್ತಿದ್ದರು. ಚಿತ್ರೀಕರಣದ ಅಂತ್ಯದ ವೇಳೆಗೆ ಅಮಲೇರಿತ್ತು. ಆ ಸ್ಥಿತಿಯಲ್ಲಿ ನಾನು ಹೋಟೆಲ್ಗೆ ಹಿಂತಿರುಗುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹೋಟೆಲ್ಗೆ ಹಿಂತಿರುಗಿದಾಗ ತಲೆ ಸುತ್ತುವ ಮತ್ತು ಅಹಿತಕರ ಅನುಭವವಾಗಿತ್ತು ಎಂದು ತಿಳಿಸಿದ್ದಾರೆ.
ಚಿತ್ರೀಕರಣ ಸಮಯದಲ್ಲಿ ಏನಾಯಿತು ಎಂದು ನನ್ನ ತಾಯಿಗೆ ತಿಳಿದಾಗ ಅವರು ಕೋಪಗೊಂಡರು. ನನಗೆ ಡ್ರಗ್ಸ್ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಂಡದ ಸಿಬ್ಬಂದಿಗೆ ಬೈದರು. ಅದೃಷ್ಟವಶಾತ್ ನಾನು ಅವರ ಕೋಪದಿಂದ ಪಾರಾದೆ ಎಂದು ಜೀನತ್ ಹೇಳಿದರು.(ಏಜೆನ್ಸೀಸ್)