

ಕನ್ನಡದ ಮುಂಚೂಣಿಯ ಮನರಂಜನಾ ವಾಹಿನಿ ಜೀ಼ ಕನ್ನಡ ಈ ವಾರಾಂತ್ಯಕ್ಕೆ ಮೂರು ಮಹತ್ತರ ಕಾರ್ಯಕ್ರಮಗಳ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದೆ.
ಈ ಶನಿವಾರ ಮತ್ತು ಭಾನುವಾರ ರಾತ್ರಿ 9.00 ಗಂಟೆಗೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿರುವ ನೆಚ್ಚಿನ ತಾರೆಯರ ಕುರಿತು ‘ಲಾಕ್ ಡೌನ್ ಡೈರೀಸ್’ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಿದ್ಧಪಡಿಸಲಾಗಿದೆ. ಜನಪ್ರಿಯ ತಾರೆಯರು ತಮ್ಮ ಲಾಕ್ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಈ ಕಾರ್ಯಕ್ರಮದಲ್ಲಿರಲಿದೆ.
ಅದೇ ರೀತಿ ಸರಿಗಮಪ ಕಾರ್ಯಕ್ರಮದ ನಿರೂಪಕಿ ಅನುಶ್ರೀ, `ಕಾಫಿ ವಿಥ್ ಅನು’ ಕಾರ್ಯಕ್ರಮವೊಂದರ ಜತೆ ಆಗಮಿಸುತ್ತಿದ್ದಾರೆ. ತರಲೆ, ಹಾಸ್ಯ, ಮಾತುಕತೆಯ ಮೂಲಕ ತಾರೆಯರ ಕಾಣದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಅನುಶ್ರೀ ಅವರೊಂದಿಗೆ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ‘ಕಾಫಿ ವಿಥ್ ಅನು’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಜೀ಼ ಕನ್ನಡ ವಾಹಿನಿಯ ಸರೆಗಮಪ ಕಾರ್ಯಕ್ರಮದ 25ನೇ ಯಶಸ್ವಿ ವರ್ಷಗಳ ಸಂಭ್ರಮಾಚರಣೆಗೆ ಮೇ 23 ಶನಿವಾರ ಸಂಜೆ 4.30ಕ್ಕೆ ಲೈವಥಾನ್ ಡಿಜಿಟಲ್ ಮ್ಯೂಸಿಕ್ ಕನ್ಸರ್ಟ್ ಆಯೋಜಿಸಿದೆ. ಸಂಗೀತದ ಮೂಲಕ ಜನರನ್ನು ಒಗ್ಗೂಡಿಸಲು ಮತ್ತು ಈ ಸಾಂಕ್ರಾಮಿಕದ ಸಮಯದಲ್ಲಿ ಮನೆಯಲ್ಲಿಯೇ ರಂಜಿಸಲು ಆಯೋಜಿಸಿದೆ. ಭಾನುವಾರ ಸಂಜೆ 7.00 ಗಂಟೆಗೆ `ಒಂದೇ ದೇಶ, ಒಂದೇ ರಾಗ’ ಹೆಸರಿನಲ್ಲಿ ಈ ಸಂಗೀತ ಕಾರ್ಯಕ್ರಮ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.