Zaheer Khan: ಮುಂಬರುವ ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಳ್ಳಲಿರುವ ಭಾರತ ತಂಡದ ಮಾಜಿ ಹಿರಿಯ ಆಟಗಾರ ಜಹೀರ್ ಖಾನ್, ಟೀಮ್ ಇಂಡಿಯಾದ ಭವಿಷ್ಯದ ಕ್ಯಾಪ್ಟನ್ ಯಾರು? ಆ ಆಟಗಾರನ ಸಾಮರ್ಥ್ಯವೇನು ಎಂಬುದರ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
“ಭವಿಷ್ಯದಲ್ಲಿ ಟೀಮ್ ಇಂಡಿಯಾಗೆ ಒಬ್ಬ ಒಳ್ಳೆಯ ಕ್ಯಾಪ್ಟನ್ ಅಗತ್ಯತೆ ಇದೆ ಎಂದರೆ ಅದು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಹೀಗಾಗಿ ಅವರ ಕೌಶಲ್ಯಗಳನ್ನು ಗಮನಿಸಿದ್ದೇನೆ. U-19 ವಿಶ್ವಕಪ್‌ನಿಂದ ಹಿಂತಿರುಗಿದ ರಿಷಭ್, ಸದಾ ತಮ್ಮ ಆಟದ ಬಗ್ಗೆ ನಿರ್ಭೀತ ವಿಧಾನವನ್ನು ಹೊಂದಿದ್ದಾರೆ ಎಂಬುದು ನಿಜಕ್ಕೂ ಗಮನಾರ್ಹ. ಅವರೊಬ್ಬ ಉತ್ತಮ ನಾಯಕ. ಅದರಲ್ಲಿ ಅನುಮಾನವಿಲ್ಲ. ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅವರ ಮೇಲೆ ಭಾರೀ ನಿರೀಕ್ಷೆಗಳು ಮೂಡಿವೆ” ಎಂದರು.
“ಜನರು ಸಹ ರಿಷಭ್ ಪ್ರದರ್ಶನದ ಮೇಲೆ ಅಪಾರ ಭರವಸೆಯನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ರಿಷಭ್ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಬಹುದು. ಆ ಸಾಮರ್ಥ್ಯ ಅವರಿಗಿದೆ. ಪ್ರಸ್ತುತ ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕನ ಜವಾಬ್ದಾರಿ ತೆಗೆದುಕೊಂಡಿರುವ ಪಂತ್ಗೆ ಮುಂದಿನ ದಿನಗಳಲ್ಲಿ ಕ್ಯಾಪ್ಟನ್ಸಿ ಬಗ್ಗೆ ಎಲ್ಲವೂ ತಿಳಿಯಲಿದೆ. ದಿನ ಕಳೆಯುತ್ತ ಅವರಿಗೂ ನಾಯಕತ್ವದ ಮಹತ್ವ ಅರ್ಥವಾಗುತ್ತೆ. ಈ ವಿಷಯದಲ್ಲಿ ನಾವು ಅವರಿಗೆ ಖಂಡಿತ ಸಹಾಯ ಮಾಡ್ತೇವೆ” ಎಂದು ಜಹೀರ್ ಹೇಳಿದ್ದಾರೆ.
IPL ಹರಾಜಿನಲ್ಲಿ ದುಬಾರಿ ಆಟಗಾರ
ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಎರಡು ದಿನಗಳ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಪಾಲಾದ ರಿಷಭ್ ಪಂತ್, ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಯಾದರು. ಕೇವಲ ಈ ಹರಾಜಿಗೆ ಮಾತ್ರ ಸೀಮಿತವಾಗದ ಪಂತ್, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಸಾಕ್ಷಿಯಾಗಿದ್ದಾರೆ. ಸದ್ಯ ಕ್ರಿಕೆಟ್ ಪ್ರಿಯರ ಚಿತ್ತ ಪಂತ್ನತ್ತ ಮೂಡಿದ್ದು, ದುಬಾರಿ ಆಟಗಾರ ಎನಿಸಿಕೊಂಡಿರುವ ರಿಷಭ್ 18ನೇ ಐಪಿಎಲ್ ಆವೃತ್ತಿಯಲ್ಲಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ಸಾವಿರಾರು ವರ್ಷಗಳ ಹಿಂದೆಯೇ ಕಬ್ಬಿಣದ ಯುಗ ತಮಿಳುನಾಡಿನಲ್ಲಿ ಆರಂಭ! ಇದಕ್ಕೆ ಈ ಪುರಾವೆಗಳೇ ಜ್ವಲಂತ ಸಾಕ್ಷಿ | Iron Age