ನವದಹೆಲಿ: ಕ್ರಿಕೆಟಿಗ ಯುವರಾಜ್ ಸಿಂಗ್(Yuvraj Singh) ಹ್ಯಾಝೆಲ್ ಕೀಚ್ ಜತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಹೇಜಲ್ ಅಲ್ಲದೆ ಯುವರಾಜ್ ಹೆಸರು ಮದುವೆಗೂ ಮುನ್ನವೇ 4 ನಟಿಯರಿಗೆ ತಳುಕು ಹಾಕಿಕೊಂಡಿದೆ. ಆದರೀಗ ಆಸೀಸ್ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾರ್ನ್ ಜತೆಗಿನ ಶೋನಲ್ಲಿನ ಸಂದರ್ಶನದಲ್ಲಿ 2007-08ರಲ್ಲಿ ಜನಪ್ರಿಯ ನಟಿಯೊಂದಿಗೆ ಡೇಟಿಂಗ್(Dating) ಮಾಡುವಾಗ ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ.
ಇದನ್ನು ಓದಿ: ಏಕಕಾಲದಲ್ಲಿ ಹಲವರೊಂದಿಗೆ ಡೇಟಿಂಗ್ ಮಾಡಿದ್ದೆ, ಆದರೀಗ..; Kalki Koechlin ಹೇಳಿದ್ದೇನು?
2007-08ರ ಆಸ್ಟ್ರೇಲಿಯ ಪ್ರವಾಸದಲ್ಲಿದ್ದೆ. ಆ ಸಮಯದಲ್ಲಿ ತಮ್ಮ ವೃತ್ತಿಜೀವನದಲ್ಲಿ ಒತ್ತಡದ ಸಮಯವನ್ನು ಎದುರಿಸುತ್ತಿದ್ದು, ಅದರ ಕಡೆ ಮಾತ್ರ ಗಮನ ಹರಿಸಬೇಕು ಎಂದು ನಟಿಯೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾಗಿ ಬಹಿರಂಗಪಡಿಸಿದ್ದಾರೆ. 2007-08ರಲ್ಲಿ ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದೆ. ಆ ಸಮಯದಲ್ಲಿ ನಾನು ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೆ. ನಾನು ಆ ನಟಿಯ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಈಗ ಆಕೆ ವೃತ್ತಿಜೀವನದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಅವಳು ಅಡಿಲೇಡ್ (ಆಸ್ಟ್ರೇಲಿಯಾ)ನಲ್ಲಿ ಶೂಟಿಂಗ್ ಮಾಡುತ್ತಿದ್ದಳು. ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿರುವುದರಿಂದ ನಮಗೆ ಸಮಯ ಸಿಗುವುದಿಲ್ಲ ಎಂದು ಹೇಳಿದೆ.
ಆದರೆ ನನ್ನ ಭೇಟಿಯಾಗಲೇಂದು ಅಡಿಲೇಡ್‌ನಿಂದ ಕ್ಯಾನ್‌ಬೆರಾಗೆ ಬಸ್ನಲ್ಲಿ ನನ್ನನ್ನು ಹಿಂಬಾಲಿಸಿದ್ದರು. ಆಕೆಯನ್ನು ಕೇಳಿದೆ ನೀವು ಇಲ್ಲಿ ಏನು ಮಾಡುತ್ತಿದ್ದೀರಿ ಎಂದು. ಅದಕ್ಕೆ ಅವಳು ನಾನು ನಿಮ್ಮೊಂದಿಗೆ ಸಮಯ ಕಳೆಯಲು ಬಯಸುತ್ತೇನೆ ಎಂದು ಉತ್ತರಿಸಿದಳು. ಬಳಿಕ ನಾವು ಆ ರಾತ್ರಿ ಭೇಟಿಯಾಗಿ ಮಾತನಾಡಲು ಆರಂಭಿಸಿದೇವು. ನೀವು ನಿಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸುತ್ತೀರಿ ಮತ್ತು ನಾನು ನನ್ನ ವೃತ್ತಿಜೀವನದತ್ತ ಗಮನ ಹರಿಸಬೇಕು ಏಕೆಂದರೆ ನಾನು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದೇನೆ, ಇದರ ಅರ್ಥವೇನೆಂದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ ಎಂದು ಆಕೆಗೆ ಹೇಳಿದೆ.
ನಾವು ಅಡಿಲೇಡ್‌ನಿಂದ ಕ್ಯಾನ್‌ಬೆರಾಗೆ ಹೋಗುತ್ತಿದ್ದೆವು ಆದ್ದರಿಂದ ಅವರು ನನ್ನ ಬ್ಯಾಗ್ ಅನ್ನು ಪ್ಯಾಕ್ ಮಾಡಿದರು. ಬೆಳಗ್ಗೆ ನಾನು ಕೇಳಿದೆ ನನ್ನ ಶೂಗಳು ಎಲ್ಲಿವೆ ಎಂದು ಅದಕ್ಕೆ ಆಕೆ ನಾನು ಪ್ಯಾಕ್ ಮಾಡಿದೆ ಎಂದು ಹೇಳಿದರು. 10 ನಿಮಿಷವಿತ್ತು ಬಸ್ಗೆ ಹೋಗಲು, ನಾನು ಬಸ್ಸಿನಲ್ಲಿ ಹೇಗೆ ಹೋಗಲಿ ಎಂದು ಕೇಳಿದೆ, ಅದಕ್ಕೆ ಅವರು ನನ್ನ ಶೂ ಧರಿಸಿ ಎಂದು ಹೇಳಿದರು. ಆ ಶೂಗಳಲ್ಲಿ ಪಿಂಕ್ ಸ್ಲಿಪ್ ಇತ್ತು. ಬಸ್ನಿಂದ ಏರ್ಪೋರ್ಟ್ಗೆ ಹೋಗಬೇಕಿತ್ತು. ನಾನು ಅದೇ ಶೂಗಳನ್ನು ಧರಿಸಿದೆ. ಅದನ್ನು ಮರೆಮಾಚಲು ನಾನು ನನ್ನ ಬ್ಯಾಗ್ ಅನ್ನು ಮುಂದೆ ಹಿಡಿದೆದ್ದೆ. ಅದನ್ನು ನೋಡಿದ ನಮ್ಮ ಹುಡುಗರು ಚಪ್ಪಾಳೆ ತಟ್ಟುತ್ತಿದ್ದರು. ಏರ್ಪೋರ್ಟ್ನಲ್ಲಿ ಹೊಸ ಶೂ ತೆಗೆದುಕೊಳ್ಳವವರೆಗೂ ನಾನು ಅದನ್ನೇ ಧರಿಸಿದ್ದೆ ಎಂದು ಯುವಿ ಹೇಳಿದ್ದಾರೆ.
ನೆಟ್ಟಿಗರು ಯುವರಾಜ್ ಸಿಂಗ್ ಹೇಳಿದ ಘಟನೆಯಲ್ಲಿನ ನಟಿಯನ್ನು ದೀಪಿಕಾ ಪಡುಕೋಣೆ ಎಂದು ಊಹಿಸುತ್ತಿದ್ದಾರೆ. ಜತೆಗೆ ಯುವಕಾಜ್ ಸಿಂಗ್ ಮಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಸಮಯದಲ್ಲಿ ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್ ಜತೆಯಲ್ಲಿ ಆಸ್ಟ್ರೇಲಿಯಾದಲ್ಲಿ ಬಚ್ನಾ ಏ ಹಸೀನೋ ಚಿತ್ರದ ಚಿತ್ರೀಕರಣದಲ್ಲಿದ್ದರು ಎಂದು ಒಬ್ಬರು ಪ್ರತಿಕ್ರಿಯಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಾಗ ವಿಶೇಷವಾಗಿ ವರ್ಷಗಳ ಹಿಂದೆ ಕೊನೆಗೊಂಡಿರುವ ಹಳೆಯ ಸಂಬಂಧದ ಬಗ್ಗೆ ಚರ್ಚಿಸುವ ಅವಶ್ಯಕತೆ ಇರಲಿಲ್ಲ. ಗಿಲ್‌ಕ್ರಿಸ್ಟ್ ಮತ್ತು ವಾನ್ ಅವರ ಮುಂದೆ ಇದನ್ನು ಪ್ರಸ್ತಾಪಿಸುವುದ ಬೇಕಿರಲಿಲ್ಲ. ಕ್ರಿಕೆಟ್ ಸಂದರ್ಶನದಲ್ಲಿ ಇಂತಹ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಕಿತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಯುವರಾಜ್ ಸಿಂಗ್-ಹ್ಯಾಝೆಲ್ ಕೀಚ್, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಈ ಸಮಯದಲ್ಲಿ ಬಹಳ ಹಿಂದೆಯೇ ಬ್ರೇಕಪ್ ಆಗಿ ಮುಂದುವರಿದಿರುವಾಗ ನಟಿಯನ್ನು ಉಲ್ಲೇಖಿಸಿ ಮಾತನಾಡುವುದು ಸೂಕ್ತವಲ್ಲ ಎಂದು ಅಭಿಮಾನಿಗಳು ಉತ್ತರಿಸುತ್ತಿದ್ದಾರೆ. ಹೇಜಲ್ ಅವರನ್ನು ಮದುವೆಯಾಗುವ ಮೊದಲು ಯುವರಾಜ್ ಅವರ ಹೆಸರು ಕಿಮ್ ಶರ್ಮಾ, ದೀಪಿಕಾ ಪಡುಕೋಣೆ, ನೇಹಾ ಧೂಪಿಯಾ ಮತ್ತು ರಿಯಾ ಸೇನ್ ಅವರೊಂದಿಗೆ ತಳಕು ಹಾಕಿಕೊಂಡಿತ್ತು. (ಏಜೆನ್ಸೀಸ್)