2 ಗರ್ಭಾಶಯದಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಈ ಅಪರೂಪದ ಘಟನೆ ಕುರಿತು ವೈದ್ಯರು ಹೇಳಿದ್ದೇನು? Two Uteruses Gives Birth To Twins

Untitled-design-2024-09-29T134219.009
Published on

ಬೀಜಿಂಗ್​​: ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಲ್ಲಿ ಏನು ವಿಶೇಷತೆ ಎಂದು ಯೋಚಿಸುತ್ತಿದ್ದೀರಾ? ಎರಡು ಗರ್ಭಾಶಯಗಳ ಮೂಲಕ ಎರಡು ಮಕ್ಕಳಿಗೆ ಜನ್ಮ(Two Uteruses Gives Birth To Twins) ನೀಡಿರುವ ವಿಶೇಷ ಪ್ರಕರಣವೊಂದು ಚೀನಾದಲ್ಲಿ ಬೆಳಕಿಗೆ ಬಂದಿದೆ. ಈ ಅಪರೂಪದ ಘಟನೆ ವೈದ್ಯ ಲೋಕದ ಗಮನ ಸೆಳೆದಿದೆ. ಲಿ ಎಂಬ ಹೆಸರಿನ ಮಹಿಳೆ ಶಾಂಕ್ಸಿ ಪ್ರಾಂತ್ಯದ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಸಾಮಾನ್ಯವಾಗಿ, ಎರಡು ಗರ್ಭಾಶಯ ಹೊಂದಿರುವ ಮಹಿಳೆಯರು ಗರ್ಭಿಣಿಯಾಗುವುದರಲ್ಲಿ ಯಾವುದೇ ಸಮಸ್ಯೆ ಎದುರಿಸದಿದ್ದರೂ, ವಿಶೇಷ ಸಮಸ್ಯೆ ಅವರಿಗೆ ಕಾಡುತ್ತದೆ. ಅದೆನೆಂದರೆ ಒಂದು ಗರ್ಭಾಶಯವು ಸಾಮಾನ್ಯ ಸ್ಥಳದಲ್ಲಿದ್ದರೆ ಮತ್ತೊಂದು ಗರ್ಭಕಂಠದಲ್ಲಿ ಬೆಳೆಯಬಹುದು. ಈ ರೀತಿಯ ಎರಡು ಗರ್ಭಾಶಯ ಇರುವುದು ವಿಶ್ವದಾದ್ಯಂತ ಶೇ.0.3 ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ.

ಚೀನಾದ ಎಂಟೂವರೆ ತಿಂಗಳ ಗರ್ಭಿಣಿಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂತಹ ಘಟನೆಗಳು ಲಕ್ಷಕ್ಕೆ ಒಂದರಂತೆ ನಡೆಯುತ್ತವೆ ಎನ್ನುತ್ತಾರೆ ವೈದ್ಯರು. ಈ ಅವಧಿಯಲ್ಲಿ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಪುನರಾವರ್ತಿತ ಗರ್ಭಪಾತ, ಅಕಾಲಿಕ ಜನನ ಮತ್ತು ಹೆರಿಗೆಯ ಅಪಾಯವು ಹೆಚ್ಚಾಗುತ್ತದೆ.

ಡಬಲ್ ಗರ್ಭಾಶಯದ ಕಾರಣ:

ಡಬಲ್ ಗರ್ಭಾಶಯದ ಸಮಸ್ಯೆಯು ಆನುವಂಶಿಕವಾಗಿರುತ್ತದೆ. ಅಂದರೆ ಹುಟ್ಟಿನಿಂದಲೇ ಎರಡು ಗರ್ಭಾಶಯದ ಸ್ಥಿತಿಯು ಭ್ರೂಣವು ಗರ್ಭಾಶಯದಲ್ಲಿದ್ದಾಗ ಮಾತ್ರ ಸಂಭವಿಸಬಹುದು. ಮಹಿಳೆಯರು ಆನುವಂಶಿಕವಾಗಿ ಎರಡು ಗರ್ಭಾಶಯವನ್ನು ಪಡೆಯುತ್ತಾರೆ. ಡಬಲ್ ಗರ್ಭಾಶಯದೊಂದಿಗಿನ ಅನೇಕ ಮಹಿಳೆಯರು ಸಾಮಾನ್ಯ ಲೈಂಗಿಕ ಜೀವನ ಅಥವಾ ಗರ್ಭಧಾರಣೆ ಅಥವಾ ಹೆರಿಗೆಯನ್ನು ಹೊಂದಿರುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಡಬಲ್ ಗರ್ಭಾಶಯ ಮತ್ತು ಗರ್ಭಾಶಯದ ಬೆಳವಣಿಗೆಯು ಬಂಜೆತನ, ಗರ್ಭಪಾತ, ಅಕಾಲಿಕ ಹೆರಿಗೆ ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಡಬಲ್ ಗರ್ಭಾಶಯವನ್ನು ಹೇಗೆ ಗುರುತಿಸುವುದು:

ಹೆಚ್ಚಿನ ಮಹಿಳೆಯರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ, ಆದರೆ ಅವರು ಕೆಲವು ರೋಗಲಕ್ಷಣಗಳನ್ನು ಅನುಭವಿಸಿದರೆ ಡಬಲ್ ಗರ್ಭಾಶಯದ ಸಾಧ್ಯತೆಯಿದೆ. ಉದಾಹರಣೆಗೆ ಮಹಿಳೆಗೆ ಆಗಾಗ್ಗೆ ಗರ್ಭಪಾತಗಳು, ಅತಿಯಾದ ರಕ್ತಸ್ರಾವ, ಋತುಚಕ್ರದ ಸಮಯದಲ್ಲಿ ತೀವ್ರವಾದ ನೋವು ಇದ್ದರೆ ಅವರು ಖಂಡಿತವಾಗಿಯೂ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಬೇಕು. ಶ್ರೋಣಿಯ ಪರೀಕ್ಷೆ, ಗರ್ಭಾಶಯದ ಎಕ್ಸ್-ರೇ, ಅಲ್ಟ್ರಾಸೌಂಡ್ ಮತ್ತು ಎಂಆರ್​ಐನಂತಹ ಕೆಲವು ಪರೀಕ್ಷೆಗಳ ಸಹಾಯದಿಂದ ವೈದ್ಯರು ರೋಗನಿರ್ಣಯ ಮಾಡುತ್ತಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net