ಮುಂಬೈ: ಬಾಲಿವುಡ್ ಸಿನಿಮಾಗಳಲ್ಲಿ ಡೈನಾಮಿಕ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ಕಲ್ಕಿ ಕೊಚ್ಲಿನ್(Kalki Koechlin) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ನಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಏಕಕಾಲದಲ್ಲಿ ಅನೇಕರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಕಾಲ ಒಂದಿತ್ತು ಎಂದು ಬಹಿರಂಗಪಡಿಸಿದ್ದಾರೆ.
ಇದನ್ನು ಓದಿ: ಬಿಗ್ಬಾಸ್ ಮನೆಗೆ ರಾಖಿ ಸಾವಂತ್ ಎಂಟ್ರಿ; ನೆಟ್ಟಿಗರು ಹೇಳಿದ್ದೇನು ಗೊತ್ತಾ? | Big Boss
ನಟಿ ಕಲ್ಕಿ ಕೊಚ್ಲಿನ್ ಅವರಿಗೆ ಏಕಕಾಲದಲ್ಲಿ ಅನೇಕರ ಜತೆ ಡೇಟಿಂಗ್ ಮಾಡುವುದರ ಬಗ್ಗೆ ಕೇಳಬಹುದೆ ಎಂದು ಹೇಳಿದಾಗ ನಟಿ ಅದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.ಈಗ ನಾನು ಮದುವೆಯಾಗಿದ್ದೇನೆ, ನನಗೆ ಮಗುವಿದೆ. ಈಗ ಅದೆಲ್ಲ ಮಾಡಲು ಸಮಯ ಇರುವುದಿಲ್ಲ. ಸಂಗಾತಿಯನ್ನು ನೋಡಲು ಸಮಯವಿಲ್ಲ! ಆದರೆ ನಾನು ಈ ಹಿಂದೆ ಇಂತಹ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಆದರೆ ಅದಕ್ಕೆ ತಮ್ಮದೆ ಆದ ಬಾರ್ಡರ್ ಮತ್ತು ರೂಲ್ ತಿಳಿದಿರುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಆ ಜೀವನದ ಅವಧಿಯು ತುಂಬಾ ವಿಭಿನ್ನವಾಗಿತ್ತು. ನಾನು ಚಿಕ್ಕವಳಾಗಿದ್ದೆ, ನನಗೆ ಮದುವೆಯಾಗುವ ಯೋಚನೆಯೇ ಇರಲಿಲ್ಲ ಜತೆಗೆ ಆಸಕ್ತಿಯೂ ಇರಲಿಲ್ಲ. ಕುಟುಂಬ ಮತ್ತು ಮಕ್ಕಳ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಮುಖ್ಯ ವ್ಯಕ್ತಿಗಳಾಗಿರಬೇಕು ಎಂಬುದು ನನ್ನ ಆಲೋಚನೆಯಾಗಿತ್ತು. ಅದು ಒಂದು ಪ್ರಯೋಗದಂತೆಯೇ ಇರಬೇಕು. ಒಂದು ಸಂಬಂಧ ದೀರ್ಘಕಾಲ ಉಳಿಯುವುದರ ಬಗ್ಗೆ ನಂಬಿಕೆ ಇರಲಿಲ್ಲ ಎಂದು ತಿಳಿಸಿದರು.
ಅದೇ ಸಮಯದಲ್ಲಿ ಬ್ರೇಕಪ್ ವಿಚಾರವಾಗಿ ಮಾತನಾಡಿದ ನಟಿ, ಕ್ಲೀನ್ ಬ್ರೇಕಪ್ ಮಾಡಿಕೊಳ್ಳುವುದು ಖಂಡಿತವಾಗಿಯೂ ಉತ್ತಮ ಎಂದು ನಾನು ಭಾವಿಸುತ್ತೇನೆ. ಆದರೆ ಅದು ತುಂಬಾ ಕಷ್ಟ, ಆದ್ದರಿಂದ ನೀವು ಬ್ರೇಕಪ್ ಮಾಡಿಕೊಳ್ಳಲು ಬಯಸಿದಾಗ ತುಂಬಾ ಖಚಿತವಾಗಿರಿ ಎಂದು ಹೇಳಿದರು.
ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗಿನ ವಿಚ್ಛೇದನದ ಬಳಿಕ ನಟಿ ಕಲ್ಕಿ ಕೊಚ್ಲಿನ್ ಹರ್ಷ್‌ಬರ್ಗ್ ಎಂಬುವವರನ್ನು ವಿವಾಹವಾದರು. ಈ ದಂಪತಿಗೆ ಸಫೊ ಎಂಬ ಮಗಳಿದ್ದಾಳೆ. ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ವಾಸಿಸುತ್ತಿದ್ದಾರೆ. ಕಲ್ಕಿ ಕೊನೆಯದಾಗಿ ಗೋಲ್ಡ್ ಫಿಶ್ ಮತ್ತು ಖೋ ಗಯೇ ಹಮ್ ಕಹಾನ್ ನಲ್ಲಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್)
ಭಾರತದಲ್ಲಿ ‘ದಿ ಲೆಜೆಂಡ್ ಆಫ್ ಮೌಲಾ ಜಟ್’ ರಿಲೀಸ್ ಆಗುವುದಿಲ್ಲ; ಈ ನಿರ್ಧಾರಕ್ಕೆ ಕಾರಣ ಹೀಗಿದೆ.. | Cinema