

ಮುಂಬೈ: ನಟಿ ರಾಖಿ ಸಾವಂತ್, ಆಕೆಯ ಮಾಜಿ ಪತಿ ಆದಿಲ್ ಖಾನ್ ದುರಾನಿ ಸಂಬಂಧದ ವಿವಾದದ ಬಳಿಕ ಬಹಳ ದಿನಗಳಿಂದ ಕಣ್ಮರೆಯಾಗಿದ್ದಳು. ಈ ಮಧ್ಯೆ ರಾಖಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರ ಸ್ಥಿತಿ ತೀರಾ ಚಿಂತಾಜನಕವಾಗಿದೆ, ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಇಷ್ಟು ದಿನ ಜನಮನದಿಂದ ದೂರ ಉಳಿದಿದ್ದ ರಾಖಿ ಸಾವಂತ್ ಇದೀಗ ಅದೇ ಹಳೆ ಜೋಶ್ ಮತ್ತು ಎನರ್ಜಿ ಮೂಲಕ ಬಿಗ್ಬಾಸ್(Big Boss) ಮನೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.
ಹೌದು ಈ ಬಾರಿ ದಿಢೀರ್ ಪ್ರತ್ಯಕ್ಷ ಆಗಿರುವುದು ಬಿಗ್ಬಾಸ್ ಮನೆಗೆ. ಅರೆ... ಬಿಗ್ಬಾಸ್ ಕನ್ನಡ ಸೀಸನ್ ಭಾನುವಾರ(ಸೆಪ್ಟೆಂಬರ್ 29) ದಿಂದ ಆರಂಭವಾಗಲಿದೆ. ಅದರಲ್ಲಿ ರಾಖಿ ಸಾವಂತ್ ಬರುತ್ತಿರಬಹುದು ಎಂದು ಯೋಚಿಸುತ್ತಿದ್ದೀರಾ.? ನಿಮ್ಮ ಗೆಸ್ ರಾಂಗ್ ಏಕೆಂದರೆ ರಾಖಿ,ರಿತೇಶ್ ದೇಶ್ಮುಖ್ ನಡೆಸಿಕೊಡುತ್ತಿರುವ ಮರಾಠಿ ಬಿಗ್ಬಾಸ್ ಮನೆಗೆ ದಿಢೀರ್ ಎಂಟ್ರಿ ಕೊಟ್ಟಿದ್ದಾರೆ.
ಈಗ ಈ ಬಿಗ್ಬಾಸ್ ಮನೆಗೆ ರಾಖಿ ಸಾವಂತ್ ಎಂಟ್ರಿ ಕೊಡುತ್ತಿರುವ ಪ್ರೋಮೋ ಬಿಡುಗಡೆಯಾಗಿದೆ. ಇದರಲ್ಲಿ ರಾಖಿ ಡ್ಯಾನ್ಸ್ ಮಾಡುತ್ತಾ ಹಲೋ ಬಿಗ್ ಬಾಸ್ ನಾನು ಮತ್ತೆ ಬಂದಿದ್ದೇನೆ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಜತೆಗೆ ಕಂಟೆಸ್ಟೆಂಟ್ ನಿಕ್ಕಿ ತಾಂಬೋಲಿಯನ್ನು ಗೇಲಿ ಮಾಡುತ್ತಾಳೆ.ಅದನ್ನು ಕೇಳಿದ ನಿಕ್ಕಿ ಮುಖ ಗಂಟಿಕ್ಕಿಕೊಳ್ಳುವುದನ್ನು ಕಾಣಬಹುದಾಗಿದೆ.
ಇಷ್ಟು ದಿನಗಳ ನಂತರ ರಾಖಿ ಸಾವಂತ್ ಅವರನ್ನು ಪ್ರೋಮೊದಲ್ಲಿ ನೋಡಿ ನೆಟ್ಟಿಗರು ಸಂತೋಷದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಅಸಲಿ ನಾಟಕದ ರಾಣಿಯ ಆಗಮನ, ಯಾವುದೇ ಸ್ಟಾರ್ಗಾಗಿ ಇಷ್ಟು ದಿನ ಕಾಯಲಿಲ್ಲ, ರಾಖಿ ಎಂದರೆ ಬೆಂಕಿ, ನಗುವ ಎಮೋಜಿಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ನಿಕ್ಕಿ ತಾಂಬೋಲಿ ಮತ್ತು ರಾಖಿ ಸಾವಂತ್ ಬಿಗ್ ಬಾಸ್ ಸೀಸನ್ 14ರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)