

ನವದೆಹಲಿ: ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ತಮ್ಮ ಮಗನಿಗೆ ಐಫೋನ್ ಕೊಡಿಸದೇ ಇರಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು. ಅವರ ಹೆಸರು ಫುಟ್‌ಬಾಲ್ ಆಡದ ಅಥವಾ ಅದನ್ನು ನೋಡದ ವ್ಯಕ್ತಿಗಳಿಗೂ ತಿಳಿದಿರುತ್ತದೆ. ಪೋರ್ಚುಗಲ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಅದ್ಭುತ ಆಟದಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ರೊನಾಲ್ಡೊ ಅವರನ್ನು ಪ್ರಸ್ತುತ ಫುಟ್ಬಾಲ್ ಜಗತ್ತಿನ ಅತ್ಯುತ್ತಮ ಆಟಗಾರ ಎಂದು ಕರೆಯಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಮಗನ ಕುರಿತು ಹೇಳಿರುವ ಥ್ರೋಬ್ಯಾಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂದರ್ಶನವೊಂದರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಮಗನಿಗೆ ಇದುವರೆಗೂ ಐಫೋನ್ ಕೊಡಿಸಲಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಕಾರಣವನ್ನು ಸ್ಪಷ್ಟವಾಗಿ ತಿಳಿಸಿರುವು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಜ ಹೇಳಬೇಕೆಂದರೆ ಇದುವರೆಗೂ ನನ್ನ ಮಗನಿಗೆ ನಾನಿನ್ನೂ ಐಫೋನ್ ಕೊಡಿಸಿಲ್ಲ. ನನಗೆ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇದ್ದಾರೆ. ಏಕೆ ಜೂನಿಯರ್ ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ಇಲ್ಲ ಎಂದು ಅಭಿಮಾನಿಗಳು ಯಾವಗಲೂ ಪ್ರಶ್ನಿಸುತ್ತಲೇ ಇರುತ್ತಾರೆ.
ನನ್ನ ಮಗ 2020ರಲ್ಲಿ ಸಿಕ್ರೇಟ್ ಆಗಿ ಇನ್ಸ್ಟಾಗ್ರಾಮ್ ಅಕೌಂಟ್ ಕ್ರಿಯೆಟ್ ಮಾಡಿದ್ದ. ಅವನಿಗ 1 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಇದ್ದರು. ಒಂದು ಬಾರಿ ನನಗೆ ಅವನು ಇನ್ಸ್ಟಾಗ್ರಾಮ ಖಾತೆ ತೆರೆದಿರುವುದು ತಿಳಿಯಿತು. ತಕ್ಷಣವೇ ನಾನು ಅದನ್ನು ಡಿಲೀಟ್ ಮಾಡಿದೆ. ಈಗ ಅವನಿಗೆ 14 ವರ್ಷ ಇಂದಿಗೂ ಅವನ ಬಳಿ ಐಫೋನ್ ಇಲ್ಲ.
ನನ್ನ ಮಗನಿಗೆ ಅವನು ಬಯಸಿದ್ದನ್ನು ಪಡೆಯುವುದು ಸುಲಭವಲ್ಲ ಎಂದು ಅರಿವಾಗಬೇಕು. ಹಾರ್ಡ್ವರ್ಕ್ಗೆ ಇರುವ ಪ್ರಾಮುಖ್ಯತೆ ಅವನಿಗೆ ಅರ್ಥವಾಗಬೇಕು. ಗುರಿ ತಲುಪಲು ಅವನಿಗಿರುವ ಸಾಮರ್ಥ್ಯದ ಬಗ್ಗೆ ತಿಳಿಯಬೇಕು. ಅದರವ ಹೊರತಾಗಿ ಟೆಕ್ನಾಲಜಿ ಗೀಳಿಗೆ ಸಿಲುಕಬಾರದು ಎಂಬುದು ನನ್ನ ಉದ್ದೇಶ. ಅವನಿಗೆ ಇದೆಲ್ಲಾ ಅರ್ಥವಾದ ಬಳಿಕ ಐಫೋನ್ ಕೊಡಿಸಲು ಕಾಯುತ್ತಿದ್ದೇನೆ ಎಂದು ಹೇಳಿದರು. (ಏಜೆನ್ಸೀಸ್)