ಮುಂಬೈ: ಫವಾದ್ ಖಾನ್ ಮತ್ತು ಮಹಿರ್ ಖಾನ್ ಅಭಿನಯದ ಪಾಕಿಸ್ತಾನಿ ಚಿತ್ರ ‘ದಿ ಲೆಜೆಂಡ್ ಆಫ್ ಮೌಲಾ ಜಟ್’ ಭಾರತೀಯ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವುದಿಲ್ಲ. ಅಕ್ಟೋಬರ್ 2ರಂದು ಈ ಸಿನಿಮಾ(Cinema) ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಭಾರತದಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದರೆ, ದಶಕದಲ್ಲಿ ಭಾರತದಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತಿತ್ತು. ಆದರೆ ಬಿಡುಗಡೆ ದಿನಾಂಕ ಘೋಷಣೆಯಾದ ನಂತರ ದಿ ಲೆಜೆಂಡ್ ಆಫ್ ಮೌಲಾ ಜಟ್ ಸಿನಿಮಾದ ವಿರುದ್ಧ ಪ್ರತಿಭಟನೆಗಳು ಆರಂಭವಾಗಿದೆ.
ಇದನ್ನು ಓದಿ: ರಣಬೀರ್ ಕಪೂರ್ನನ್ನು ಮೆಚ್ಚಿಕೊಂಡ ಮೃಣಾಲ್ ಠಾಕೂರ್; ನಟಿ ಹೇಳಿದ್ದು ಹೀಗೆ.. | Bollywood
ದಿ ಲೆಜೆಂಡ್ ಆಫ್ ಮೌಲಾ ಜಟ್ ಪಾಕಿಸ್ತಾನಿ ಕ್ಲಾಸಿಕ್ ಚಿತ್ರ ಮೌಲಾ ಜಟ್‌ನ ರಿಮೇಕ್ ಆಗಿದೆ. ಚಿತ್ರದ ಕಥೆಯು ನೂರಿ ನಾಟ್ ಮತ್ತು ಸ್ಥಳೀಯ ನಾಯಕ ಮೌಲಾ ಜಟ್ ನಡುವಿನ ಪೈಪೋಟಿಯ ಸುತ್ತ ಸುತ್ತುತ್ತದೆ. ದಿ ಲೆಜೆಂಡ್ ಆಫ್ ಮೌಲಾ ಜಟ್ 2022ರಲ್ಲಿ ಪಾಕಿಸ್ತಾನ ಸೇರಿದಂತೆ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಈ ಹಿಟ್ ಸಿನಿಮಾಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. 2016ರ ಉರಿ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನಿ ಚಲನಚಿತ್ರಗಳು ಮತ್ತು ಪಾಕಿಸ್ತಾನಿ ಕಲಾವಿದರ ಕೃತಿಗಳ ಪ್ರದರ್ಶನವನ್ನು ನಿಷೇಧಿಸಲಾಯಿತು. ಅನೇಕ ಕಲಾವಿದರು ಈ ನಿರ್ಧಾರವನ್ನು ಸ್ವಾಗತಿಸಿದರು.
ಪಾಕ್ನಲ್ಲೂ ಭಾರತೀಯ ಸಿನಿಮಾ(Cinema)ಗಳಿಗೆ ನಿಷೇಧ:
2019 ರಿಂದ ಪಾಕಿಸ್ತಾನವು ತನ್ನ ದೇಶದಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ನಿಷೇಧಿಸಿದೆ. ಆ ನಂತರ ಅಲ್ಲಿ ಯಾವುದೇ ಭಾರತೀಯ ಚಿತ್ರ ಬಿಡುಗಡೆಯಾಗಿಲ್ಲ. ಫವಾದ್ ಮತ್ತು ಮಹಿರಾ ಭಾರತದಲ್ಲಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಇಬ್ಬರೂ ನಟರು ಭಾರತದ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಉರಿ ದಾಳಿಯ ನಂತರ ಭಾರತ-ಪಾಕಿಸ್ತಾನದ ಸಿನಿಜಗತ್ತಿನಲ್ಲಿ ಹಲವು ಬದಲಾವಣೆಯಾಗಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ವಿರೋಧ:
ಈ ತಿಂಗಳ ಆರಂಭದಲ್ಲಿ ಎಂಎನ್‌ಎಸ್ ಸಿನಿಮಾ ವಿಭಾಗದ ಅಧ್ಯಕ್ಷ ಅಮಿ ಖೋಪ್ಕರ್, ನಾವು ಭಾರತದಲ್ಲಿ ಯಾವುದೇ ಪಾಕಿಸ್ತಾನಿ ಚಲನಚಿತ್ರ(Cinema) ಅಥವಾ ನಟರನ್ನು ಮನರಂಜನೆ ಮಾಡುವುದಿಲ್ಲ. ಈ ಚಿತ್ರ ಬಿಡುಗಡೆಯಾಗುವುದಿಲ್ಲ ಎಂದು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಒಂದು ವೇಳೆ ಪಾಕಿಸ್ತಾನದ ಸಿನಿಮಾಗಳು ಬಿಡುಗಡೆಯಾದರೆ ಪ್ರತಿಭಟನೆ ನಡೆಸಬೇಕಾಗುತ್ತದೆ.(ಏಜೆನ್ಸೀಸ್)
Bollywood | ಪಟೌಡಿ ಅರಮನೆಯನ್ನು ಸೈಫ್ ಅಲಿ ಖಾನ್ ಮ್ಯೂಸಿಯಂ ಮಾಡುವುದು ನಿಜವೇ; ಬಿಟೌನ್ ನಟ ಹೇಳಿದ್ದೇನು?