ನವದೆಹಲಿ: ಯುವರಾಜ್ ಸಿಂಗ್ ಟೀಮ್ ಇಂಡಿಯಾ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದು, ಭಾರತ ಕ್ರಿಕೆಟ್ ತಂಡಕ್ಕೆ ಅವರ ಸೇವೆ ಅನನ್ಯ ಎಂದು ಹೇಳಿದರೆ ತಪ್ಪಾಗಲಾರದು. ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ದಾಖಲೆ ಬರೆದಿದ್ದ ಯುವರಾಜ್ ಈಗಲೂ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಆ ಕ್ಷಣ ಹಾಗೆಯೇ ಉಳಿದಿದೆ.
ವೇಗಿ ಆ್ಯಂಡ್ರಯೂ ಫ್ಲಿಂಟಾಪ್ ಜೊತೆ ಕಿರಿಕ್ ನಂತರ 19ನೇ ಓವರ್ನಲ್ಲಿ ಸ್ಟುವರ್ಟ್ ಬ್ರಾಡ್ ಎಸೆದ ಅಷ್ಟು ಎಸೆತಗಳನ್ನು ಸಿಕ್ಸರ್ಗಟ್ಟಿದ ಯುವರಾಜ್ ಈಗಲೂ ಕ್ರೀಡಾಭಿಮಾನಿಗಳಿಗೆ ಹಾಟ್ ಫೇವರಿಟ್ ಎನ್ನಿಸಿದ್ದಾರೆ. ಈಗಲೂ ಅನೇಕ ಜನ ಮಾಜಿ ಕ್ರಿಕೆಟಿಗರು ಈ ಕ್ಷಣವನ್ನು ಸ್ಮರಿಸುತ್ತಿದ್ದು, ಈ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಮಾತನಾಡಿದ್ದಾರೆ.
ಇದನ್ನೂ ಓದಿ: ನಾನು ಡಿಸಿಪಿ ಮಗ, ಸಿಎಂ ಸಿದ್ದರಾಮಯ್ಯ ಸಂಬಂಧಿ ಎಂದು ಹೇಳಿ ಸೆಕ್ಯೂರಿಟಿ ಮೇಲೆ ಹಲ್ಲೆ; ವಿಡಿಯೋ ವೈರಲ್
ಆ ಕ್ಷಣವನ್ನು ನಾನು ಒಪ್ಪಿಕೊಳ್ಳಬೇಕಿದೆ. ಆ ಓಬವರ್ ಎಸೆದ ಬಳಿಕ ನಾನು ಹಿಂದೆ ತಿರುಗಿ ನೋಡಲು ಹೋಗಿಲ್ಲ. ಆ ದಿನ ನಾನು ನೋ ಬಾಲ್ನಿಂದ ತಪ್ಪಿಸಿಕೊಂಡೆ. ಇಲ್ಲಾಂದ್ರ ಯುವರಾಜ್ಗೆ ಒಂದೇ ಓವರ್ನಲ್ಲಿ ಏಳು ಸಿಕ್ಸರ್ ಹೊಡೆಯುವ ತಾಕತ್ ಇತ್ತು ಎಂಬುದು ಸ್ಪಷ್ಟವಾಗಿ ಸಾಬೀತಾಯಿತು. ನಾನು ಆ ಪಂದ್ಯದ ಹೈಲೈಟ್ಸ್ ಸಹ ಇಂದಿಗೂ ವೀಕ್ಷಿಸಿಲ್ಲ. ಆದ್ದರಿಂದ 17 ವರ್ಷಗಳ ನಂತರ ಅವಕಾಶಕ್ಕಾಗಿ ಧನ್ಯವಾದಗಳು ಎಂದು ವೇಗಿ ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಯುವರಾಜ್ ಸಿಂಗ್ ಆರು ಸಿಕ್ಸರ್ ಸಿಡಿಸಿದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದರು. ಇದನ್ನು ಕಂಡು ಥ್ರಿಲ್ ಆಗಿದ್ದ ಕ್ರೀಡಾಭಿಮಾನಿಗಳು ಈಗಲೂ ಆ ಕ್ಷಣವನ್ನು ನೆನೆಪಿಟ್ಟುಕೊಂಡಿರುವುದಾಗಿ ಕಮೆಂಟ್ ಮಾಡಿದ್ದರು.