ಕೋಟೆಯನ್ನು ಸದ್ದಿಲ್ಲದೆ ಭೇದಿಸಿದ ಗುರು : ಸಂತೋಷ್ ಕುಮಾರ್ ಅಭಿಮತ

New Project (17)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಸಹಸ್ರಾರು ವರ್ಷಗಳಿಂದ ದೇವಸ್ಥಾನಗಳಿಗೆ ಪ್ರವೇಶ ನೀಡದೆ ಮೂಢನಂಬಿಕೆ, ಕಂದಾಚಾರದ ಮೂಲಕ ಧಾರ್ಮಿಕ ಶೋಷಣೆ ಮಾಡುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳು ಪರಂಪರಾಗತವಾಗಿ ರಕ್ಷಿಸಿಕೊಂಡು ಬಂದ ಬಲಿಷ್ಠವಾದ ಕೋಟೆಯನ್ನು ನಾರಾಯಣ ಗುರು ಸದ್ದಿಲ್ಲದೆ ಭೇದಿಸಿದರು ಎಂದು ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲೆ ಪ್ರಾಂಶುಪಾಲ ಸಂತೋಷ್ ಕುಮಾರ್ ತಿಳಿಸಿದರು.

ಯುವವಾಹಿನಿ ಬಂಟ್ಟಾಳ ಘಟಕ ಸಾಂಸ್ಕೃತಿಕ ನಿರ್ದೇಶಕ ಧನುಷ್ ಮದ್ವ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 38 ಮಾಲಿಕೆಯಲ್ಲಿ ಮಾತನಾಡಿದರು.

ಶ್ರೀ ಆದಿಗುರು ದತ್ತಸಾಯಿ, ಆದಿಶಕ್ತಿ ದುರ್ಗಾಪರಮೇಶ್ವರಿ, ಪರಿವಾರ ಶಕ್ತಿಗಳ ಕ್ಷೇತ್ರ ಬಸವನಗುಡಿ ಪೂಂಜಾಲಕಟ್ಟೆ ಧರ್ಮದರ್ಶಿ ಕೃಷ್ಣಪ್ರಸಾದ್ ಶಾಂತಿ, ಯುವವಾಹಿನಿ ಬಂಟ್ವಾಳ ಘಟಕ ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಧುಸೂದನ್ ಮಧ್ವ, ಕಿರಣ್ ಪೂಂಜರಕೋಡಿ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೊಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ಅರುಣ್ ಮಹಾಕಾಳಿಬೆಟ್ಟು, ರಾಜೇಶ್ ಸುವರ್ಣ, ಸಂಘಟನಾ ಕಾರ್ಯದರ್ಶಿ ಉದಯ್ ಮೆನಾಡ್, ಸದಸ್ಯರಾದ ನಾಗೇಶ್ ಏಲಬೆ, ಯಶೋಧರ ಕಡಂಬಲ್ಕೆ, ಸುಲತಾ ಸಾಲ್ಯಾನ್, ಹರೀಶ್ ಅಜೆಕಲಾ, ಪ್ರಶಾಂತ್ ಏರಮಲೆ, ಜಗದೀಶ್ ತುಂಬೆ, ಸುದೀಪ್ ಸಾಲ್ಯಾನ್, ಯತೀಶ್ ಬೊಳ್ಳಾಯಿ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net