ಪ್ರಕೃತಿ ಅವಲಂಬಿಸದೆ ಬದುಕು ಅಸಾಧ್ಯ : ಮದನ್ ಅನಿಸಿಕೆ

New Project (6)
Published on

ಪುತ್ತೂರು ಗ್ರಾಮಾಂತರ: ಅರಣ್ಯ ಮತ್ತು ಪ್ರಕೃತಿಯನ್ನು ಅವಲಂಬಿಸದೆ ಯಾರೂ ಬದುಕಲು ಸಾಧ್ಯವಿಲ್ಲ. ದ.ಕ ಜಿಲ್ಲೆಯವರಾದ ನಾವೆಲ್ಲರೂ ಪ್ರಕೃತಿ ಆರಾಧಕರಾಗಿದ್ದು, ಹಿಂದಿನ ಪದ್ಧತಿ, ಆಚರಣೆಗಳಿಗೆ ಅದರದ್ದೆ ಆದ ವೈಜ್ಞಾನಿಕ ಕಾರಣ ಮತ್ತು ಮಹತ್ವ ಇದೆ. ಈ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ನಾವು ಅರಣ್ಯ ಉಳಿಸಿ ಬೆಳೆಸಬೇಕು. ಕಾಡು ನಾಶವಾದರೆ ಪ್ರಾಣಿ ಸಂಕುಲ ನಾಶವಾಗುತ್ತದೆ ಎಂದು ಪಾಣಾಜೆ ಉಪವಲಯ ಅರಣ್ಯಾಧಿಕಾರಿ ಮದನ್ ಹೇಳಿದರು.

ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಮಹಿಳಾ ಮತ್ತು ಮಕ್ಕಳ ಸ್ನೇಹಿ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಅರಣ್ಯ ದಿನಾಚರಣೆ-ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಸಂಪತ್ತು ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.

ಬೆಟ್ಟಂಪಾಡಿ ಗ್ರಾ.ಪಂ.ಸದಸ್ಯ ವಿನೋದ್ ರೈ ಗುತ್ತು ಮಾತನಾಡಿ, ಪರಿಸರದ ಸಮತೋಲನ ಕಾಪಾಡಲು ಕಾಡು ಬೆಳೆಸಬೇಕಾಗಿದೆ. ಅರಣ್ಯ ಬೆಳೆಸಿದರೆ ಪರಿಸರ ಸಂರಕ್ಷಣೆ ಮಾಡಲು ಸಾಧ್ಯ ಎಂದರು.

ಬೆಟ್ಟಂಪಾಡಿ ಗ್ರಾ.ಪಂ.ಸದಸ್ಯರಾದ ಮಹಾಲಿಂಗ ನಾಯ್ಕ, ಮೊಯ್ದುಕುಂಞಿ, ಸುಮಲತಾ, ಉಮಾವತಿ, ಪಂಚಾಯಿತಿ ಸಿಬ್ಬಂದಿ ಸಂದೀಪ್, ಚಂದ್ರಾವತಿ, ಗ್ರಂಥಪಾಲಕಿ ಪ್ರೇಮಲತಾ, ಗ್ರಾಮ ಆಡಳಿತಾಧಿಕಾರಿ ಕಚೇರಿ ಸಿಬ್ಬಂದಿ ಕಾವ್ಯ, ಎಲ್‌ಸಿಆರ್‌ಪಿಗಳಾದ ಶಕುಂತಳಾ, ಲೋಲಾಕ್ಷಿ, ಕೃಷಿಸಖಿ ಸೌಮ್ಯ, ಪಶುಸಖಿ ಉಮಾವತಿ ಯು., ಅರಣ್ಯ ಇಲಾಖೆಯ ಸಿಬ್ಬಂದಿ ಸುನೀಶ್ ಬಾಬು, ದೇವಪ್ಪ, ಪ್ರಜ್ಞಾ ಬಿ., ಸಂಜೀವಿನಿ ಒಕ್ಕೂಟದ ಚೈತ್ರಾ ಮತ್ತಿತರರು ಇದ್ದರು. ಗ್ರಾ.ಪಂ.ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net