ಪುತ್ತೂರು ಗ್ರಾಮಾಂತರ: ಸಾರ್ವಜನಿಕ ಸ್ಥಳದ ಚರಂಡಿಗೆ ತ್ಯಾಜ್ಯ ಎಸೆದ ವ್ಯಕ್ತಿಗೆ ನಿಡ್ಪಳ್ಳಿ ಗ್ರಾಪಂ ದಂಡ ವಿಧಿಸಿ ತ್ಯಾಜ್ಯವನ್ನು ಆತನಿಂದಲೇ ತೆರವುಗೊಳಿಸಿದೆ. ಪಾದಚಾರಿಯೊಬ್ಬರು ಶುಕ್ರವಾರ ತ್ಯಾಜ್ಯ ತುಂಬಿದ ಕಟ್ಟನ್ನು ನಿಡ್ಪಳ್ಳಿ ಗ್ರಾಮದ ವಿಜಯನಗರದಲ್ಲಿ ರಸ್ತೆ ಬದಿ ಚರಂಡಿಗೆ ಎಸೆದಿದ್ದು, ಇದನ್ನು ಗಮನಿಸಿದ್ದ ಸಾರ್ವಜನಿಕರು ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿದ್ದರು. ಆ ವ್ಯಕ್ತಿಯನ್ನು ಪತ್ತೆಹಚ್ಚಿ ಪಂಚಾಯಿತಿಗೆ ಕರೆಸಿ, ಆತನಿಂದ ತ್ಯಾಜ್ಯ ತೆಗೆಸಿದ್ದಲ್ಲದೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಸಂಧ್ಯಾಲಕ್ಷ್ಮೀ ಹೇಳಿದ್ದಾರೆ.
ಆಳ್ವಾಸ್‌ನ ಪುರುಷ, ಮಹಿಳೆಯರ ತಂಡ ಚಾಂಪಿಯನ್ : ಮಂಗಳೂರು ವಿವಿ ಅಂತರ್ ಕಾಲೇಜು ಖೋಖೋ ಪಂದ್ಯಾಟ