ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಪುರುಷ ಮತ್ತು ಮಹಿಳೆಯರ ಖೋಖೋ ಟೂರ್ನಮೆಂಟ್-2025ರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಫಿ ಸತತ 17ನೇ ಬಾರಿ ಹಾಗೂ ಮಹಿಳೆಯರ ತಂಡ ಎಚ್.ವಿ. ಕಮಲೇಶ್ ರೋಲಿಂಗ್ ಟ್ರೋಫಿಯನ್ನು ಸತತ 14ನೇ ಬಾರಿ ಪಡೆದು ಚಾಂಪಿಯನ್ ಪ್ರಶಸ್ತಿ ಪಡೆದಿದೆ.
ಪುರುಷರ ವಿಭಾಗದಲ್ಲಿ ಆಳ್ವಾಸ್ ಪುರುಷರ ಖೋಖೋ ತಂಡ 27-5 ಅಂಕಗಳ ಅಂತರದಿಂದ ಪುತ್ತೂರಿನ ವಿವೇಕಾನಂದ ಕಾಲೇಜು ಎದುರು ಗೆಲುವು ಸಾಧಿಸಿದೆ. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ತಂಡ ಏಕಪಕ್ಷೀಯವಾಗಿ 18- 0 ಅಂಕಗಳ ಅಂತರದಲ್ಲಿ ಬೆಳ್ತಂಗಡಿ ಜಿಎಫ್‌ಜಿಸಿ ಕಾಲೇಜು ಎದುರು ಗೆಲುವು ಸಾಧಿಸಿ ಎರಡು ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆಯಿತು.
ಪುರುಷರ ವಿಭಾಗದ ಖೋಖೋ ಚಾಂಪಿಯನ್‌ಷಿಪ್‌ನಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿಗೆ 4ನೇ ಸ್ಥಾನ, ಹಂಪನಕಟ್ಟೆ ವಿ.ವಿ ಕಾಲೇಜಿಗೆ ತೃತೀಯ ಸ್ಥಾನ, ಪುತ್ತೂರಿನ ವಿವೇಕಾನಂದ ಕಾಲೇಜಿಗೆ ರನ್ನರ್‌ಅಪ್ ಪ್ರಶಸ್ತಿ ಮತ್ತು ಆಳ್ವಾಸ್ ಕಾಲೇಜಿಗೆ ಸತತ 17ನೇ ಬಾರಿ ಸಮಗ್ರ ಪ್ರಶಸ್ತಿ ಲಭಿಸಿತು. ಮಹಿಳೆಯರ ವಿಭಾಗದಲ್ಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿಗೆ ತೃತೀಯ ಸ್ಥಾನ, ಬೆಳ್ತಂಗಡಿ ಜಿಎಫ್‌ಜಿಸಿ ಕಾಲೇಜಿಗೆ ರನ್ನರ್‌ಅಪ್ ಪ್ರಶಸ್ತಿ ಮತ್ತು ಆಳ್ವಾಸ್ ಕಾಲೇಜಿಗೆ ಸತತ 14ನೇ ಬಾರಿ ಸಮಗ್ರ ಪ್ರಶಸ್ತಿ ಲಭಿಸಿತು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಡಾ.ಪ್ರಸನ್ನ ಕುಮಾರ್ ಬಿ.ಕೆ., ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಸದಾಕತ್, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ.ಮಧು ಜಿ.ಆರ್., ಆಳ್ವಾಸ್ ಹಣಕಾಸು ಅಧಿಕಾರಿ ಶಾಂತಾರಾಮ್ ಕಾಮತ್, ಆಳ್ವಾಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಿಲಕ್ ಶೆಟ್ಟಿ, ವಿವಿಧ ಕಾಲೇಜಿನ ಕ್ರೀಡಾ ನಿರ್ದೇಶಕರು, ಕ್ರೀಡಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಯಾ ಸೆಬಾಸ್ಟಿಯನ್ ನಿರೂಪಿಸಿದರು.
ವೈಯಕ್ತಿಕ ಪ್ರಶಸ್ತಿ
ವೈಯಕ್ತಿಕ ಪುರುಷರ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ನಿಖಿಲ್ ಬೆಸ್ಟ್ ಆಲ್ ರೌಂಡರ್ ಮತ್ತು ಪ್ರಮೋದ್ ಡಿ. ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದುಕೊಂಡರು. ವೈಯಕ್ತಿಕ ಮಹಿಳೆಯರ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಪ್ರೇಕ್ಷಾ ಬೆಸ್ಟ್ ಆಲ್‌ರೌಂಡರ್ ಮತ್ತು ಕವನ ಬೆಸ್ಟ್ ಚೇಸರ್ ಪ್ರಶಸ್ತಿ ಗಳಿಸಿದರು.

ಜವಾಬ್ದಾರಿ ನಿಭಾಯಿಸುವ ಮಹಿಳೆಗೆ ಸೂಕ್ತ ಸ್ಥಾನಮಾನ : ಜಯಲಕ್ಷ್ಮೀ ರಾಯಕೋಡ್ ಪ್ರತಿಪಾದನೆ
ಮಂಚಿಲದಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿ: ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿಕೆ