

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಉಳ್ಳಾಲ ನಗರಸಭಾ ವ್ಯಾಪ್ತಿಯ 31 ವಾರ್ಡ್ಗಳ ಅಭಿವೃದ್ಧಿಗಾಗಿ ನಗರೋತ್ಥಾನ, ಶಾಸಕರ ನಿಧಿ, ವಿವಿಧ ಇಲಾಖೆಯಿಂದ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಅದರ ಭಾಗವಾಗಿ ಮಂಚಿಲದಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದರು.
ಅಮೃತ ನಗರೋತ್ಥಾನ-4ನೇ ಹಂತದ ಉಳ್ಳಾಲ ನಗರಸಭೆ ಯೋಜನೆ ಅನುದಾನದಡಿ ಉಳ್ಳಾಲ ನಗರಸಭಾ ಮಂಚಿಲ 14ನೇ ವಾರ್ಡ್ ಸಹರ ರಸ್ತೆ ಕಾಂಕ್ರೀಟ್, ಒಳಚರಂಡಿ, ಡಾಂಬರು ಕಾಮಗಾರಿಗೆ ಬುಧವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನರಗಸಭೆ ಮಾಜಿ ಉಪಾಧ್ಯಕ್ಷ ಯು.ಪಿ.ಅಯೂಬ್ ಮಂಚಿಲ ಮಾತನಾಡಿ, ಶಾಸಕ ಖಾದರ್ ಅವರು ಸ್ಥಳೀಯ ಪ್ರದೇಶ ಅಭಿವೃದ್ಧಿಗೆ 48 ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದಾರೆ. ಅವರ ಸೂಚನೆ ಮೇರೆಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಮಂಚಿಲ ವಾರ್ಡ್ನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಉಳಿದ ಕೆಲಸ ಶೀಘ್ರ ನಡೆಯಲಿದೆ. ಕ್ರೈಸ್ತರು ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡುವ ಭರವಸೆ ನೀಡಿದ್ದಾರೆ. ಈ ವಾರದಲ್ಲೇ ರೈಲ್ವೆ ಟ್ರಾೃಕ್ ರಸ್ತೆಗೆ ಡಾಂಬಾರು ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಫ್ ಮುಖಂಡ ಖುಬೈಬ್ ತಂಙಳ್ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಶಶಿಕಲಾ, ನಮ್ಮೂರ ಧ್ವನಿ ಸೇವಾ ಸಂಘ ಅಧ್ಯಕ್ಷ ಉಮರ್ ಫಾರೂಕ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಇಬ್ರಾಹಿಂ, ಸದಸ್ಯರಾದ ಯು.ಎ.ಇಸ್ಮಾಯಿಲ್, ಅಝೀಝ್, ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ನಿರ್ಮಲಾ ಕಾನ್ವೆಂಟ್ ಮುಖ್ಯಸ್ಥರಾದ ಮುಖ್ಯಶಿಕ್ಷಕಿ ಅಲ್ಫೋನ್ಸಾ, ಮುಖ್ಯಶಿಕ್ಷಕಿ ಮಂಗಳಾ, ಮಂಚಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಅಶ್ರಫ್, ಸೋಮೇಶ್ವರ ಪುರಸಭಾ ಸದಸ್ಯರಾದ ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ, ಕಾಂಗ್ರೆಸ್ ಮುಖಂಡ ಮನ್ಸೂರ್ ಮಂಚಿಲ, ಸ್ಥಳೀಯರಾದ ಅಲ್ಫ್ರೆಡ್ ಡಿಸೋಜ, ತ್ವಾಹಾ, ಮನೋಜ್ ಸಾಲ್ಯಾನ್, ಜಾನೆಟ್, ಲವೀನಾ ಡಿಸೋಜ, ಟ್ವೀನಾ ಡಿಸೋಜ, ಅಹ್ಮದ್ ಪಕ್ವಾನ್, ಖಾದರ್, ಆರಿಫ್, ಅಝ್ಮಲ್, ರಿಚಾರ್ಡ್ ಡಿಸೋಜ, ಕಿರಣ್ ಡಿಸೋಜ, ಮಹಮ್ಮದ್ ರಫೀಕ್, ಉಮ್ಮರ್ ಫಾರೂಕ್ ಚೆಂಬುಗುಡ್ಡೆ, ತಾಜುದ್ದೀನ್, ಸಲೀಂ ಮಾರ್ಗತಲೆ, ಫೆಲಿಕ್ಸ್ ಡಿಸೋಜ, ರೋಶನ್ ಡಿಸೋಜ, ಸಂದೀಪ್ ಡಿಸೋಜ, ಲೆಸ್ಲಿ ಫೆರಾವೊ, ಸಲೀಂ ಮಾರ್ಗತಲೆ ಇನ್ನಿತರರು ಉಪಸ್ಥಿತರಿದ್ದರು.